ಕ್ರಿಸ್​ಮಸ್​, ಹೊಸ ವರ್ಷದಂದು ಪ್ರಯಾಣಿಕರ ನಿಯಂತ್ರಣಕ್ಕೆ ರೈಲ್ವೆ ಇಲಾಖೆ ಕ್ರಮ : ಈ ಮಾರ್ಗಗಳಲ್ಲಿ ವಿಶೇಷ ರೈಲುಗಳ ಸಂಚಾರ

Konkan Railway : ಕ್ರಿಸ್ಮಸ್​ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಿತಿಮೀರುವ ರೈಲು ಪ್ರಯಾಣಿಕರ ನಿಯಂತ್ರಣಕ್ಕಾಗಿ ಕೊಂಕಣ ರೈಲು ಮಾರ್ಗದಲ್ಲಿ ವಿಶೇಷ ರೈಲುಗಳ ಸಂಚಾರಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ.

ಯಶವಂತಪುರ ಜಂಕ್ಷನ್​ ವಾಸ್ಕೋಡ ಗ್ರಾಮ ಎಕ್ಸ್​ಪ್ರೆಸ್​ ವಿಶೇಷ ರೈಲು ಡಿಸೆಂಬರ್​ 25 ಹಾಗೂ 31ನೇ ತಾರೀಖಿನಂದು ಯಶವಂತಪುರ ಜಂಕ್ಷನ್‌ನಿಂದ ರಾತ್ರಿ 12.20ಕ್ಕೆ ಹೊರಟು ಮಧ್ಯಾಹ್ನ 1.50ಕ್ಕೆ ವಾಸ್ಕೊ ಡ ಗಾಮ ತಲುಪಲಿದೆ. ಅಂತೆಯೇ 06506 ಸಂಖ್ಯೆಯ ಟ್ರೇನ್‌ ಡಿಸೆಂಬರ್​25 ಹಾಗೂ ಜನವರಿ1ರಂದು ವಾಸ್ಕೊ ಡ ಗಾಮದಿಂದ ಸಂಜೆ 5 ಗಂಟೆಗೆ ಹೊರಟು ಮಾರನೇ ದಿನ ಬೆಳಗ್ಗೆ 9.30ಕ್ಕೆ ಬೆಂಗಳೂರು ತಲುಪಲಿದೆ.

06511 ಸಂಖ್ಯೆಯ ಬೆಂಗಳೂರು ಕಂಟೋನ್ಮೆಂಟ್‌ ವಾಸ್ಕೊ ಡ ಗಾಮ ಎಕ್ಸಪ್ರೆಸ್‌ ವಿಶೇಷ ರೈಲು ಡಿಸೆಂಬರ್​ 26ರಂದು ಬೆಂಗಳೂರು ಕಂಟೋನ್ಮೆಂಟ್‌ನಿಂದ ರಾತ್ರಿ 11.35ಕ್ಕೆ ಹೊರಟು ಮರುದಿನ ಮಧ್ಯಾಹ್ನ 1.50ಕ್ಕೆ ವಾಸ್ಕೊ ಡ ಗಾಮ ತಲುಪಲಿದೆ.06512 ರೈಲು ಡಿಸೆಂಬರ್​ 28ರಂದು ವಾಸ್ಕೊ ಡ ಗಾಮದಿಂದ ಸಂಜೆ 5ಗಂಟೆಗೆ ಹೊರಟು ಮರುದಿನ ಬೆಳಗ್ಗೆ 9ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್‌ ತಲುಪಲಿದೆ.

ಇದನ್ನೂ ಓದಿ: ಶಬರಿಮಲೆ ಭಕ್ತಾದಿಗಳಿಗೆ ಶುಭ ಸುದ್ದಿ : ರೈಲ್ವೆ ಇಲಾಖೆಯಿಂದ ಕರ್ನಾಟಕ – ಕೇರಳ ವಿಶೇಷ ರೈಲು

ಲೋಕಮಾನ್ಯ ತಿಲಕ್‌ ಟರ್ಮಿನಲ್‌ ಕರ್ಮಲಿ ಮಧ್ಯೆ ವಾರಕ್ಕೊಮ್ಮೆ ಸಂಚರಿಸುತ್ತಿರುವ ಎಕ್ಸ್‌ಪ್ರೆಸ್‌ ರೈಲನ್ನು ಮಡಗಾಂವ್‌ ಜಂಕ್ಷನ್‌ ತನಕ ವಿಸ್ತರಿಸಲಾಗಿದೆ.ಡಿಸೆಂಬರ್​18ರಿಂದ ಜನವರಿ 15ರ ತನಕ ಕ್ರಿಸ್ಮಸ್‌, ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಮಡಗಾಂವ್‌ ಜಂಕ್ಷನ್‌ ತನಕ ಸಂಚರಿಸಲಿವೆ. ಈ ಮೇಲ್ಕಂಡ ರೈಲುಗಳ ಸಮಯ, ನಿಲುಗಡೆ ತಾಣಗಳ ಬಗ್ಗೆ ರೈಲ್ವೆ ಇಲಾಖೆಯ ( Konkan Railway ) ಅಧಿಕೃತ ವೆಬ್​ಸೈಟ್​​ನಲ್ಲಿ ಸಂಪೂರ್ಣ ಮಾಹಿತಿ ಒದಗಿಸಲಾಗಿದ್ದು ಪ್ರಯಾಣಿಕರು ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories