ಸ್ಟೈಲಿಶ್‌ ಆಗಿ ಕಾಣಿಸುವ ಬಿಳಿ ಶೂ ಖರೀದಿಸಲು ಹಿಂಜರಿಯಬೇಡಿ: ಶುಚಿಗೊಳಿಸುವು ಈ ಸರಳ ವಿಧಾನ ತಿಳಿದುಕೊಳ್ಳಿ

White Shoe Cleaning Tips: ಇಂದಿನ ದಿನಗಳಲ್ಲಿ ಬಟ್ಟೆಗೆ ಮಹತ್ವ ಕೊಟ್ಟಷ್ಟೇ ಕಾಲಿಗೆ ಧರಿಸುವ ಚಪ್ಪಲಿ, ಶೂಗಳಿಗೂ ಒತ್ತು ಕೊಡಲಾಗುತ್ತಿದೆ. ಮ್ಯಾಚಿಂಗ್ ಕಾಲದಲ್ಲಿ ಬಟ್ಟೆಗೆ ಸರಿಯಾಗಿ ಹೊಂದಿಕೆಯಾಗುವಂತಹ ಚಪ್ಪಲಿಗಳನ್ನು ತೊಡುವುದು ಕೂಡಾ ಸ್ಟೈಲಿಶ್‌ ಲುಕ್‌ನ ಭಾಗವಾಗಿದೆ.

ಬಟ್ಟೆಯ ಹಾಗೆ ಚಪ್ಪಲಿಗಳಲ್ಲೂ ಹಲವು ಬಗೆಗಳಿವೆ. ಕ್ಯಾಶುವಲ್‌ ನಿಂದ ಹಿಡಿದು ಒಕೇಷನ್‌ವರೆಗೆ ಧರಿಸಲು ಬಗೆಬಗೆಯ ಚಪ್ಪಲಿ, ಶೂಗಳನ್ನು ಕಾಣಬಹುದು.

ಇಂದಿನ ಫ್ಯಾಷನ್‌ ಯುಗದಲ್ಲಿ ಬಟ್ಟೆ ಡಿಸೈನ್‌ಗಳು ಬದಲಾದಂತೆ ಚಪ್ಪಲಿಯ ಡಿಸೈನ್‌ಗಳು ಕಾಲಕಾಲಕ್ಕೆ ಬಯಲಾಗುತ್ತಿವೆ. ಆದರೆ ಬಿಳಿ ಶೂಗಳು ಮಾತ್ರ ಯಾವಾಗಲೂ ಫ್ಯಾಷನ್‌ನಲ್ಲಿರುತ್ತವೆ.

ಅದು ಸ್ವಚ್ಛ ಹಾಗೂ ಸ್ಟೈಲಿಷ್‌ ಆಗಿ ಕಾಣುವುದಲ್ಲದೇ ಯಾವುದೇ ಉಡುಪಿಗೆ ಫರ್ಫೆಕ್ಟ್‌ ಆಗಿ ಮ್ಯಾಚ್‌ ಆಗುತ್ತದೆ. ಪ್ರತಿ ಬಾರಿ ಧರಿಸಿದಾಗಲೂ ಹೊಸತನದ ಲುಕ್ ನೀಡುತ್ತದೆ.

ಅದಕ್ಕಾಗಿಯೇ ಯುವಕರಿಂದ ವೃತ್ತಿಪರರವರೆಗೂ ಎಲ್ಲರೂ ಬಿಳಿ ಶೂ ಧರಿಸಲು ಇಷ್ಟಪಡುತ್ತಾರೆ. ಆದರೆ ಅದರಲ್ಲೊಂದು ಸಮಸ್ಯೆಯಿದೆ. ಅದೇನಪ್ಪ ಎಂದರೆ ಬಿಳಿ ಶೂಗಳು ಬಹಳ ಬೇಗನೆ ದೂಳು, ಮಣ್ಣು ಸೇರಿ ಕೊಳಕಾಗುತ್ತವೆ.

ತಕ್ಷಣ ಸ್ವಚ್ಛಗೊಳಿಸದಿದ್ದರೆ ಕಲೆಗಳು ಕುಳಿತು ಬಿಳಿ ಶೂ ನೋಡಲು ಬೇಸರ ತರಿಸುತ್ತದೆ. ಹಾಗಾಗಿಯೇ ಬಹಳಷ್ಟು ಜನರು ಬಿಳಿ ಶೂ ಖರೀದಿಸುವ ಮೊದಲು ಎರಡು ಬಾರಿ ಯೋಚಿಸುತ್ತಾರೆ.

ಆದರೆ ಬಿಳಿ ಶೂಗಳನ್ನು ಶುಚಿಗೊಳಿಸುವ ಸರಳ ವಿಧಾನಗಳನ್ನು ಕಲಿತರೆ, ಅದನ್ನು ಬಹಳ ದಿನಗಳವರೆಗೆ ಹೊಸತರಂತೆ ಇಟ್ಟುಕೊಳ್ಳಬಹುದು. ಹಾಗಾದರೆ ಬಿಳಿ ಶೂಗಳನ್ನು ಮನೆಯಲ್ಲಿಯೇ ಸುಲಭವಾಗಿ ಶುಚಿಗೊಳಿಸುವುದು ಹೇಗೆ ಎಂದು ತಿಳಿಯೋಣ ಬನ್ನಿ.

ಪಾತ್ರೆ ತೊಳೆಯುವ ಲಿಕ್ವಿಡ್‌

ಒಂದು ಬಟ್ಟಲಿನಲ್ಲಿ ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್‌ ಅನ್ನು ಬೆರೆಸಿ. ಹಳೆಯ ಹಲ್ಲುಜ್ಜುವ ಬ್ರಷ್ ಅಥವಾ ಮೃದುವಾದ ಬಟ್ಟೆಯಿಂದ ಶೂಗಳನ್ನು ನಿಧಾನವಾಗಿ ಉಜ್ಜಿ. ಕಲೆ ಹೋದ ಮೇಲೆ, ಶುದ್ಧ ನೀರಿನಿಂದ ತೊಳೆಯಿರಿ. ನಂತರ ಸೂರ್ಯನ ಮಂದ ಬೆಳಕಿನಲ್ಲಿ ಒಣಗಲು ಬಿಡಿ.

ಅಡಿಗೆ ಸೋಡಾ ಮತ್ತು ವಿನೆಗರ್

ಬೆಚ್ಚಗಿನ ನೀರಿಗೆ ಅಡಿಗೆ ಸೋಡಾ ಮತ್ತು ಬಿಳಿ ವಿನೆಗರ್ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಬ್ರಷ್ ಬಳಸಿ ವೃತ್ತಾಕಾರದ ಚಲನೆಯಲ್ಲಿ ನಿಮ್ಮ ಶೂಗಳಿಗೆ ಹಚ್ಚಿ. ಒಣಗಿದ ನಂತರ ತೊಳೆಯಿರಿ. ಈ ವಿಧಾನವು ಶೂಗಳ ಮೇಲೆ ಹಳದಿ ಕಲೆಯಾಗಿದ್ದರೆ ಅದನ್ನು ತೆಗೆಯಲು ಸಹಾಯ ಮಾಡುತ್ತದೆ. ಜೊತೆಗೆ ಕೆಟ್ಟ ವಾಸನೆ ಹೋಗಲಾಡಿಸಿ ತಾಜಾತನವನ್ನು ತುಂಬುತ್ತದೆ.

ಬಿಳಿ ಟೂತ್‌ಪೇಸ್ಟ್ ಬಳಕೆ

ಹಲ್ಲುಜ್ಜುವ ಬಿಳಿ ಟೂತ್‌ಪೇಸ್ಟ್ ಅನ್ನು ಬ್ರಷ್‌ಗೆ ಹಚ್ಚಿ. ಕೊಳಯಾದ ಜಾಗದಲ್ಲಿ ಬ್ರೆಷ್‌ ನ ಸಹಾಯದಿಂದ ಉಜ್ಜಿ. ಸ್ವಲ್ಪ ಸಮಯದ ನಂತರ, ಒದ್ದೆ ಬಟ್ಟೆ ಅಥವಾ ನೀರಿನಿಂದ ಅದನ್ನು ಒರೆಸಿ. ಇದು ನಿಮ್ಮ ಶೂಗಳ ಮೇಲ್ಭಾಗವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಅವುಗಳ ಹೊಳಪನ್ನು ಪುನಃಸ್ಥಾಪಿಸುತ್ತದೆ.

ಇದನ್ನೂ ಓದಿ: ತುಪ್ಪ ಹಚ್ಚಿ ಕೂದಲಿನ ಅಂದ ಹೆಚ್ಚಿಸಿ! ಇಲ್ಲಿವೆ 8 ಅದ್ಭುತ ಪ್ರಯೋಜನಗಳು

ನಿಂಬೆ ಹಣ್ಣು ಮತ್ತು ಉಪ್ಪು

ಅರ್ಧ ಕತ್ತರಿಸಿದೆ ನಿಂಬೆಹಣ್ಣನ ಹೋಳನ್ನು ತೆಗೆದುಕೊಳ್ಳಿ. ಅದರ ಮೇಲೆ ಉಪ್ಪು ಸಿಂಪಡಿಸಿ. ಕಲೆ ಇರುವ ಜಾಗಕ್ಕೆ ಉಜ್ಜಿ. 10-15 ನಿಮಿಷಗಳ ನಂತರ, ಅದನ್ನು ನಿಧಾನವಾಗಿ ಒರೆಸಿ. ಇದು ಹಳೆಯ ಕಲೆಗಳನ್ನು ಸಹ ಸಡಿಲಗೊಳಿಸುತ್ತದೆ ಮತ್ತು ನಿಮ್ಮ ಶೂಗಳ ಬಣ್ಣವನ್ನು ರಿಫ್ರೆಶ್ ಮಾಡುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories