Illegal cow transport: ಅಕ್ರಮ ಗೋ ಸಾಗಾಟದ ವೇಳೆ ಕೆಟ್ಟು ನಿಂತ ವಾಹನ : ನಡುರಸ್ತೆಯಲ್ಲೇ ಹಸುಗಳನ್ನು ಬಿಟ್ಟು ಖದೀಮರು ಎಸ್ಕೇಪ್
ಪುತ್ತೂರು : Illegal cow transport: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ವಾಹನ ಕೆಟ್ಟು ಹೋದ ಪರಿಣಾಮ ನಡು ರಸ್ತೆಯಲ್ಲಿಯೇ ಕಸಾಯಿಖಾನೆಗೆ ಸಾಗಿಸಬೇಕಿದ್ದ ವಾಹನಗಳನ್ನು ಬಿಟ್ಟು ಖದೀಮರು ಎಸ್ಕೇಪ್ ಆದ ಘಟನೆಯು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು(Puttur) ತಾಲೂಕಿನ ನರಿಮೊಗರು ಸಮೀಪವಿರುವ ಗಡಿಪಿಲ ಎಂಬಲ್ಲಿ ಸಂಭವಿಸಿದೆ. ಈ ಸಂಬಂಧ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ನಗರದ ಪೊಲೀಸ್ ಠಾಣೆಗೆ ದೂರು ನೀಡಿದೆ.
ಪುತ್ತೂರು ನಗರ ಠಾಣೆಗೆ ನೀಡಲಾದ ದೂರಿನಲ್ಲಿ ನರಿಮೊಗರು ಸಮೀಪದ ಗಡಿಪಲ ಎಂಬಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ವಾಹನ ಕೆಟ್ಟು ಹೋದ ಹಿನ್ನೆಲೆಯಲ್ಲಿ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದನಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಮಾಲೀಕರಿಲ್ಲದ ಜಾನುವಾರುಗಳನ್ನು ಕದ್ದು ಈ ವಾಹನಗಳಲ್ಲಿ ಸಾಗಾಟ ಮಾಡಿರುವ ಅನುಮಾನ ಮೂಡಿದೆ. ಈ ಸಂಬಂಧ ಸೂಕ್ತ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಆಗ್ರಹಿಸಿದೆ.
Also Read: ಮಂಗಳೂರು : ಚಪ್ಪಲಿಯಿಂದ ಸಾರ್ವಜನಿಕ ಸ್ಥಳದಲ್ಲೇ ತಾಯಿಗೆ ಥಳಿಸಿದ ಮಗಳು : ವಿಡಿಯೋ ವೈರಲ್
ಕೆಲವು ತಿಂಗಳುಗಳ ಹಿಂದಷ್ಟೇ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಈಶ್ವರಮಂಗಲ ಸಮೀಪದ ಬೆಳ್ಳಿ ಚಡವು ಎಂಬಲ್ಲಿ ಅಕ್ರಮ ಗೋ ಸಾಗಾಟದಾರರ ಮೇಲೆ ಶೂಟೌಟ್ ಮಾಡಲಾಗಿತ್ತು.



