Illegal BPL card holders: ಅಕ್ರಮ ಬಿಪಿಎಲ್ ಕಾರ್ಡ್ದಾರರಿಗೆ ರಾಜ್ಯ ಸರ್ಕಾರದಿಂದ ಶಾಕ್ : 7.76 ಲಕ್ಷ ರೇಷನ್ ಕಾರ್ಡ್ ರದ್ದು
Illegal BPL card holders: ಅಕ್ರಮವಾಗಿ ಬಿಪಿಎಲ್ ಕಾರ್ಡ್ ಬಳಕೆ ಮಾಡುತ್ತಿರುವವರ ವಿರುದ್ಧ ರಾಜ್ಯ ಸರ್ಕಾರದ ಸಮರ ಮುಂದುವರಿದಿದೆ. ಅನರ್ಹ ಬಿಪಿಎಲ್ ಕಾರ್ಡ್(BPL card) ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಬಿಗ್ ಶಾಕ್ ನೀಡಿದೆ. ಅನರ್ಹ ಫಲಾನುಭವಿಗಳನ್ನು ನಿಯಮಾನುಸಾರ ಪತ್ತೆ ಹಚ್ಚಿರುವ ರಾಜ್ಯ ಸರ್ಕಾರ 7.76 ಲಕ್ಷ ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸಿದೆ.
ಪ್ರಸ್ತುತ ಕೇಂದ್ರ ಸರ್ಕಾರವು ಎನ್ಎಫ್ಎಸ್ಎ ಮಿತಿಯನ್ನು 4,01,93,000ಕ್ಕೆ ನಿಗಧಿಪಡಿಸಿದೆ. ಆದಾಗ್ಯೂ ದಿನಾಂಕ:25.08.2025ಕ್ಕೆ ಅನುಗುಣವಾಗುವಂತೆ ರಾಜ್ಯದಲ್ಲಿ ಒಟ್ಟು 4,54,00,838 ಪಡಿತರ ಫಲಾನುಭವಿಗಳಿದ್ದು ಕೇಂದ್ರ ಸರ್ಕಾರವು ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಫಲಾನುಭವಿಗಳಿರುತ್ತಾರೆ.
ಹೀಗಾಗಿ ಪ್ರಸ್ತುತ ರಾಜ್ಯದಲ್ಲಿ ಅನರ್ಹ ಪಡಿತರ ಚೀಟಿದಾರರ ಪತ್ತೆ ಕಾರ್ಯ ಚಾಲ್ತಿಯಲ್ಲಿದ್ದು , ಅನರ್ಹ ಬಿಪಿಎಲ್ ಕಾರ್ಡ್ದಾರರನ್ನು ಪತ್ತೆ ಮಾಡಿ ಅವುಗಳನ್ನು ರದ್ದುಗೊಳಿಸಲಾಗಿತ್ತಿದೆ. ಈ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಅರ್ಹ ಫಲಾನುಭವಿಗಳಿಗೆ ಆದ್ಯತಾ ಪಡಿತರ ಚೀಟಿ ನೀಡಲು ಸಾಧ್ಯವಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
Also Read: ಕ್ಲೈಮ್ಯಾಕ್ಸ್ ಹಂತ ತಲುಪಿದ ನವೆಂಬರ್ ಕ್ರಾಂತಿ : ಸಿದ್ದರಾಮಯ್ಯ – ಡಿಕೆಶಿ ನಡುವೆ ರಾಜಿ ಸಂಧಾನಕ್ಕೆ ಮುಂದಾದ ಹೈಕಮಾಂಡ್
ಅಲ್ಲದೇ ಜನವರಿ ತಿಂಗಳಿನಿಂದ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಇಂದಿರಾ ಕಿಟ್ ವಿತರಣೆ ಮಾಡಲಿದೆ. ತೊಗರಿ ಬೇಳೆ, ಸಕ್ಕರೆ, ಉಪ್ಪು ಹಾಗೂ ಅಡುಗೆ ಎಣ್ಣೆಗಳನ್ನು ಒಳಗೊಂಡಿರುವ ಈ ಕಿಟ್ ಅರ್ಹರಿಗೆ ಮಾತ್ರ ದೊರಕಬೇಕು ಎಂದರೆ ಈ ರೀತಿಯ ಕ್ರಮಗಳು ಅತ್ಯಗತ್ಯ ಎಂಬುದು ರಾಜ್ಯ ಸರ್ಕಾರದ ಅಭಿಪ್ರಾಯವಾಗಿದೆ.
ಇನ್ನು ವಾರಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಕೂಡ ದೇಶವ್ಯಾಪಿ 5.8 ಕೋಟಿ ನಕಲಿ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿತ್ತು. ಆಧಾರ್ ವೆರಿಫಿಕೇಷನ್ ಹಾಗೂ ಇ ಕೆವೈಸಿ ಮೂಲಕ ನಕಲಿ ಫಲಾನುಭವಿಗಳಿಗೆ ಅಂಕುಶ ಹಾಕುವ ಕೆಲಸವನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು.
Also Read: ಮಹಾಂತೇಶ್ ಬೀಳಗಿ ಇಂದು ಅಂತ್ಯಕ್ರಿಯೆ : ತಾಯಿ ಸಮಾಧಿ ಪಕ್ಕದಲ್ಲೇ ಅಂತಿಮ ವಿಧಿವಿಧಾನ



