ಸಾಕ್ಷರತಾ ಪ್ರಮಾಣದಲ್ಲಿ ವಿಶೇಷ ಸಾಧನೆ : ಶೀಘ್ರದಲ್ಲೇ ಉಡುಪಿ ರಾಜ್ಯದಲ್ಲೇ ನಂ.1 ಸಾಕ್ಷರ ಜಿಲ್ಲೆ ಗರಿಮೆ

Udupi Literacy : ಉಡುಪಿ : ಸಾಕ್ಷರತೆಯ ಪ್ರಮಾಣದಲ್ಲಿ ನಮ್ಮ ಉಡುಪಿ ಜಿಲ್ಲೆ ವಿಶೇಷ ಸಾಧನೆಗೈದಿದೆ. ಶೀಘ್ರದಲ್ಲಿಯೇ ಉಡುಪಿ ಜಿಲ್ಲೆಯು ರಾಜ್ಯದ ನಂ.1 ಸಾಕ್ಷರ ಜಿಲ್ಲೆ ಎಂಬ ಕೀರ್ತಿಗೆ ಭಾಜನವಾಗಲಿದ್ದು ಈ ಸಂಬಂಧ ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆ.
ಸಾಕ್ಷರತಾ ಜಿಲ್ಲೆ ಘೋಷಣೆಗೆ ಆಯಾ ಗ್ರಾಮ ಪಂಚಾಯ್ತಿ ಪಿಡಿಓಗಳಿಂದ ದೃಢೀಕರಣ ಪ್ರಮಾಣ ಪತ್ರದ ಅವಶ್ಯಕತೆಯಿದ್ದು ಈ ಸಂಬಂಧ ಅಧಿಕಾರಿಗಳು ಪ್ರಮಾಣ ಪತ್ರ ಕಲೆ ಹಾಕುವುದರಲ್ಲಿ ನಿರತರಾಗಿದ್ದಾರೆ.
ರಾಜ್ಯ ಸರ್ಕಾರದ ಸಾಕ್ಷರತಾ ಯೋಜನೆಯ ಅಡಿಯಲ್ಲಿ 15 ಗ್ರಾಮ ಪಂಚಾಯ್ತಿಗಳನ್ನು ಆಯ್ಕೆಮಾಡಿಕೊಂಡು ಅಕ್ಷರಾಭ್ಯಾಸ ಮಾಡಿಸಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ 6158 ಮಂದಿ ನವಸಾಕ್ಷರರ ಸಾಲಿಗೆ ಸೇರಿದ್ದು ಈ ಮೂಲಕ ಉಡುಪಿ ಜಿಲ್ಲೆಯ ಸಾಕ್ಷರತಾ ಪ್ರಮಾಣ 95 ಪ್ರತಿಶತಕ್ಕೆ ಏರಿಕೆ ಕಂಡಿದೆ. ಉಳಿದ 5 ಪ್ರತಿಶತ ಜನರಿಗೂ ಶೀಘ್ರದಲ್ಲಿಯೇ ಅಕ್ಷರಾಭ್ಯಾಸ ಕಲಿಸಲು ತಯಾರಿ ನಡೆದಿದೆ.
Also Read : ಜನನ-ಮರಣ ಪ್ರಮಾಣ ಪತ್ರ ಪಡೆಯುವುದು ಮತ್ತಷ್ಟು ಸುಲಭ; ಆನ್ಲೈನ್ನಲ್ಲೇ ಸಿಗಲಿದೆ ಮಾಹಿತಿ
ನವಸಾಕ್ಷರರಿಗೆ ನೀಡುವ ಪ್ರಮಾಣ ಪತ್ರವು 7ನೇ ತರಗತಿಯ ವಿದ್ಯಾಭ್ಯಾಸಕ್ಕೆ ಸಮನಾಗಿ ಇರುತ್ತದೆ. 95 ಪ್ರತಿಶತ ಸಾಕ್ಷರರಿದ್ದರೂ ಆ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರ ಜಿಲ್ಲೆ ಎಂದೇ ಘೋಷಿಸಲಾಗುತ್ತದೆ.
ಆದರೂ ಉಳಿದ 5 ಪ್ರತಿಶತ ಜನರಿಗೂ ಶಿಕ್ಷಣ ನೀಡುತ್ತೇವೆ. 3 ತಿಂಗಳು ಶಿಕ್ಷಣ ನೀಡಿ ಬಳಿಕ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡಿದ್ದೇವೆ ಎಂದು ಉಡುಪಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಯೋಗ ನರಸಿಂಹ ಸ್ವಾಮಿ ಕೆ.ಎಂ ಮಾಹಿತಿ ನೀಡಿದ್ದಾರೆ.
Also Read : ಉಡುಪಿ ಜಿಲ್ಲಾ ರೈತ ಸಂಘದಿಂದ ಸಿದ್ದಾಪುರ ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಣೆ: ಸ್ಥಳ ಪರಿಶೀಲನೆ
Big Win for Udupi How this Coastal District is Topping Karnatakas Literacy Charts



