Datta jayanti : ಕಾಫಿನಾಡಲ್ಲಿ ದತ್ತಜಯಂತಿಗೆ ವೈಭವದ ತೆರೆ : ದತ್ತಗೋರಿ ತೆರವಿಗೆ ದತ್ತಭಕ್ತರ ಆಗ್ರಹ

Datta jayanti : ಚಿಕ್ಕಮಗಳೂರು : ಹಿಂದೂಗಳ ಧಾರ್ಮಿಕ ಭಾವೈಕ್ಯತಾ ಕೇಂದ್ರವಾಗಿರುವ ಕಾಫಿನಾಡಲ್ಲಿ ದತ್ತಜಯಂತಿಗೆ ಶಾಂತಿಯುತ ತೆರೆಬಿದ್ದಿದೆ. ಮಾಗಿಯ ಚಳಿಯನ್ನೂ ಲೆಕ್ಕಿಸದೇ ಸಾವಿರಾರು ದತ್ತಭಕ್ತರು ಬಿಗಿ ಪೊಲೀಸ್ ಭದ್ರತೆಯಲ್ಲಿ ದತ್ತಪೀಠದಲ್ಲಿ ದತ್ತಪಾದುಕೆಯ ದರ್ಶನ ಪಡೆದಿದ್ದಾರೆ.
ವಿಶ್ವಹಿಂದೂ ಪರಿಷತ್, ಭಜರಂಗದಳ, ಶ್ರೀರಾಮ ಸೇನೆ ಒಟ್ಟಾಗಿ ದತ್ತಜಯಂತಿ ಆಚರಿಸಿದ್ದು, ದತ್ತಪೀಠ ಹಿಂದೂಗಳ ಪೀಠವಾಗಬೇಕೆಂದ ಕೂಗು ಕೇಳಿಬಂದಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠದಲ್ಲಿಂದು ದತ್ತಜಯಂತಿಯ ವೈಭವ.

ಕಳೆದ 9 ದಿನಗಳಿಂದಲೂ ಶ್ರದ್ದಾಭಕ್ತಿಯೊಂದಿಗೆ ನಡೆದ ದತ್ತಜಯಂತಿಗೆ ಇಂದು ಶಾಂತಿಯುತ ತೆರೆ ಬಿದ್ದಿದೆ.. ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತಜಯಂತಿ ಹಿನ್ನೆಲೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮಾಲಾಧಾರಿಗಳು ಆಗಮಿಸಿದ್ರು. ಮಾಗಿಯ ಚಳಿ, ದಟ್ಟ ಮಂಜಿನ ನಡುವಲ್ಲೇ ನಿರೀಕ್ಷೆಗೂ ಮೀರಿ ಮಾಲಾಧಾರಿಗಳು ದತ್ತಪಾದುಕೆಯ ದರ್ಶನ ಪಡೆದಿದ್ದಾರೆ.
ಸಾವಿರಾರು ದತ್ತಭಕ್ತರು ಸರತಿ ಸಾಲಿನಲ್ಲಿ ನಿಂತು ದತ್ತ ಭಜನೆ, ಸಂಕೀರ್ತನೆಯೊಂದಿಗೆ ದತ್ತಾತ್ರೇಯ ಸ್ವಾಮಿಯ ದರ್ಶನ ಮಾಡಿದ್ರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಅವರು ಕುಟುಂಬ ಸಮೇತರಾಗಿ ಇರುಮುಡಿ ಹೊತ್ತು ದತ್ತಪಾದುಕೆ ದರ್ಶನ ಮಾಡಿದ್ದು ವಿಶೇಷವಾಗಿತ್ತು.

ಇನ್ನು ಬಿಜೆಪಿ ಮುಖಂಡ ಸಿ.ಟಿ.ರವಿ ಹೊನ್ನಮ್ಮನ ಹಳ್ಳದಿಂದ ಕಾಲ್ನಡಿಗೆ ಮೂಲಕ ಇರುಮುಡಿ ಹೊತ್ತು ಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆದ್ರು, ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠ. ದತ್ತಪೀಠ ಹಿಂದೂಗಳಿಗೆ ಸೇರಬೇಕು. ನಾವು ದತ್ತಪೀಠವನ್ನ ಪಡೆದೇ ತೀರುತ್ತೇನೆ ಎಂದು ಸಿಟಿ ರವಿ ಆಗ್ರಹಿಸಿದ್ದಾರೆ.
ದತ್ತಜಯಂತಿಗೆ ಸುಮಾರು ಮೂರು ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ದತ್ತಜಯಂತಿಯ ಅಂಗವಾಗಿ ದತ್ತಗುಹೆಯ ಸಮೀಪದಲ್ಲಿಯೇ ಗಣಪತಿ ಹೋಮ, ದತ್ತ ಹೋಮವನ್ನ ನಡೆಸಿದ್ರು.

ಹೋಮಚ ಪೂರ್ಣಾಹುತಿಯಲ್ಲಿ ಮಠಾಧೀಶರ ಜೊತೆಗೆ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಶ್ರೀರಾಮ ಸೇನೆಯ ಮುಖಂಡರು ಪಾಲ್ಗೊಂಡಿದ್ದರು. ಹಿಂದೂ ಸಂಘಟನೆಗಳೆಲ್ಲಾ ಒಟ್ಟಾಗಿ ದತ್ತಜಯಂತಿಯಲ್ಲಿ ಪಾಲ್ಗೊಂಳ್ಳುವ ಮೂಲಕ ಎಲ್ಲರೂ ಒಂದೇ ಅನ್ನುವ ಸಂದೇಶ ಸಾರಿದ್ದಾರೆ.
ಇದನ್ನೂ ಓದಿ : ಡಿಕೆ ಶಿವಕುಮಾರ್ ಸಿಎಂ ಆಗೋದು ಯಾವಾಗ ? ಉತ್ತರ ಕೊಟ್ಟ ಸಿಎಂ ಸಿದ್ದರಾಮಯ್ಯ
ಇನ್ಮುಂದೆ ಒಗ್ಗಟ್ಟಾಗಿಯೇ ದತ್ತಜಯಂತಿ ನಡೆಸೋದಾಗಿ ಘೋಷಿಸಿದ್ದಾರೆ. ದತ್ತಜಯಂತಿ ಕಾರ್ಯಕ್ರಮ ಶಾಂತಿಯುತವಾಗಿ ಮುಗಿದಿರೋದು ಕಾಫಿನಾಡಿನ ಜನರ ಜೊತೆಗೆ ಪೊಲೀಸರು ಹಾಗೂ ಜಿಲ್ಲಾಡಳಿತ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ

. 3000ಕ್ಕೂ ಅಧಿಕ ಪೊಲೀಸರ ಜೊತೆಗೆ 15 ಸಾವಿರಕ್ಕೂ ಅಧಿಕ ದತ್ತಭಕ್ತರು ದತ್ತಮಾಲೆ ಧರಿಸಿ ದತ್ತಪಾದುಕೆ ದರ್ಶನ ಪಡೆದಿರೋದು ವಿಶೇಷವಾಗಿತ್ತು.
ಇದನ್ನೂ ಓದಿ : ಹನುಮ ಜಯಂತಿಯ ದಿನವೆ ಕೋಳಿ ಸಾರು ಸವಿದ ಸಿದ್ದರಾಮಯ್ಯ : ಆರ್.ಅಶೋಕ್ ವ್ಯಂಗ್ಯ
Datta jayanti celebration in datta peeta Chikkamagaluru



