ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಸದಾ ನಿಮ್ಮ ಮೇಲಿರಲು ಶುಕ್ರವಾರ ಈ ಆಚರಣೆಗಳನ್ನು ಪಾಲಿಸಿ

Friday Remedies For Luck: ಹಿಂದೂ ಸಂಪ್ರದಾಯದಲ್ಲಿ ಶುಕ್ರವಾರಕ್ಕೆ ಬಹಳ ಮಹತ್ವ ನೀಡಲಾಗಿದೆ. ವಾರದ 5 ನೇ ದಿನವಾದ ಶುಕ್ರವಾರನ್ನು ಶುಭ ಶುಕ್ರವಾರವೆಂದೇ ಕರೆಯಲಾಗುತ್ತದೆ.

ಈ ದಿನವನ್ನು ಐಶ್ವರ್ಯವನ್ನು ಕರುಣಿಸುವ ಲಕ್ಷ್ಮಿ ದೇವಿಗೆ ಮೀಸಲಿಡಲಾಗಿದೆ. ಶುಕ್ರವಾರದಂದು ಮಾತೆ ಲಕ್ಷ್ಮಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಮನೆಯಲ್ಲಿ ಪ್ರೀತಿ, ಸಂತೋಷ, ಐಶ್ವರ್ಯ ತುಂಬುತ್ತದೆ. ಜೊತೆಗೆ ಇವುಗಳಿಗೆ ಕಾರಣವಾದ ಗ್ರಹವಾದ ಶುಕ್ರ ಗ್ರಹವು ಬಲಗೊಳ್ಳುತ್ತದೆ ಎಂಬ ನಂಬಿಕೆಯಿದೆ.

ಜಾತಕದಲ್ಲಿ ಶುಕ್ರ ಗ್ರಹ ಬಲಗೊಂಡರೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹಾಗಾಗಿ ಶುಕ್ರವಾರದಂದು ಕೆಲವು ಆಚರಣೆಗಳನ್ನು ಪಾಲಿಸುವುದು ಮುಖ್ಯ ಎಂದು ಶಾಸ್ತ್ರಗಳು ಹೇಳುತ್ತವೆ.

ಹಾಗೆಂದು ಕಠಿಣ ಆಚರಣೆಗಳನ್ನು ಪಾಲಿಸುವ ಅಗತ್ಯವಿಲ್ಲ. ಕೆಲವು ಸುರಳ ಆಚರಣೆಗಳನ್ನು ಪಾಲಿಸಿದರೆ ಸಾಕು. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗಿ ಸಮೃದ್ಧಿ ಹೆಚ್ಚುತ್ತದೆ. ನಿಮ್ಮ ಮನಸ್ಸಿನಲ್ಲಿರುವ ಇಚ್ಛೆಗಳು ಈಡೇರುತ್ತವೆ. ಹಾಗಾದರೆ ಯಾವ ಸರಳ ಆಚರಣೆಗಳನ್ನು ಪಾಲಿಸಬೇಕು ಇಲ್ಲಿದೆ ಓದಿ.

ಗುಲಾಬಿ ಬಣ್ಣದ ಬಟ್ಟೆ ಧರಿಸಿ

ಶುಕ್ರವಾರದಂದು ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಇದರಿಂದ ಜೀವನದಲ್ಲಿರುವ ತೊಡಕುಗಳು ನಿವಾರಣೆಯಾಗುತ್ತವೆ.

ಆರ್ಥಿಕ ತೊಂದರೆಗಳು ಬಗೆಹರಿಯುತ್ತವೆ. ಜೊತೆಗೆ ಪ್ರೀತಿ, ವಿವಾಹಕ್ಕೆ ಸಂಬಂಧಿಸಿದ ಆಸೆಗಳು ಪೂರೈಸುತ್ತವೆ. ಕೆಲವರು ಸಂಜೆಯ ಸಮಯದಲ್ಲಿ ಮಾತೆ ಲಕ್ಷ್ಮಿಯನ್ನು ಪೂಜಿಸಿ 21 ಚಿಕ್ಕ ಬಿಳಿ ಕವಡೆಗಳನ್ನು ಸಹ ಅರ್ಪಿಸುತ್ತಾರೆ.

ಈ ವಸ್ತುಗಳನ್ನು ದಾನ ಮಾಡಿ

ಕೆಲವು ಧಾರ್ಮಿಕ ನಂಬಿಕೆಗಳ ಪ್ರಕಾರ ಶುಕ್ರವಾರದಂದು ಬಿಳಿ ಬಣ್ಣದ ಆಹಾರ ಪದಾರ್ಥಗಳನ್ನು ದಾನ ಮಾಡುತ್ತಾರೆ. ಇದರಿಂದ ಶಾಂತಿ, ಸಮೃದ್ಧಿ ನೆಲೆಸುತ್ತದೆ.

ಹಾಲು, ಮೊಸರು, ಅನ್ನ ಹಾಗೂ ಬಿಳಿ ಸಕ್ಕರೆಯನ್ನು ದೇವಿಗೆ ಅರ್ಪಿಸಬಹುದು. ಸಕ್ಕರೆಯನ್ನು ದಾನ ಮಾಡುವುದರಿಂದ ಸಂಬಂಧಗಳಲ್ಲಿ ಮಾಧುರ್ಯ ಮತ್ತು ಸಾಮರಸ್ಯ ಹೆಚ್ಚುತ್ತದೆ.

ಇದನ್ನೂ ಓದಿ: ನಿಮ್ಮ ಅದೃಷ್ಟ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸರಳ ಉಪಾಯ; ಮನೆಯ ಸುತ್ತ ಈ 5 ಗಿಡಗಳನ್ನು ಬೆಳೆಸಿ ನೋಡಿ

ಹಸುಗಳಿಗೆ ಆಹಾರ ನೀಡಿ

ಇನ್ನೊಂದು ಜನಪ್ರಿಯ ನಂಬಿಕೆಯೆಂದರೆ ಶುಕ್ರವಾರದಂದು ಹಸುಗಳಿಗೆ ಆಹಾರವನ್ನು ನೀಡಲಾಗುತ್ತದೆ. ಈ ದಿನದಂದು ಗೋವುಗಳಿಗೆ ಗೋಧಿ ಹಿಟ್ಟಿನಿಂದ ತಯಾರಿಸಿದ ಆಹಾರಗಳನ್ನು ನೀಡುವುದರಿಂದ ಅದೃಷ್ಟ ಬರುತ್ತದೆ ಎನ್ನಲಾಗಿದೆ.

ರೊಟ್ಟಿ ಅಥವಾ ಚಪಾತಿಗೆ ಬೆಲ್ಲ ಮತ್ತು ತಪ್ಪವನ್ನು ಸವರಿ ಹಸುಗಳಿಗೆ ನೀಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದುಕೊಳ್ಳಬಹುದು. ಇದರಿಂದ ಆರ್ಥಿಕ ಸ್ಥಿರತೆಯನ್ನು ಬಲಪಡಿಸುತ್ತದೆ.

ಕಪ್ಪು ಇರುವೆಗಳಿಗೆ ಸಕ್ಕರೆಯನ್ನು ನೀಡುವುದು ಸಹ ಶುಭವೆಂದು ಪರಿಗಣಿಸಲಾಗಿದೆ.

ಶುಕ್ರವಾರದ ಆಚರಣೆ ಹೇಗೆ?

ಶುಕ್ರವಾರದಂದು ಅನೇಕ ಭಕ್ತರು ಬೆಳಿಗ್ಗೆ ಬೇಗ ಎದ್ದು, ಸ್ನಾನಾದಿ ಕಾರ್ಯಗಳನ್ನು ಮುಗಿಸಿ, ಉಪವಾಸ ವ್ರತ ಪಾಲಿಸುತ್ತಾರೆ. ಲಕ್ಷ್ಮಿ ಚಾಲಿಸಾವನ್ನು ಪಠಿಸಿ ದೇವಿಯನ್ನು ಪೂಜಿಸುತ್ತಾರೆ. ಇದರಿಂದ ಮಾನಸಿಕ ಶಾಂತಿ ಲಭಿಸುತ್ತದೆ. ನಕಾರಾತ್ಮಕ ಅಂಶಗಳು ದೂರವಾಗುತ್ತವೆ. ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories