ಕುಂದಾಪುರ : ಎಸ್‌ಪಿಜಿ ಗೋಲ್ಡ್ ಅಂಡ್ ಡೈಮಂಡ್ ಅಂಗಡಿಯಲ್ಲಿ ಕಳವು, ಆರೋಪಿ ಅರೆಸ್ಟ್

ಕುಂದಾಪುರ : ನಗರದ ಶಾಸ್ತ್ರೀ ಸರ್ಕಲ್ ಸಮೀಪದ ಎಸ್‌ಪಿಜಿ ಗೋಲ್ಡ್ ಅಂಡ್ ಡೈಮಂಡ್ (Kundapura SPG Gold and Diamond) ಅಂಗಡಿಯಲ್ಲಿ ಚಿನ್ನ ಖರೀದಿಸುವ ನೆಪದಲ್ಲಿ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.‌

ಜನವರಿ 27ರ ಸಂಜೆ 5.56ರ ಸುಮಾರಿಗೆ ಸುಮಾರು 40 ವರ್ಷ ಪ್ರಾಯದ ಅಪರಿಚಿತ ಗಂಡಸೊಬ್ಬನು ಅಂಗಡಿಗೆ ಬಂದು ಚಿನ್ನದ ಸರವನ್ನು ತೋರಿಸುವಂತೆ ಕೇಳಿದ್ದಾನೆ.

ಈ ವೇಳೆ ಅಂಗಡಿಯ ಸಿಬ್ಬಂದಿಯ ಕಣ್ಣು ತಪ್ಪಿಸಿ ಸುಮಾರು 9 ಗ್ರಾಂ ತೂಕದ, ರೂ.1,25,000 ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ.

Also Read : ಜೈನ ಧರ್ಮದ ನೆಪವೊಡ್ಡಿ ವರ್ಷಕ್ಕೆ 7 ಲಕ್ಷ ರೂಪಾಯಿ ಉಳಿಕೆ; ಧರ್ಮದ ಹೆಸರಲ್ಲಿ ಮಹಾ ಮೋಸ!

ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆಯ ಬಡಗ ಕಜೆಕಾರ್ ಗ್ರಾಮದ ನಿವಾಸಿ ರಮೇಶ್ (42) ಎಂಬಾತನನ್ನು ಬಂಧಿಸಲಾಗಿದೆ.

ಆರೋಪಿಯಿಂದ ಕಳವುಗೈದ ಚಿನ್ನದ ಸರ ಹಾಗೂ ಆತನ ಬಳಿ ಇದ್ದ ರೂ.33,000 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Also Read : ಮತ್ತೆ ಶುರುವಾಗಿದೆ ನಿಫಾ ಹಾವಳಿ : ರಾಜ್ಯ ಆರೋಗ್ಯ ಇಲಾಖೆಯಿಂದ ತೀವ್ರ ಕಟ್ಟೆಚ್ಚರ

Kundapura: SPG Gold and Diamond Jewelry Shop Theft Case Accused Arrested

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories