ಜಿಯೋ, ಏರ್​ಟೆಲ್​ ಬಳಕೆದಾರರಿಗೆ ಬಿಗ್​ ಶಾಕ್​ : ರೀಚಾರ್ಜ್​ ದರ ಶೀಘ್ರದಲ್ಲೇ ಮತ್ತಷ್ಟು ಏರಿಕೆ

ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್​ ಜಿಯೋ ಹಾಗೂ ಭಾರ್ತಿ ಏರ್​ಟೆಲ್​, ವೋಡಾಪೋನ್‌ ಐಡಿಯಾ ತನ್ನ ಗ್ರಾಹಕರಿಗೆ ಬಿಗ್​ಶಾಕ್​ ನೀಡಿದೆ. ಈ ವರ್ಷದಲ್ಲಿ ತಮ್ಮ ಪ್ರಿಪೇಯ್ಡ್​ ಹಾಗೂ ಪೋಸ್ಟ್​ಪೇಯ್ಡ್​​ ರೀಚಾರ್ಜ್​ ದರವನ್ನು ಏರಿಕೆ ಮಾಡಲು ಸಿದ್ಧತೆ ನಡೆಸಿವೆ. ಈ ವರ್ಷದ ಜೂನ್​ ತಿಂಗಳ ವೇಳೆಗೆ ರೀಚಾರ್ಜ್​ ದರ ಶೇಕಡಾ 20ರಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ತಮ್ಮ ಸರಾಸರಿ ಪ್ರತಿ ಬಳಕೆದಾರ ಆದಾಯ ಏರಿಕೆ ಮಾಡಿಕೊಳ್ಳಲು ದರ ಏರಿಕೆ ಮಾಡಿದೆ. ಪ್ರಸ್ತುತ ರೀಚಾರ್ಜ್ ದರವು , ಅವುಗಳು 5G ತಂತ್ರಜ್ಞಾನ ಮತ್ತು ನೆಟ್‌ವರ್ಕ್ ವಿಸ್ತರಣೆಗಾಗಿ ಮಾಡಿರುವ ಬೃಹತ್ ಹೂಡಿಕೆಗೆ ಹೋಲಿಸಿದರೆ ತೀರಾ ಕಡಿಮೆ ಇರುವ ಹಿನ್ನೆಲೆಯಲ್ಲಿ ದರ ಏರಿಕೆಯ ನಿರ್ಧಾರಕ್ಕೆ ಬರಲಾಗಿದೆ.

ಇದನ್ನೂ ಓದಿ: ನೀವೂ ಅಮರರಾಗಬಹುದು! ಅನ್ಯಗ್ರಹ ಜೀವಿಗಳಿಗೂ ಲಭ್ಯವಾಗಲಿದೆ ನಿಮ್ಮ ಜೀವನ ಚರಿತ್ರೆ: ಎಲೋನ್ ಮಸ್ಕ್ ಹೊಸ ಪ್ಲಾನ್

ಏರ್‌ಟೆಲ್ ಸಂಸ್ಥೆಯು ತನ್ನ ARPU ಅನ್ನು ಸದ್ಯದ ಮಟ್ಟದಿಂದ 300 ರೂಪಾಯಿಗಳಿಗೆ ಕೊಂಡೊಯ್ಯಲು ನಿರ್ಧರಿಸಿದೆ. ಈ ಗುರಿ ತಲುಪಬೇಕಾದರೆ ಸುಂಕದ ಏರಿಕೆ ಅನಿವಾರ್ಯವಾಗಿದೆ. ಕಂಪನಿಗಳ ಲಾಭದಂಶವನ್ನು ಸುಧಾರಿಸಲು ಮತ್ತು ಗುಣಮಟ್ಟದ ಸೇವೆ ನೀಡಲು ಇದು ಅಗತ್ಯ ಎಂದು ಟೆಲಿಕಾಂ ಸಂಸ್ಥೆಗಳು ತಿಳಿಸಿವೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories