ಮಲ್ಪೆ : ಮೀನುಗಾರರ ಜಾಗ ಫೆಡರೇಷನ್‌ಗೆ, ಆದೇಶ ರದ್ದತಿಗೆ ಆಗ್ರಹ

ಉಡುಪಿ : ಮಲ್ಪೆ (Malpe) ಯಲ್ಲಿ ಮೀನುಗಾರರು ಬಳಸುತ್ತಿದ್ದ ಜಾಗವನ್ನು ಉಡುಪಿ ಶಾಸಕ ಯಶಪಾಲ್‌ ಸುವರ್ಣ ನೇತೃತ್ವದಲ್ಲಿ ಮೀನುಗಾರಿಕಾ ಫೆಡರೇಷನ್‌ಗೆ ಗುತ್ತಿಗೆ ನೀಡಿರುವ ಸರಕಾರ ಆದೇಶವನ್ನು ರದ್ದು ಪಡಿಸುವಂತೆ ಕೆಪಿಸಿಸಿಯ ಮೀನುಗಾರರ ಕಾಂಗ್ರೆಸ್‌ ಸಮಿತಿ ಆಗ್ರಹಿಸಿದೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೆಸ್‌ ಸಮಿತಿಯ ಮಾಸಿಕ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಮಲ್ಪೆ ಮೀನುಗಾರರ ಸಮಸ್ಯೆಗೆ ಸಂಬಂಧಿಸಿದಂತೆ ವಿಚಾರದ ಕುರಿತು ಚರ್ಚೆ ನಡೆಸಲಾಗಿದೆ.

ಮೀನುಗಾರಿಕಾ ಫೆಡರೇಷನ್‌ ಅಧ್ಯಕ್ಷ ಯಶಪಾಲ್‌ ಸುವರ್ಣ ನೇತೃತ್ವದಲ್ಲಿ ಮೀನುಗಾರರ ಜಾಗವನ್ನು ವಶಕ್ಕೆ ಪಡೆದಿರುವ ಆದೇಶದ ರದ್ದತಿಗೆ ಮೀನುಗಾರಿಕಾ ಸಮಿತಿ ಆಗ್ರಹಿಸಿದೆ.

Malpe Fisherfolk Demand Cancellation of Land Transfer Order

ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೇರ ಅವರು ಮಲ್ಪೆ ಮೀನುಗಾರರ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ.

ರಾಜ್ಯ ಮೀನುಗಾರರ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಮಂಜುನಾಥ ಸುನೆಗಾರ್‌ ಅವರಿಗೆ ಅಧಿಕೃತ ಮನವಿಯನ್ನು ಸಲ್ಲಿಸಿದ್ದಾರೆ. ಈ ಕುರಿತು ಮಾತನಾಡಿದ ಮಂಜುನಾಥ್ ಸುನೆಗಾರ್ ಅವರು, ಮಲ್ಪೆ ಮೀನುಗಾರರ ಹಿತವನ್ನು ಕಾಪಾಡಲು ರಾಜ್ಯ ಮೀನುಗಾರರ ಕಾಂಗ್ರೆಸ್ ಸಮಿತಿಯು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ. ಅಲ್ಲದೇ ಸರ್ಕಾರದ ಮೂಲಕ ಗುತ್ತಿಗೆ ರದ್ದುಪಡಿಸುವತ್ತ ಅಗತ್ಯ ಪ್ರಯತ್ನಗಳು ನಡೆಯಲಿವೆ ಎಂದು ಭರವಸೆ ನೀಡಿದ್ದಾರೆ.

Malpe Fisherfolk Demand Cancellation of Land Transfer Order

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories