ಕಿಡಿಗೇಡಿಗಳ ಕೃತ್ಯಕ್ಕೆ ಚಾರ್ಮಾಡಿ ಘಾಟಿನಲ್ಲಿ ಕಾಡ್ಗಿಚ್ಚು : ಅಪಾಯದಲ್ಲಿ ಅರಣ್ಯ ಸಂಪತ್ತು
ಚಾರ್ಮಾಡಿ ಘಾಟಿಯಲ್ಲಿ ಕಾಡ್ಗಿಚ್ಚು ಉಂಟಾಗಿದ್ದು ಅಪಾರ ಪ್ರಮಾಣದಲ್ಲಿ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಚಾರ್ಮಾಡಿ ಘಾಟಿ ಧಗ ಧಗ ಉರಿಯುತ್ತಿದೆ.
ಯಾರೋ ಕಿಡಿಗೇಡಿಗಳ ಕೃತ್ಯದಿಂದ ಚಾರ್ಮಾಡಿಯಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಅರಣ್ಯದ ಮೇಲ್ಭಾಗ ಹೊತ್ತಿ ಉರಿಯುತ್ತಿದ್ದು, ಅಪಾರ ಪ್ರಮಾಣದಲ್ಲಿ ಅರಣ್ಯ ಸಂಪತ್ತು ಹಾಗೂ ಪ್ರಾಣಿ ಸಂಕುಲಕ್ಕೆ ಹಾನಿಯುಂಟಾಗಿದೆ. ನಿಯಂತ್ರಣ ಮೀರಿ ಈ ಭಾಗದಲ್ಲಿ ಬೆಂಕಿ ಆವರಿಸಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ದಿನದಿಂದ ದಿನಕ್ಕೆ ಕುಸಿಯುತ್ತಿದೆ ಕಾಫಿ ದರ… ಆತಂಕದಲ್ಲಿ ಬೆಳೆಗಾರರು
ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಕಾಡ್ಗಿಚ್ಚು ನಿಯಂತ್ರಣಕ್ಕೆ ಸಮರ್ಪಕ ಕ್ರಮ ಕೈಗೊಳ್ಳಬೇಕಿದ್ದು ಇಲ್ಲವಾದಲ್ಲಿ ಈ ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ವನ್ಯ ಸಂಪತ್ತನ್ನು ನಾಶಗೊಳಿಸುವ ಅಪಾಯವಿದೆ.



