ಕೋಟ ಹಂದಟ್ಟು ಡಾ.ಎಚ್.ವಿ. ಹಂದೆಯವರಿಗೆ ಪದ್ಮಶ್ರೀ ಪುರಸ್ಕಾರ

Padma Shri 2026 Dr Hv Hande : ಕೋಟ : ಖ್ಯಾತ ಸಾಹಿತಿ ಡಾ.ಶಿವರಾಮ ಕಾರಂತರ ಹುಟ್ಟೂರಾಗಿರುವ ಕೋಟಕ್ಕೆ ಭಾರತದ ಪ್ರತಿಷ್ಠಿತ ಪದ್ಮಶ್ರಿ ಒಲಿದು ಬಂದಿದೆ. ಈ ಬಾರಿ ಪದ್ಮಶ್ರೀ ಪಡೆದವರಲ್ಲಿ ಕರ್ನಾಟಕ ಕರಾವಳಿ ಮೂಲದ ಹಿರಿಯ ವ್ಯಕ್ತಿಯೊಬ್ಬರು ಇದ್ದಾರೆ ಅನ್ನೋದು ಕನ್ನಡ ನಾಡಿಗೆ ಹೆಮ್ಮೆಯ ವಿಷಯ. ಉಡುಪಿಯ ಕೋಟ ಮೂಲದ ಡಾ| ಎಚ್.ವಿ. ಹಂದೆಯವರಿಗೆ ಪದ್ಮಶ್ರೀ ದೊರಕಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಂದಟ್ಟಿನ ಪ್ರಸಿದ್ಧ ಹಂದೆ ಮನೆತನದ 99 ರ ಹಿರಿಯ ವೈದ್ಯ ಡಾ. ಎಚ್. ವಿ. ಹಂದೆ ಅವರಿಗೆ ವೈದ್ಯಕೀಯ ಕ್ಷೇತ್ರಕ್ಕಾಗಿ 2026 ರ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ ಲಭಿಸಿದೆ.

ವೃತ್ತಿಯಲ್ಲಿ ವಕೀಲರಾಗಿದ್ದು, ಬ್ರಿಟಿಷ್ ಸರಕಾರದಲ್ಲಿ ಅಧಿಕಾರಿಯಾಗಿ ಗುರುತಿಸಿಕೊಂಡ ಕೋಟದ ಮಾದಪ್ಪ ಹಂದೆ ಅವರ ಪುತ್ರ ಹೆಚ್. ವಿ. ಹಂದೆಯವರು ತಮಿಳುನಾಡಿನಲ್ಲಿ ಎಂ.ಜಿ. ರಾಮಚಂದ್ರನ್ ಅವರು ಮುಖ್ಯಮಂತ್ರಿ ಆಗಿದ್ದಾಗ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
Also Read : ಉಡುಪಿ: ಮಲ್ಪೆ ಸಮೀಪ ಪ್ರವಾಸಿ ದೋಣಿ ಉರುಳಿ ಇಬ್ಬರು ಸಾ*ವು
ಮಂಗಳೂರು, ಚೆನ್ನೈ, ಕೊಯಮುತ್ತೂರಿನಲ್ಲಿ ಉನ್ನತ ವ್ಯಾಸಂಗ ಮುಗಿಸಿದ ಹಂದೆಯವರು ತಮಿಳುನಾಡಿನ ಚೆನ್ನೈಯಲ್ಲಿಯೇ ಹಂದೆ ಆಸ್ಪತ್ರೆ ಸ್ಥಾಪಿಸಿ, ವೈದ್ಯರಾಗಿ ಸೇವೆ ಸಲ್ಲಿಸಿದವರು.

ರಾಜಕೀಯದಲ್ಲಿ ಕುಶಲತೆಯನ್ನು ಸಾಧಿಸಿದ ಹಂದೆಯವರು ಮುಖ್ಯಮಂತ್ರಿ ಎಂಜಿಆರ್ ಅವರ ಅನಾರೋಗ್ಯ ಸಂದರ್ಭದಲ್ಲಿ ಸರಕಾರವನ್ನು ಮುನ್ನಡೆಸಿದವರು. ಕಂಬ ರಾಮಾಯಣವನ್ನು ಇಂಗ್ಲೀಷ್ ಹಾಗೂ ತಮಿಳಿಗೆ ಭಾಷಾಂತರಿಸಿದ ಹಂದೆ ಅವರು ಸಾಹಿತ್ಯ ವಲಯದಲ್ಲಿಯೂ ಗುರುತಿಸಿಕೊಂಡವರು.
Also Read : ವಿ ಗೌತಮ್ ನಾವಡ ಅವರು ವರ್ಡ್ ಕ್ಯಾಂಪ್ ಏಷ್ಯಾ 2026 ಆಯೋಜನಾ ತಂಡಕ್ಕೆ ಸೇರ್ಪಡೆ
Padma Shri 2026 Dr. H.V. Hande from Udupi Kota Handattu Honored for Medical Service



