ವಿಜಯ್-ರಶ್ಮಿಕಾ ಮಂದಣ್ಣ ‘ರಣಬಾಲಿ’! ಮದುವೆ ಬೆನ್ನಲ್ಲೇ ಒಟ್ಟಿಗೆ ನಟಿಸಲಿರುವ ಚಿತ್ರದ ಫಸ್ಟ್ ಲುಕ್ ರಿಲೀಸ್

Vijay Deverakonda Rashmika Mandanna in Ranabaali | Ranabaali First Look: ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ದೇವರಕೊಂಡ ಮತ್ತು ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ತಮ್ಮ ದೀರ್ಘಕಾಲದ ಪ್ರೇಮ ಸಂಬಂಧವನ್ನು ಅಧಿಕೃತಗೊಳಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮದ ನಡುವೆಯೇ ಅವರ ಅಭಿಮಾನಿಗಳಿಗೆ ಚಿತ್ರತಂಡ ಮತ್ತೊಂದು ಸಿಹಿ ಸುದ್ದಿ ನೀಡಿದೆ.

ಉದಯಪುರದಲ್ಲಿ ಅದ್ಧೂರಿ ಮದುವೆ:

ಕಳೆದ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿಜಯ್ ಮತ್ತು ರಶ್ಮಿಕಾ ತೆಲುಗು ಸಂಪ್ರದಾಯದಂತೆ ವಿವಾಹವಾದರು. ಕೇವಲ ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದ ಈ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಶ್ಮಿಕಾ ಮಂದಣ್ಣ ಹಂಚಿಕೊಂಡ ಮದುವೆಯ ಪೋಸ್ಟ್ ಏಷ್ಯಾದಲ್ಲೇ ಅತಿ ಹೆಚ್ಚು ಲೈಕ್ಸ್ ಪಡೆದ ಪೋಸ್ಟ್ ಎಂಬ ದಾಖಲೆ ನಿರ್ಮಿಸಿದೆ.

ViRosh wedding: ವೈರಲ್ ಆದ ‘ವಿರೋಶ್’ ವಿವಾಹ; ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರಶ್ಮಿಕಾ ಮಂದಣ್ಣ

‘ರಣಬಲಿ’ ಚಿತ್ರದ ಫಸ್ಟ್ ಗ್ಲಿಂಪ್ಸ್:

ದಂಪತಿಗಳಾದ ಬೆನ್ನಲ್ಲೇ ಇವರಿಬ್ಬರು ನಟಿಸಿರುವ ಹೊಸ ಚಿತ್ರ ‘ರಣಬಾಲಿ’ (Ranabaali) ಚಿತ್ರದ ಪೋಸ್ಟರ್ ಮತ್ತು ಮೊದಲ ನೋಟ (First Glimpse) ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿಜಯ್ ‘ರಣಬಾಲಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರೆ, ರಶ್ಮಿಕಾ ‘ಜಯಮ್ಮ’ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. “ನಮ್ಮ ರಣಬಾಲಿ ಮತ್ತು ಜಯಮ್ಮ… ಎಂದೆಂದಿಗೂ ಜೊತೆಯಾಗಿ” ಎಂಬ ಶೀರ್ಷಿಕೆಯಡಿ ಚಿತ್ರತಂಡ ಈ ಪೋಸ್ಟರ್ ಅನ್ನು ಹಂಚಿಕೊಂಡಿದೆ. ಈ ಜೋಡಿ ಸುಮಾರು 7 ವರ್ಷಗಳ ನಂತರ ಮತ್ತೆ ಬೆಳ್ಳಿ ಪರದೆಯ ಮೇಲೆ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಅಭಿಮಾನಿಗಳ ಪ್ರತಿಕ್ರಿಯೆ:

ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು “ರೀಲ್ ಕೆಮಿಸ್ಟ್ರಿ ಈಗ ರಿಯಲ್ ಲೈಫ್ ಕೆಮಿಸ್ಟ್ರಿ ಆಗಿದೆ” ಎಂದು ಸಂಭ್ರಮಿಸುತ್ತಿದ್ದಾರೆ. “ಇಬ್ಬರೂ ಮದುವೆಯಾದ ಮೇಲೆ ಈ ವಿಡಿಯೋ ನೋಡಲು ಇನ್ನೂ ಸುಂದರವಾಗಿ ಕಾಣುತ್ತಿದೆ” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories