ಏನಿದು ಮಹಿಳಾ ಸಮೃದ್ಧಿ ಯೋಜನೆ ? 1.40 ಲಕ್ಷ ರೂ. ಸಾಲ ಪಡೆಯುವುದು ಹೇಗೆ ?

Mahila Samriddhi Yojana : ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗೊಳ್ಳಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಈಗಾಗಲೇ ನಾನಾ ಮಹತ್ವಾಕಾಂಕ್ಷಿ ಯೋಜನೆಗಳನ್ನು ನಡೆಸುತ್ತಿದೆ. ಈ ಯೋಜನೆಗಳ ಪೈಕಿ ಮಹಿಳಾ ಸಮೃದ್ಧಿ ಯೋಜನೆ ಕೂಡ ಒಂದು.

ಕೇಂದ್ರ ಸರ್ಕಾರದಿಂದ ಜಾರಿಗೊಳಿಸಲಾದ ಈ ಯೋಜನೆಯ ಅಡಿಯಲ್ಲಿ ಗ್ರಾಮೀಣ ಮತ್ತು ಹಿಂದುಳಿದ ಸಮುದಾಯದ ಮಹಿಳೆಯರು ಆರ್ಥಿಕ ಸ್ವಾವಲಂಬಿತನ ಸಾಧಿಸುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ.

ಏನಿದು ಮಹಿಳಾ ಸಮೃದ್ಧಿ ಯೋಜನೆ ?

ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ಏನೆಲ್ಲ ಲಾಭ ಪಡೆಯಬಹುದು ? ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಮಹಿಳೆಯರು ಏನು ಮಾಡಬೇಕು ? ಎಂಬೆಲ್ಲ ವಿವರಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ :

ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮವು ಈ ಯೋಜನೆಯನ್ನು ನೋಡಿಕೊಳ್ಳುತ್ತದೆ. ಈ ಯೋಜನೆಯ ಅಡಿಯಲ್ಲಿ ಹಿಂದುಳಿದ ಮತ್ತು ಬಡ ವರ್ಗದ ಮಹಿಳೆಯರು ಉದ್ಯೋಗವನ್ನು ಮಾಡಲು ಸಹಕಾರ ನೀಡಲಾಗುತ್ತದೆ.

20 ಮಹಿಳೆಯರ ಗುಂಪನ್ನು ಮಾಡಿ ಅವರಿಗೆ ಸೂಕ್ತವಾದ ಕರಕುಶಲ ಚಟುವಟಿಕೆಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಗುಂಪುಗಳನ್ನು ಸ್ವ – ಸಹಾಯ ಗುಂಪುಗಳಾಗಿ ಪರಿವರ್ತನೆ ಮಾಡಲಾಗುತ್ತದೆ.

ಬಳಿಕ ಇವರಿಗೆ ಕಿರುಸಾಲವನ್ನು ಒದಗಿಸಲಾಗುತ್ತದೆ.ಈ ಮೂಲಕ ಉದ್ಯಮಶೀಲ ಮಹಿಳೆಯರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ಗರಿಷ್ಠ 1.40 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆಯಬಹುದಾಗಿದೆ.

ಅತ್ಯಂತ ಕಡಿಮೆ ಎಂದರೆ ವಾರ್ಷಿಕ 6 ಪ್ರತಿಶತ ವಾರ್ಷಿಕ ಬಡ್ಡಿದರವನ್ನು ಈ ಯೋಜನೆಯ ಅಡಿಯಲ್ಲಿ ಪಡೆಯುವ ಸಾಲದ ಮೊತ್ತಕ್ಕೆ ವಿಧಿಸಲಾಗಿದೆ. ತ್ರೈಮಾಸಿಕ ಕಂತುಗಳಲ್ಲಿ ಮೂರು ವರ್ಷದ ಒಳಗಾಗಿ ಈ ಸಾಲದ ಮೊತ್ತವನ್ನು ಫಲಾನುಭವಿಯು ಮರುಪಾವತಿ ಮಾಡಬೇಕು.

ಈ ಯೋಜನೆಯ ಅಡಿಯಲ್ಲಿ ಸಾಲ ತೆಗೆದುಕೊಂಡವರಿಗೆ ಮೂರರಿಂದ ಆರು ತಿಂಗಳುಗಳ ಕಾಲ ಮೊರಟೋರಿಯಂ ಅವಧಿಯನ್ನು ಹೊಂದಬಹುದಾಗಿದೆ.

Mahila Samriddhi Yojana : ಮಹಿಳಾ ಸಮೃದ್ಧಿ ಯೋಜನೆ : ಯಾರೆಲ್ಲ ಅರ್ಹರು ?

ಅರ್ಜಿದಾರ ಮಹಿಳೆಯರು 18ರಿಂದ 55 ವರ್ಷದ ಒಳಗಿನವರು ಆಗಿರಬೇಕು. ಕೇಂದ್ರ/ರಾಜ್ಯ ಸರ್ಕಾರದಿಂದ ಸೂಚಿಸಲಾದ ಎಸ್ಸಿ /ಎಸ್ಟಿ / ಒಬಿಸಿ ವರ್ಗಗಳಿಗೆ ಸೇರಿದ ಬಡ ವರ್ಗದ ಮಹಿಳೆಯರಾಗಿರಬೇಕು. ಈ ಕುಟುಂಬಗಳ ವಾರ್ಷಿಕ ಆದಾಯ 3 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರಬೇಕು. ಹಾಗೂ ಇವರ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.

ಮಹಿಳಾ ಸಮೃದ್ಧಿ ಯೋಜನೆ : ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ ?

ಅಧಿಕೃತ ವೆಬ್‌ಸೈಟ್‌ ಅಥವಾ ನಿಮ್ಮ ರಾಜ್ಯ ಸರ್ಕಾರದ ಪೋರ್ಟಲ್‌ಗೆ ಭೇಟಿ ನೀಡಬೇಕು.
ಮಹಿಳಾ ಸಮೃದ್ಧಿ ಯೋಜನೆಗೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ. https://nskfdc.nic.in/en/node/add/loan-application ಈ ಲಿಂಕ್​ನ ಮೇಲೆ ಕ್ಲಿಕ್​ ಮಾಡುವ ಮೂಲಕ ಅರ್ಜಿಯನ್ನು ಡೌನ್​ಲೋಡ್​ ಮಾಡಬಹುದಾಗಿದೆ.

ಅರ್ಜಿಯಲ್ಲಿ ಕೇಳಲಾದ ಎಲ್ಲಾ ಮಾಹಿತಿಗಳನ್ನು ಸೂಕ್ತವಾಗಿ ನಮೂದಿಸಿ ಕೇಳಲಾದ ದಾಖಲೆಗಳನ್ನು ಸಲ್ಲಿಸುವ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

What is Mahila Samriddhi Yojana? How to get a loan of Rs. 1.40 lakh ?

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories