ಪಾರದರ್ಶಕ ಆಡಳಿತದೆಡೆಗೆ ಮಹತ್ವದ ಹೆಜ್ಜೆ : ಕಂದಾಯ ನ್ಯಾಯಾಲಯಗಳು ಆನ್ಲೈನ್ನಲ್ಲಿ ಲಭ್ಯ
ರಾಜ್ಯದಲ್ಲಿ ಆಡಳಿತ ಪ್ರಕ್ರಿಯೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ. ಕಂದಾಯ ನ್ಯಾಯಾಲಯಗಳು ಕಾನೂನು ಚೌಕಟ್ಟು ಮೀರಿ ಕೆಲವು ತೀರ್ಮಾನ ಹೊರಡಿಸಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇದರ ತಡೆಗಾಗಿ ಕಂದಾಯ ಇಲಾಖೆ ನೂತನ ಹೆಜ್ಜೆಯಿಟ್ಟಿದೆ. ಕಂದಾಯ ನ್ಯಾಯಾಲಯಗಳನ್ನು ಜನಸ್ನೇಹಿಗೊಳಿಸುವ ಪ್ರಯತ್ನದ ಭಾಗವಾಗಿ ಇನ್ಮುಂದೆ ಕಂದಾಯ ನ್ಯಾಯಾಲಯಗಳು ಆನ್ಲೈನ್ನಲ್ಲಿ ಇರಲಿವೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕಂದಾಯ ಇಲಾಖೆಯಲ್ಲಿ ಆಡಳಿತಾತ್ಮಕ ಪ್ರಕ್ರಿಯೆಯನ್ನು ಸರಳೀಕೃತಗೊಳಿಸುವ ಮೂಲಕ ಜವಾಬ್ದಾರಿಯುತ ಆಡಳಿತವನ್ನು ನೀಡುವುದು ನಮ್ಮ ಗುರಿಯಾಗಿದೆ. ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ದೀರ್ಘಕಾಲೀನ ವ್ಯವಸ್ಥೆಯ ಬದಲಾವಣೆ ವಿಧಾನವನ್ನು ಅನುಸರಿಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದ್ರು.
ಇದನ್ನೂ ಓದಿ: ಕರಾವಳಿ ಭಾಗದ ಜನತೆಗೆ ಗುಡ್ನ್ಯೂಸ್.. ಶೀಘ್ರದಲ್ಲೇ ವಂದೇ ಭಾರತ್ ಎಕ್ಸ್ಪ್ರೆಸ್
ಈ ಹಿಂದೆಯೇ ಕಾನೂನು ಮೀರಿ ಆದೇಶ ನೀಡುವುದನ್ನು ತಡೆಯಲು ನ್ಯಾಯಾಲಯಗಳಲ್ಲಿ RCCMS ಸೇರಿದಂತೆ ಡಿಜಿಟೈಶೇಷನ್ ಮುಖಾಂತರ ಆದೇಶಗಳನ್ನು ನೀಡುವ ವ್ಯವಸ್ಥೆಗೆ ಚಾಲನೆ ನೀಡಲಾಗಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದಡಿ ಇಡಲಾಗಿದ್ದು ನ್ಯಾಯಾಲಯಗಳನ್ನು online ಮುಖಾಂತರ ನಡೆಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ.



