ಮಟ್ಟು ಪರಿಸರದಲ್ಲಿ ಹಕ್ಕಿ ವೀಕ್ಷಣೆ: 23 ಪ್ರಭೇದಗಳ 219 ಹಕ್ಕಿಗಳ ದಾಖಲೆ

ಉಡುಪಿ : ಉಡುಪಿಗೆ ಬನ್ನಿ ತಂಡದ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಪಿತ್ರೋಡಿ ಹಾಗೂ ಮಟ್ಟು ಪರಿಸರದಲ್ಲಿ ಜನವರಿ 31ರಂದು ಸಂಜೆ ಹಕ್ಕಿ ವೀಕ್ಷಣೆ ಕಾರ್ಯಕ್ರಮ ನಡೆಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಪರಿಸರಾಸಕ್ತರು ಕಾಲ್ನಡಿಗೆಯಲ್ಲಿ ಸುತ್ತಮುತ್ತಲಿನ ಪ್ರದೇಶವನ್ನು ವೀಕ್ಷಿಸಿ, 23 ಪ್ರಭೇದಗಳ 219 ಹಕ್ಕಿಗಳನ್ನು ಪಟ್ಟಿ ಮಾಡಿದರು.
ವೀಕ್ಷಣೆಯ ವೇಳೆ ಬ್ಲಾಕ್ ಹೆಡೆಡ್ ಐಬಿಸ್, ಗುಲಾಬಿ ಕೊರಳಿನ ಗಿಳಿ, ಸಣ್ಣ ಕುಟ್ರ, ಕಾಡು ಗೊರವಂಕ, ಚುಕ್ಕೆ ಬೆಳವ, ಗದ್ದೆ ಮಿಂಚುಳ್ಳಿ, ನೀಲಿ ಮಿಂಚುಳ್ಳಿ, ಕೆಂಪು ಟಿಟ್ಟಿಭ, ದೊಡ್ಡ ಬೆಳ್ಳಕ್ಕಿ, ಕೊಳದ ಬಕ, ಸಣ್ಣ ಕಳ್ಳಿಪೀರ, ಗದ್ದೆಗೊರವ, ಗಲ್ ಸೇರಿದಂತೆ ವಿವಿಧ ಹಕ್ಕಿ ಪ್ರಭೇದಗಳು ಕಂಡುಬಂದವು.

ಇದನ್ನೂ ಓದಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ

ಕಾರ್ಯಕ್ರಮದ ನಂತರ ಮಟ್ಟು ಗುಳ್ಳ ಬೆಳೆಗಾರರೊಂದಿಗೆ ಸಂವಾದ ನಡೆಯಿತು. ಈ ಸಂದರ್ಭ ಮಟ್ಟು ಗುಳ್ಳ ಬೆಳೆಗಾರರ ಸಂಘದ ಪ್ರಬಂಧಕ ಮಟ್ಟು ಲಕ್ಷ್ಮಣ್, ಗಿರೀಶ್ ಆಚಾರ್, ಪ್ರತಿಮಾ ಆಚಾರ್, ಮೇಧಾ ನಾಯಕ್, ರಮ್ಯಾ ಕಾಮತ್, ರಾಜಶ್ರೀ ಎಸ್., ವೈಭವ್ ಯಡಿಯಾಳ್, ವಿದ್ಯಾಶ್ರೀ ಎಸ್., ಪ್ರಸನ್ನ ಉದ್ಯಾವರ ಉಪಸ್ಥಿತರಿದ್ದರು. ಡಾ. ಗಣೇಶ್ ಪ್ರಸಾದ್ ಜಿ. ನಾಯಕ್ ಸ್ವಾಗತಿಸಿ ಕಾರ್ಯಕ್ರಮವನ್ನು ಸಂಯೋಜಿಸಿದರು.

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories