ಅಮೇರಿಕಾದಿಂದ ಪುಟಿನ್ ಬಂಧನ? ಉಕ್ರೇನ್ ಅಧ್ಯಕ್ಷರ ಪ್ರಶ್ನೆಗೆ ಡೊನಾಲ್ಡ್ ಟ್ರಂಪ್ ಉತ್ತರ
America captures Putin: ವಾಷಿಂಗ್ಟನ್: ವೆನೆಜುವೆಲಾದ ಮಾಜಿ ನಾಯಕ ನಿಕೋಲಸ್ ಮಡುರೊ ಅವರನ್ನು ಅಮೆರಿಕದ ಪಡೆಗಳು ಅನಿರೀಕ್ಷಿತ ದಾಳಿಯ ಮೂಲಕ ಬಂಧಿಸಿ ನ್ಯೂಯಾರ್ಕ್ ಜೈಲಿಗೆ ಅಟ್ಟಿದ ಬೆನ್ನಲ್ಲೇ, ಈಗ ಜಗತ್ತಿನ ಗಮನ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರತ್ತ ತಿರುಗಿದೆ. ಪುಟಿನ್ ಅವರಿಗೂ ಇದೇ ರೀತಿಯ ಗತಿ ಒದಗಲಿದೆಯೇ ಎಂಬ ಚರ್ಚೆಗಳು ಈಗ ಜಾಗತಿಕ ರಾಜಕೀಯ ವೇದಿಕೆಯಲ್ಲಿ ಆರಂಭವಾಗಿವೆ.
ಹೊಸ ವರ್ಷದ ಆರಂಭದಲ್ಲೇ ಅಮೆರಿಕದ ಪಡೆಗಳು ಕಾರಕಾಸ್‌ನಲ್ಲಿ ಅನಿರೀಕ್ಷಿತ ಕಾರ್ಯಾಚರಣೆ ನಡೆಸಿ ಮಡುರೊ ಅವರನ್ನು ಬಂಧಿಸಿರುವುದು ಅಮೆರಿಕದ ಮಿತ್ರರಾಷ್ಟ್ರಗಳಿಗೆ ಹೊಸ ಉತ್ಸಾಹ ನೀಡಿದೆ. ಈ ಘಟನೆಯನ್ನು ಉಲ್ಲೇಖಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, “ಒಬ್ಬ ಸರ್ವಾಧಿಕಾರಿಯನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದು ಅಮೆರಿಕಕ್ಕೆ ತಿಳಿದಿದೆ. ಅಮೆರಿಕವು ಮುಂದೆ ಏನು ಮಾಡಬೇಕು ಎಂಬುದು ಅದಕ್ಕೆ ಚೆನ್ನಾಗಿ ಗೊತ್ತು” ಎನ್ನುವ ಮೂಲಕ ಪುಟಿನ್ ವಿರುದ್ಧವೂ ಇಂತಹದ್ದೇ ಕ್ರಮಕ್ಕೆ ಪರೋಕ್ಷವಾಗಿ ಒತ್ತಾಯಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ:
ಆದರೆ, ಉಕ್ರೇನ್ ಅಧ್ಯಕ್ಷರ ಈ ಆಶಯಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಿನ್ನವಾದ ಪ್ರತಿಕ್ರಿಯೆ ನೀಡಿದ್ದಾರೆ. ಪುಟಿನ್ ವಿರುದ್ಧ ಅಂತಹ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಪುಟಿನ್ ಅವರ ನಡವಳಿಕೆಯ ಬಗ್ಗೆ ತಮಗೆ “ತೀವ್ರ ಅಸಮಾಧಾನ” ಇದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
ಹಿನ್ನೆಲೆ ಮತ್ತು ಯುದ್ಧಾಪರಾಧದ ಆರೋಪ:
ಉಕ್ರೇನ್‌ನಲ್ಲಿ ನಡೆದಿದೆ ಎನ್ನಲಾದ ಯುದ್ಧಾಪರಾಧಗಳಿಗೆ ಸಂಬಂಧಿಸಿದಂತೆ ಹೇಗ್‌ನಲ್ಲಿರುವ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ಈಗಾಗಲೇ ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಧನದ ವಾರಂಟ್ ಹೊರಡಿಸಿದೆ. 2022 ರಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧವು ಈಗಲೂ ಮುಂದುವರಿದಿದ್ದು, ಅಮೆರಿಕದ ಇತ್ತೀಚಿನ ನಡೆಗಳು ರಷ್ಯಾವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿವೆ.
ಪರಶುರಾಮ ಥೀಂ ಪಾರ್ಕ್ ಸ್ವಚ್ಛತಾ ಕಾರ್ಯಕ್ಕೆ ಜಿಲ್ಲಾಡಳಿತ ಆದೇಶ: ವಿ ಸುನೀಲ್ ಕುಮಾರ್ ಸಂತಸ
ವೆನೆಜುವೆಲಾದಲ್ಲಿ ಅಮೆರಿಕ ನಡೆಸಿದ ‘ಬಲಪ್ರಯೋಗ’ ನೀತಿಯು ಮಿತ್ರರಾಷ್ಟ್ರಗಳನ್ನು ಹುರಿದುಂಬಿಸಿದೆ ನಿಜ. ಆದರೆ ರಷ್ಯಾದಂತಹ ಪರಮಾಣು ಶಕ್ತಿ ಹೊಂದಿರುವ ದೇಶದ ವಿಷಯದಲ್ಲಿ ಟ್ರಂಪ್ ಸದ್ಯಕ್ಕೆ ಸಂಯಮದ ದಾರಿಯನ್ನು ಆಯ್ಕೆ ಮಾಡಿಕೊಂಡಂತೆ ತೋರುತ್ತಿದೆ.



