ಕ್ರಿಸ್ಮಸ್, ಹೊಸ ವರ್ಷದಂದು ಪ್ರಯಾಣಿಕರ ನಿಯಂತ್ರಣಕ್ಕೆ ರೈಲ್ವೆ ಇಲಾಖೆ ಕ್ರಮ : ಈ ಮಾರ್ಗಗಳಲ್ಲಿ ವಿಶೇಷ ರೈಲುಗಳ ಸಂಚಾರ
Konkan Railway : ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಿತಿಮೀರುವ ರೈಲು ಪ್ರಯಾಣಿಕರ ನಿಯಂತ್ರಣಕ್ಕಾಗಿ ಕೊಂಕಣ ರೈಲು ಮಾರ್ಗದಲ್ಲಿ ವಿಶೇಷ ರೈಲುಗಳ ಸಂಚಾರಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ.
ಯಶವಂತಪುರ ಜಂಕ್ಷನ್ ವಾಸ್ಕೋಡ ಗ್ರಾಮ ಎಕ್ಸ್ಪ್ರೆಸ್ ವಿಶೇಷ ರೈಲು ಡಿಸೆಂಬರ್ 25 ಹಾಗೂ 31ನೇ ತಾರೀಖಿನಂದು ಯಶವಂತಪುರ ಜಂಕ್ಷನ್ನಿಂದ ರಾತ್ರಿ 12.20ಕ್ಕೆ ಹೊರಟು ಮಧ್ಯಾಹ್ನ 1.50ಕ್ಕೆ ವಾಸ್ಕೊ ಡ ಗಾಮ ತಲುಪಲಿದೆ. ಅಂತೆಯೇ 06506 ಸಂಖ್ಯೆಯ ಟ್ರೇನ್ ಡಿಸೆಂಬರ್25 ಹಾಗೂ ಜನವರಿ1ರಂದು ವಾಸ್ಕೊ ಡ ಗಾಮದಿಂದ ಸಂಜೆ 5 ಗಂಟೆಗೆ ಹೊರಟು ಮಾರನೇ ದಿನ ಬೆಳಗ್ಗೆ 9.30ಕ್ಕೆ ಬೆಂಗಳೂರು ತಲುಪಲಿದೆ.
06511 ಸಂಖ್ಯೆಯ ಬೆಂಗಳೂರು ಕಂಟೋನ್ಮೆಂಟ್ ವಾಸ್ಕೊ ಡ ಗಾಮ ಎಕ್ಸಪ್ರೆಸ್ ವಿಶೇಷ ರೈಲು ಡಿಸೆಂಬರ್ 26ರಂದು ಬೆಂಗಳೂರು ಕಂಟೋನ್ಮೆಂಟ್ನಿಂದ ರಾತ್ರಿ 11.35ಕ್ಕೆ ಹೊರಟು ಮರುದಿನ ಮಧ್ಯಾಹ್ನ 1.50ಕ್ಕೆ ವಾಸ್ಕೊ ಡ ಗಾಮ ತಲುಪಲಿದೆ.06512 ರೈಲು ಡಿಸೆಂಬರ್ 28ರಂದು ವಾಸ್ಕೊ ಡ ಗಾಮದಿಂದ ಸಂಜೆ 5ಗಂಟೆಗೆ ಹೊರಟು ಮರುದಿನ ಬೆಳಗ್ಗೆ 9ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಇದನ್ನೂ ಓದಿ: ಶಬರಿಮಲೆ ಭಕ್ತಾದಿಗಳಿಗೆ ಶುಭ ಸುದ್ದಿ : ರೈಲ್ವೆ ಇಲಾಖೆಯಿಂದ ಕರ್ನಾಟಕ – ಕೇರಳ ವಿಶೇಷ ರೈಲು
ಲೋಕಮಾನ್ಯ ತಿಲಕ್ ಟರ್ಮಿನಲ್ ಕರ್ಮಲಿ ಮಧ್ಯೆ ವಾರಕ್ಕೊಮ್ಮೆ ಸಂಚರಿಸುತ್ತಿರುವ ಎಕ್ಸ್ಪ್ರೆಸ್ ರೈಲನ್ನು ಮಡಗಾಂವ್ ಜಂಕ್ಷನ್ ತನಕ ವಿಸ್ತರಿಸಲಾಗಿದೆ.ಡಿಸೆಂಬರ್18ರಿಂದ ಜನವರಿ 15ರ ತನಕ ಕ್ರಿಸ್ಮಸ್, ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಮಡಗಾಂವ್ ಜಂಕ್ಷನ್ ತನಕ ಸಂಚರಿಸಲಿವೆ. ಈ ಮೇಲ್ಕಂಡ ರೈಲುಗಳ ಸಮಯ, ನಿಲುಗಡೆ ತಾಣಗಳ ಬಗ್ಗೆ ರೈಲ್ವೆ ಇಲಾಖೆಯ ( Konkan Railway ) ಅಧಿಕೃತ ವೆಬ್ಸೈಟ್ನಲ್ಲಿ ಸಂಪೂರ್ಣ ಮಾಹಿತಿ ಒದಗಿಸಲಾಗಿದ್ದು ಪ್ರಯಾಣಿಕರು ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.



