ಬೆಂಗಳೂರು: ಪ್ರಮುಖ ಇ-ಕಾಮರ್ಸ್ ಸಂಸ್ಥೆಯಾದ ಫ್ಲಿಪ್ಕಾರ್ಟ್ನ ಕ್ವಿಕ್ ಕಾಮರ್ಸ್ ವಿಭಾಗವಾದ ‘ಫ್ಲಿಪ್ಕಾರ್ಟ್ ಮಿನಿಟ್ಸ್’ (Flipkart Minutes) ಬೆಂಗಳೂರಿನಲ್ಲಿ ಖಾಲಿ ಇರುವ ಫೀಲ್ಡ್ ರಿಕ್ರೂಟರ್ (Field Recruiter) ಹುದ್ದೆಗಳ ಭರ್ತಿಗೆ (Field Recruiter post in Bengaluru) ಮುಂದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು (Job opportunity from Flipkart Minutes) ಆಹ್ವಾನಿಸಲಾಗಿದೆ.
ಪ್ರಮುಖ ಜವಾಬ್ದಾರಿಗಳು:
* ಡೆಲಿವರಿ ಎಕ್ಸಿಕ್ಯೂಟಿವ್ಗಳನ್ನು ಹುಡುಕುವುದು, ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು ಮತ್ತು ತರಬೇತಿ ನೀಡುವುದು.
* ನೇಮಕಾತಿ ಗುರಿಗಳನ್ನು (Hiring Targets) ಪರಿಣಾಮಕಾರಿಯಾಗಿ ತಲುಪುವುದು.
* ನೇಮಕಾತಿ ಪ್ರಕ್ರಿಯೆಯ ಹೊಸ ಟ್ರೆಂಡ್ಗಳ ಬಗ್ಗೆ ಅಪ್ಡೇಟ್ ಆಗಿರುವುದು.
* ನೇಮಕಾತಿಗೆ ಸಂಬಂಧಿಸಿದ ನಿಖರವಾದ ದಾಖಲೆಗಳನ್ನು ನಿರ್ವಹಿಸುವುದು.
ಎಲ್ಪಿಜಿ vs ಪಿಎನ್ಜಿ: ಸಿಲಿಂಡರ್ ಕೊರತೆ ಇದ್ರೂ ಪೈಪ್ ಗ್ಯಾಸ್ಗೆ ಸಮಸ್ಯೆಯಿಲ್ಲ ಏಕೆ?
ಅಗತ್ಯವಿರುವ ಕೌಶಲ್ಯ ಮತ್ತು ಅರ್ಹತೆಗಳು:
* ಫೀಲ್ಡ್-ಬೇಸ್ಡ್ ರಿಕ್ರೂಟಿಂಗ್ನಲ್ಲಿ (ಕ್ಷೇತ್ರ ಮಟ್ಟದ ನೇಮಕಾತಿ) ಅನುಭವವಿರಬೇಕು.
* ಅತ್ಯುತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.
* ಈ ಹಿಂದೆ ಡೆಲಿವರಿ ಎಕ್ಸಿಕ್ಯೂಟಿವ್ಗಳ ನೇಮಕಾತಿ ಮಾಡಿದ ಅನುಭವವಿದ್ದರೆ ಅಂತಹ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗೆ ಆಸಕ್ತಿ ಇರುವ ಅಭ್ಯರ್ಥಿಗಳು ಕಂಪನಿಯು ನೀಡಿರುವ ಅಧಿಕೃತ ಗೂಗಲ್ ಫಾರ್ಮ್ (Google Form) ಅನ್ನು ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡಲು ಇಚ್ಛಿಸುವ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
[youtube https://www.youtube.com/watch?v=FGpRUF5yn_Q]



