ಪ್ರೀತಿಸಿ ಮದುವೆಯಾಗಿದ್ದ ವಿವಾಹಿತೆ 3 ತಿಂಗಳಲ್ಲೇ ಆತ್ಮಹತ್ಯೆ

ಬೆಂಗಳೂರು (Bangalore News): ಮನೆಯವರ ವಿರೋಧದ ನಡುವಲ್ಲೇ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆಯೊಬ್ಬಳು ಮದುವೆಯಾದ 3 ತಿಂಗಳಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರದ ಆಂಧ್ರಹಳ್ಳಿಯ ವಿದ್ಯಮಾನ್ಯ ನಗರದಲ್ಲಿ ನಡೆದಿದೆ.

ಅಮೂಲ್ಯ (23 ವರ್ಷ) ಎಂಬಾಕೆಯೇ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಪತಿ ಅಭಿಷೇಕ್ ಅವರ ಮನೆಯಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ.

Advertisement

ಅಮೂಲ್ಯ ಮತ್ತು ಅಭಿಷೇಕ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿ ಮತ್ತು ಮದುವೆಗೆ ಎರಡೂ ಕುಟುಂಬಗಳಿಂದ ತೀವ್ರ ವಿರೋಧವಿತ್ತು ಎನ್ನಲಾಗಿದೆ. ವಿರೋಧದ ನಡುವೆಯೂ ಹೇಗೋ ಕುಟುಂಬದವರನ್ನು ಒಪ್ಪಿಸಿ ಈ ಜೋಡಿ ಮೂರು ತಿಂಗಳ ಹಿಂದಷ್ಟೇ ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು.

ಮದುವೆಯಾದ ಕೇವಲ ಮೂರೇ ತಿಂಗಳಲ್ಲಿ ಅಮೂಲ್ಯ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರೀತಿಸಿ, ಹೋರಾಡಿ ಒಂದಾದ ಬಳಿಕ ಆತ್ಮಹತ್ಯೆಗೆ ನಿರ್ಧರಿಸಲು ನಿಖರ ಕಾರಣವೇನು ಅನ್ನೋದು ತಿಳಿದು ಬಂದಿಲ್ಲ.

Advertisement

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಂದ್ರಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತಳ ಪೋಷಕರು ಹಾಗೂ ಪತಿಯ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಮೂಲ್ಯ ಅವರು ಯಾವುದೇ ಡೆತ್ ನೋಟ್ ಬರೆದಿಟ್ಟಿದ್ದಾರೆಯೇ ಅಥವಾ ಆತ್ಮಹತ್ಯೆಗೆ ಬೇರೆ ಯಾವುದೇ ಕೌಟುಂಬಿಕ ಕಾರಣಗಳಿವೆಯೇ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಪ್ರೀತಿಸಿ ಮದುವೆಯಾದ ಮೂರೇ ತಿಂಗಳಲ್ಲಿ ವಧು ಧಾರುಣ ಅಂತ್ಯ ಕಂಡಿರುವುದು ಇಡೀ ವಿದ್ಯಮಾನ್ಯ ನಗರದಲ್ಲಿ ದುಃಖದ ವಾತಾವರಣ ಸೃಷ್ಟಿಯಾಗಿದೆ. ಅಮೂಲ್ಯ ಸಾವಿಗೆ ನಿಖರ ಕಾರಣ ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಾಗಿದೆ.

Advertisement

Bangalore News recently married Women Commits suicide after just 3 month

Advertisement
Show More
Advertisement

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021