egg Controversy : ಮೊಟ್ಟೆಯಲ್ಲಿ ಕ್ಯಾನ್ಸರ್ಕಾರ ಅಂಶ ಪತ್ತೆ ವಿವಾದ : ವೈಜ್ಞಾನಿಕ ಪರೀಕ್ಷೆಗೆ ರಾಜ್ಯ ಸರ್ಕಾರದಿಂದ ಸೂಚನೆ

egg Controversy : ಕರ್ನಾಟಕ ರಾಜ್ಯದಲ್ಲಿ ಮೊಟ್ಟೆ ಸೇವನೆ ಮಾಡಿದವರಿಗೆ ಭಾರೀ ದೊಡ್ಡ ಆಘಾತ ಎದುರಾಗಿದೆ. ಕೆಲವು ಜನಪ್ರಿಯ ಬ್ರ್ಯಾಂಡ್ಗಳ ಮೊಟ್ಟೆಗಳಲ್ಲಿ ಕ್ಯಾನ್ಸರ್ಕಾರಕ AOZ ಎಂಬ ಅಂಶ ಪತ್ತೆಯಾಗಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ. ಇದರಿಂದ ಮೊಟ್ಟೆ ಸೇವನೆ ಮಾಡಿದವರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ರಾಜ್ಯದಲ್ಲಿ ಇಂತಹದ್ದೊಂದು ಮೊಟ್ಟೆ ವಿವಾದ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಠಿಸುತ್ತಿದ್ದಂತೆಯೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆಯೂ ಮೊಟ್ಟೆಗಳ ಮೇಲೆ ಪರೀಕ್ಷೆ ನಡೆಸಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಯಾವುದೇ ಕ್ಯಾನ್ಸರ್ಕಾರಕ ಅಂಶಗಳು ಕಂಡು ಬಂದಿರಲಿಲ್ಲ.
ಇದನ್ನೂ ಓದಿ : ಶಾಲೆಗಳಿಗೆ 10 ದಿನಗಳ ರಜೆ ಘೋಷಣೆ : ಹೊಸ ವಿವಾದ

ಆದರೆ ಇದೀಗ ಮತ್ತೊಮ್ಮೆ ಮೊಟ್ಟೆಯ ವಿರುದ್ಧ ಹೊರ ಆರೋಪ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದ್ದು ಶೀಘ್ರದಲ್ಲೇ ವೈಜ್ಞಾನಿಕ ಪರೀಕ್ಷೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಅಲ್ಲದೇ ಒಂದು ವೇಳೆ ಮೊಟ್ಟೆಗಳಲ್ಲಿ ಕ್ಯಾನ್ಸರ್ಕಾರಕ ಅಂಶ ಇರುವುದು ಪತ್ತೆಯಾದಲ್ಲಿ ಜನಪ್ರಿಯ ಮೊಟ್ಟೆ ಬ್ರ್ಯಾಂಡ್ನ ಮಾಲೀಕರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಜೀವನದಲ್ಲಿ ಈ ಒಂದು ಅಭ್ಯಾಸ ರೂಢಿಸಿಕೊಳ್ಳಿ, ಹೃದಯಾಘಾತದ ಅಪಾಯ ಶೇಕಡಾ 50 ಕಡಿಮೆಯಾಗುತ್ತದೆ
ಹೀಗಾಗಿ ಇದೀಗ ಮೊಟ್ಟೆಗಳ ವೈಜ್ಞಾನಿಕ ಪರೀಕ್ಷೆಯಲ್ಲಿ ಯಾವ ಫಲಿತಾಂಶ ಬರಬಹುದು ಎಂಬ ಆತಂಕ ಮೊಟ್ಟೆ ಪ್ರಿಯರಲ್ಲಿ ಮನೆ ಮಾಡಿದೆ.
Controversy over finding carcinogenic element in egg



