ತುಪ್ಪ ಹಚ್ಚಿ ಕೂದಲಿನ ಅಂದ ಹೆಚ್ಚಿಸಿ! ಇಲ್ಲಿವೆ 8 ಅದ್ಭುತ ಪ್ರಯೋಜನಗಳು
Ghee Apply on Hair: ಆಯುರ್ವೇದದಲ್ಲಿ ತುಪ್ಪವನ್ನು ಕೇವಲ ಆಹಾರವಾಗಿ ಮಾತ್ರವಲ್ಲದೆ, ಇಡೀ ದೇಹಕ್ಕೆ ಚೈತನ್ಯ ನೀಡುವ ‘ರಸಾಯನ’ ಎಂದು ಪರಿಗಣಿಸಲಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಹೇರ್ ಕೇರ್ ಉತ್ಪನ್ನಗಳಿಗಿಂತ ನೈಸರ್ಗಿಕವಾಗಿ ಸಿಗುವ ಶುದ್ಧ ಹಸುವಿನ ತುಪ್ಪವು ಕೂದಲಿನ ಆರೋಗ್ಯಕ್ಕೆ ರಾಮಬಾಣವಾಗಿದೆ. ತುಪ್ಪದಲ್ಲಿರುವ ಜೀವಸತ್ವಗಳು ಮತ್ತು ಕೊಬ್ಬಿನಾಮ್ಲಗಳು ಕೂದಲನ್ನು ಬುಡದಿಂದಲೇ ಸದೃಢಗೊಳಿಸುತ್ತವೆ.
ಕೂದಲಿಗೆ ತುಪ್ಪವನ್ನು ಹಚ್ಚುವುದರಿಂದ ಸಿಗುವ ಪ್ರಮುಖ ಪ್ರಯೋಜನವೆಂದರೆ ಅದು ಕೂದಲಿಗೆ ‘ಗ್ಲಾಸ್ ಹೇರ್’ನಂತಹ ನೈಸರ್ಗಿಕ ಹೊಳಪನ್ನು ನೀಡುತ್ತದೆ. ತುಪ್ಪದಲ್ಲಿರುವ ಒಮೆಗಾ-3 ಮತ್ತು ಒಮೆಗಾ-9 ಕೊಬ್ಬಿನಾಮ್ಲಗಳು ಕೂದಲಿನ ಪ್ರತಿಯೊಂದು ಎಳೆಯನ್ನು ಮೃದುಗೊಳಿಸಿ, ಕಾಂತಿಯುತವಾಗಿ ಕಾಣುವಂತೆ ಮಾಡುತ್ತವೆ. ಅಷ್ಟೇ ಅಲ್ಲದೆ, ಇದು ತಲೆಬುರುಡೆಯ ರಕ್ತಪರಿಚಲನೆಯನ್ನು ಸುಧಾರಿಸಿ ಕೂದಲಿನ ಬೆಳವಣಿಗೆಗೆ ಪೂರಕವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ಅತಿಯಾದ ಉಷ್ಣಾಂಶದ ಸಾಧನಗಳ ಬಳಕೆಯಿಂದ ಅಥವಾ ಪರಿಸರದ ಮಾಲಿನ್ಯದಿಂದ ಕೂದಲು ಶುಷ್ಕವಾಗಿದ್ದರೆ (Frizz), ತುಪ್ಪವು ಒಂದು ಅದ್ಭುತ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಇದು ತಲೆಹೊಟ್ಟು ಮತ್ತು ತಲೆಬುರುಡೆಯ ತುರಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕೂದಲಿನ ತುದಿಯಲ್ಲಿ ಸೀಳುವಿಕೆ (Split ends) ಕಾಣಿಸಿಕೊಂಡರೆ, ಆ ಭಾಗಕ್ಕೆ ತುಪ್ಪ ಹಚ್ಚುವುದರಿಂದ ಅದು ಕೂದಲಿಗೆ ಅಗತ್ಯವಾದ ಆರ್ದ್ರತೆಯನ್ನು ನೀಡಿ ಮುಂದಿನ ಹಾನಿಯನ್ನು ತಡೆಯುತ್ತದೆ.
ಸ್ಯಾನಿಟರಿ ಪ್ಯಾಡ್ ಬಳಕೆಗೆ ಬ್ರೇಕ್ : ಸರ್ಕಾರದಿಂದ ವಿದ್ಯಾರ್ಥಿನಿಯರಿಗೆ ಸಿಗಲಿದೆ ಮುಟ್ಟಿನ ಕಪ್
ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿಗೆ ಕೂದಲು ಬೆಳ್ಳಗಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಆಯುರ್ವೇದದ ಪ್ರಕಾರ, ದೇಹದ ಪಿತ ದೋಷದ ಅಸಮತೋಲನದಿಂದ ಹೀಗಾಗುತ್ತದೆ. ತುಪ್ಪವು ಪಿತ ದೋಷವನ್ನು ಸಮತೋಲನಗೊಳಿಸಿ, ಕೂದಲಿನ ನೈಸರ್ಗಿಕ ಬಣ್ಣವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಅಕಾಲಿಕ ನರೆಯನ್ನು ತಡೆಯಲು ಇದು ಪ್ರಶಸ್ತವಾದ ಮನೆಮದ್ದಾಗಿದೆ.
ಬಳಸುವ ವಿಧಾನ:
ಸುಮಾರು ಎರಡು ಚಮಚ ಶುದ್ಧ ಹಸುವಿನ ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ, ಅದನ್ನು ಕೂದಲಿನ ಬುಡಕ್ಕೆ 5-10 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ನಂತರ ಬಿಸಿ ನೀರಿನಲ್ಲಿ ಅದ್ದಿದ ಟವಲ್ ಅನ್ನು ಕೂದಲಿಗೆ ಸುತ್ತಿ ಹಬೆ (Steam) ನೀಡುವುದರಿಂದ ತುಪ್ಪದ ಅಂಶಗಳು ಕೂದಲಿನ ಆಳಕ್ಕೆ ಇಳಿಯುತ್ತವೆ. ಸುಮಾರು 1 ಗಂಟೆಯ ನಂತರ ಮೃದುವಾದ ಶಾಂಪೂ ಬಳಸಿ ಕೂದಲನ್ನು ತೊಳೆದರೆ ಅತ್ಯುತ್ತಮ ಫಲಿತಾಂಶ ಪಡೆಯಬಹುದು.



