ಇಂಡಿಗೋ ವಿಮಾನಯಾನದ ಹಾರಾಟಕ್ಕೆ ಕೇಂದ್ರ ಸರ್ಕಾರದಿಂದ ಕತ್ತರಿ : ಇಂಡಿಗೋ ಸಂಸ್ಥೆ ಕಾರ್ಯಾಚರಣೆಯಲ್ಲಿ ಶೇ.10ರಷ್ಟು ಕಡಿತ
IndiGo Crises : ವಿವಿಧ ಕಾರಣಗಳಿಂದಾಗಿ ಏಕಾಏಕಿ ವಿಮಾನ ಹಾರಾಟ ಪ್ರಕ್ರಿಯೆ ರದ್ದುಗೊಳಿಸುವ ಮೂಲಕ ದೇಶಾದ್ಯಂತ ವಿಮಾನಯಾನ ಪ್ರಯಾಣಿಕರಿಗೆ ಇಂಡಿಗೋ ಭಾರೀ ದೊಡ್ಡ ಮಟ್ಟದಲ್ಲಿ ಸಮಸ್ಯೆಯನ್ನುಂಟು ಮಾಡಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಇದೀಗ ಇಂಡಿಯೋ ಏರ್ಲೈನ್ಸ್ ವಿರುದ್ಧ ಮಹತ್ವದ ಕ್ರಮ ಕೈಗೊಂಡಿದೆ.
ಭಾರತದ ಅತೀ ದೊಡ್ಡ ವಿಮಾನಯಾನ ಸಂಸ್ಥೆ ಎಂದೇ ಖ್ಯಾತಿ ಗಳಿಸಿರುವ ಇಂಡಿಗೋ ತನ್ನ ವಿಮಾನಯಾನ ಕಾರ್ಯಾಚರಣೆ ಕಡಿತಗೊಳಿಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಸೂಚನೆ ನೀಡಿದೆ.
ಈ ಮೂಲಕ ಪ್ರತಿನಿತ್ಯ 220 ವಾಹನಗಳ ಹಾರಾಟ ನಡೆಸುತ್ತಿದ್ದ ಇಂಡಿಗೋ ಸಂಸ್ಥೆ ಕಾರ್ಯಾಚರಣೆ 10 ಪ್ರತಿಶತ ಕಡಿತಗೊಳ್ಳಲಿದೆ. ವಿಮಾನಯಾನದಲ್ಲಿ ರದ್ದತಿಯಿಂದಾಗಿ ಭವಿಷ್ಯದಲ್ಲಿ ಪ್ರಯಾಣಿಕರಿಗೆ ಮತ್ತಷ್ಟು ತೊಂದರೆಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ಮೋಹನ್ ನಾಯ್ಡು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕ್ರಿಸ್ಮಸ್, ಹೊಸ ವರ್ಷದಂದು ಪ್ರಯಾಣಿಕರ ನಿಯಂತ್ರಣಕ್ಕೆ ರೈಲ್ವೆ ಇಲಾಖೆ ಕ್ರಮ : ಈ ಮಾರ್ಗಗಳಲ್ಲಿ ವಿಶೇಷ ರೈಲುಗಳ ಸಂಚಾರ
ದೇಶಾದ್ಯಂತ ಪ್ರತಿದಿನ 138 ತಾಣಗಳಿಗೆ ಒಟ್ಟು 2,200 ವಿಮಾನಗಳನ್ನು ಇಂಡಿಗೊ (IndiGo Crises) ಕಾರ್ಯಾಚರಣೆ ಮಾಡುತ್ತದೆ. ಇಂಡಿಗೋ ವಿಮಾನಯಾನದಿಂದಾಗಿ ಉಂಟಾದ ಈ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಗಂಭೀರ ಕ್ರಮ ವಹಿಸುತ್ತಿದ್ದು ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪರಿಶೀಲನೆ ನಡೆಸುತ್ತಿದೆ.
ಪ್ರಯಾಣಿಕರಿಗೆ ಪರ್ಯಾಯ ಸಂಚಾರ ವ್ಯವಸ್ಥೆ , ಟಿಕೆಟ್ ದರ ರೀಫಂಡ್ ಹೀಗೆ ಎಲ್ಲಾ ರೀತಿಯ ಕ್ರಮಗಳನ್ನು ಸಮರ್ಪಕವಾಗಿ ನಡೆಯುವಂತೆ ಕೇಂದ್ರ ಸರ್ಕಾರ ನಿಗಾ ವಹಿಸಿದೆ.



