ಸಂಪೂರ್ಣ ಹದಗೆಟ್ಟ ಪಾಕಿಸ್ತಾನ ಆರ್ಥಿಕತೆ : ಕಾಸಿಲ್ಲದೇ ಗಣರಾಜ್ಯೋತ್ಸವ ಆಚರಣೆಯೇ ಬ್ಯಾನ್​

ಮಾರ್ಚ್23ರಂದು ನಡೆಯಬೇಕಿದ್ದ ಅದ್ಧೂರಿ ಗಣರಾಜ್ಯೋತ್ಸವ ಆಚರಣೆಯನ್ನು ಪಾಕಿಸ್ತಾನ ಸರ್ಕಾರ ರದ್ದುಗೊಳಿಸಿದೆ.

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಸಂಪೂರ್ಣ ದಿವಾಳಿತನವನ್ನು ಎದುರಿಸುತ್ತಿದೆ. ಪೆಟ್ರೋಲ್​ ಹಾಗೂ ಗ್ಯಾಸ್​ಗಳಿಗೆ ಅಭಾವ ಒಂದೆಡೆಯಾದರೆ ಮತ್ತೊಂದೆಡೆ ಆರ್ಥಿಕ ಬಿಕ್ಕಟ್ಟು ಪಾಕಿಸ್ತಾನದ ಜೀವ ಹಿಂಡುತ್ತಿದೆ. ಈ ಎಲ್ಲದರ ನಡುವೆ ಮಿಲಿಟರಿ ಪರೇಡ್​ ನಡೆಸಲು ಕೂಡ ಪಾಕಿಸ್ತಾನಕ್ಕೆ ಇಂಧನ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್23ರಂದು ನಡೆಯಬೇಕಿದ್ದ ಅದ್ಧೂರಿ ಗಣರಾಜ್ಯೋತ್ಸವ ಆಚರಣೆಯನ್ನು ಪಾಕಿಸ್ತಾನ ಸರ್ಕಾರ ರದ್ದುಗೊಳಿಸಿದೆ.

ಅಮೆರಿಕ ಇಸ್ರೇಲ್​ ಹಾಗೂ ಇರಾನ್​ ನಡುವಿನ ಯುದ್ಧದಿಂದಾಗಿ ಪಾಕಿಸ್ತಾನದಲ್ಲಿಯೂ ತೈಲ ಬಿಕ್ಕಟ್ಟು ಸೃಷ್ಠಿಯಾಗಿದೆ. ಹೀಗಾಗಿ ಈ ವರ್ಷ ಪಾಕಿಸ್ತಾನಕ್ಕೆ ತನ್ನ ಸೇನಾಬಲ ಪ್ರದರ್ಶಿಸಲು ಇಂಧನ ಕೂಡ ಇಲ್ಲದಂತಾಗಿದೆ. ಟ್ಯಾಂಕ್​ ಕ್ಷಿಪಣಿಗಳ ಪ್ರದರ್ಶನಕ್ಕೆ ಸರ್ಕಾರದ ಖಜಾನೆಯಲ್ಲಿ ಕಾಸಿಲ್ಲದೇ ಈ ಬಾರಿಯ ಗಣರಾಜ್ಯೋತ್ಸವ ಆಚರಣೆಯೇ ರದ್ದಾಗಿದ್ದು ವಿಶ್ವಮಟ್ಟದಲ್ಲಿ ಪಾಕಿಸ್ತಾನ ತಲೆತಗ್ಗಿಸುವಂತಾಗಿದೆ.

ಇದನ್ನೂ ಓದಿ: ಏನಿದು ಹಿಜ್ಬುಲ್ಲಾ? ಲೆಬನಾನ್‌ ದೇಶದ ಸೈನ್ಯಕ್ಕಿಂತ ಬಲಶಾಲಿ ಈ ಉಗ್ರ ಸಂಘಟನೆ!

ಈ ಸಂಬಂಧ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರ ಕಚೇರಿಯು ಸಾಮಾಜಿಕ ಜಾಲತಾಣ ‘ಎಕ್ಸ್‘ನಲ್ಲಿ ಮಾಹಿತಿ ನೀಡಲಾಗಿದೆ. ಈ ಬಾರಿ ಯಾವುದೇ ರೀತಿಯ ಮಿಲಿಟರಿ ಮೆರವಣಿಗೆ ಇರುವುದಿಲ್ಲ. ಸರಳವಾಗಿ ಧ್ವಜಾರೋಹಣ ಕಾರ್ಯಕ್ರಮ ಮಾತ್ರ ಇರಲಿದೆ. ಯಾವುದೇ ಸರ್ಕಾರಿ ಇಲಾಖೆಗಳು ಕೂಡ ದೊಡ್ಡ ಮಟ್ಟದ ಕಾರ್ಯಕ್ರಮ ಇಟ್ಟುಕೊಳ್ಳಬೇಡಿ. ಯಾರೂ ಹಣ ವ್ಯಯಿಸಬೇಡಿ ಎಂದು ಸಾರ್ವಜನಿಕರಿಗೂ ಸೂಚನೆ ನೀಡಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories