DK Sivakumar fan hydrama: ಮಂಗಳೂರಿನಲ್ಲಿ ಡಿ.ಕೆ ಶಿವಕುಮಾರ್ ಅಭಿಮಾನಿಗಳ ಹೈಡ್ರಾಮಾ : ಕೆ.ಸಿ ವೇಣುಗೋಪಾಲ್ ಎದುರು ಡಿಕೆಶಿ ಜಯಘೋಷ
DK Sivakumar fan hydrama: ರಾಜ್ಯದಲ್ಲಿ ಅಧಿಕಾರ ಹಂಚಿಕೆ ಗೊಂದಲ ಜೋರಾಗಿರುವ ಬೆನ್ನಲ್ಲೇ ಮಂಗಳೂರಿಗೆ ಆಗಮಿಸಿದ ಎಐಸಿಸಿ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ಗೂ ಇದರ ಬಿಸಿ ತಟ್ಟಿದೆ. ಇಂದು ಮಂಗಳೂರಿನ ಕೋಣಾಜೆಯಲ್ಲಿ ನಡೆದ ಗಾಂಧಿ – ನಾರಾಯಣಗುರು ಸಂವಾದ ಶತಮಾನ ಕಾರ್ಯಕ್ರಮಕ್ಕೆ ಹಾಜರಾಗಲೆಂದು ಏರ್ಪೋರ್ಟ್ಗೆ ಬಂದಿಳಿದ ಕೆ.ಸಿ ವೇಣುಗೋಪಾಲ್ ಎದುರು ಡಿ.ಕೆ ಶಿವಕುಮಾರ್ ಬೆಂಬಲಿಗರು ಶಕ್ತಿ ಪ್ರದರ್ಶಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಿಂದ ಕೆ.ಸಿ ವೇಣುಗೋಪಾಲ್ ಹೊರಬರುತ್ತಿದ್ದಂತೆಯೇ ಡಿ.ಕೆ ಶಿವಕುಮಾರ್(D. K. Shivakumar) ಬೆಂಬಲಿಗರು ಡಿಕೆಶಿ ಪರವಾಗಿ ಜಯಘೋಷ ಮೊಳಗಿಸಿದ್ದಾರೆ. ಡಿ.ಕೆ ಶಿವಕುಮಾರ್ ಅವರನ್ನು ರಾಜ್ಯದ ಸಿಎಂ ಮಾಡಬೇಕೆಂದು ಪಟ್ಟು ಹಿಡಿದ ಡಿಕೆಶಿ ಬೆಂಬಲಿಗರು ಒಮ್ಮೆಲೆ ಕೆ.ಸಿ ವೇಣುಗೋಪಾಲ್ ಅವರ ಮೇಲೆ ಮುಗಿಬಿದ್ದ ಪ್ರಸಂಗ ಇಂದು ನಡೆದಿದೆ.
ಏರ್ಪೋರ್ಟ್ಗೆ ಬಂದಿಳಿದ ಕೆ.ಸಿ ವೇಣುಗೋಪಾಲ್ರನ್ನು ಸ್ವಾಗತಿಸಿದ ಮಿಥುನ್ ರೈ ಶಾಲು ಹೊದೆಸಿದ್ರು. ಈ ಸಂದರ್ಭದಲ್ಲಿಯೇ ಅಲ್ಲಿಯೇ ಇದ್ದ ಪಕ್ಷದ ಕಾರ್ಯಕರ್ತರು, ಡಿಕೆ ಡಿಕೆ ಎಂದು ಘೋಷಣೆ ಮೊಳಗಿಸಿದ್ದಾರೆ. ಮಿಥುನ್ ರೈ ಕೂಡ ಡಿ.ಕೆ ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡ ನಾಯಕರಾಗಿದ್ದು ಇವರ ಎದುರಲ್ಲೇ ಪಕ್ಷದ ಕಾರ್ಯಕರ್ತರು ಈ ರೀತಿ ಮಾಡಿದ್ದಾರೆ.
Also Read: ಹನುಮಜಯಂತಿ ದಿನ ನಾಟಿ ಕೋಳಿ ಸವಿದ ಸಿದ್ದರಾಮಯ್ಯ : ಆರ್.ಅಶೋಕ್ ಆಕ್ಷೇಪ
ಏರ್ಪೋರ್ಟ್ನಿಂದ ಹೊರಬಂದ ಕೆ.ಸಿ ವೇಣುಗೋಪಾಲ್ ಕಾರು ಹತ್ತುವ ಸಂದರ್ಭದಲ್ಲಿಯೂ ಡಿ.ಕೆ ಶಿವಕುಮಾರ್ ಅವರನ್ನು ರಾಜ್ಯದ ಸಿಎಂ ಮಾಡಿ ಎಂದು ಪಕ್ಷದ ಕಾರ್ಯಕರ್ತರು ಆಗ್ರಹಿಸಿದರು. ಇದೇ ವೇಳೆ ಮಾತನಾಡಿದ ಮಿಥುನ್ ರೈ, ಸಿಎಂ ಸಿದ್ದರಾಮಯ್ಯ ನಾಡು ಕಂಡ ಅದ್ಭುತ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ.
ಆದರೆ ಡಿ.ಕೆ ಶಿವಕುಮಾರ್ ಅವರಿಗೆ ಉಳಿದ ಅವಧಿಗೆ ಸಿಎಂ ಆಗುವ ಅವಕಾಶ ನೀಡಿದರೆ ನಮಗೆ ಹೆಚ್ಚು ಸಂತೋಷಾಗುತ್ತದೆ ಎಂದು ಹೇಳಿದ್ದಾರೆ.



