ರೈಲ್ವೆ ಪ್ರಯಾಣಿಕರ ಗಮನಕ್ಕೆ : ರೈಲ್ವೆ ಟಿಕೆಟ್ ಕ್ಯಾನ್ಸಲ್ ನಿಯಮಾವಳಿಯಲ್ಲಿ ಪ್ರಮುಖ ಬದಲಾವಣೆ
ಭಾರತೀಯ ರೈಲ್ವೆ ಇಲಾಖೆಯಲ್ಲಿ ರೈಲ್ವೆ ಟಿಕೆಟ್ಗಳ ಮರುಪಾವತಿ ವಿಚಾರದಲ್ಲಿ ಅನೇಕ ಮರುಪಾವತಿ ಸ್ಲ್ಯಾಬ್ಗಳನ್ನು ಪರಿಚಯಿಸಿದೆ.
ನವದೆಹಲಿ : ಭಾರತೀಯ ರೈಲ್ವೆ ಇಲಾಖೆಯಲ್ಲಿ ರೈಲ್ವೆ ಟಿಕೆಟ್ಗಳ ಮರುಪಾವತಿ (Indian Railway Ticket Cancel Rules) ವಿಚಾರದಲ್ಲಿ ಭಾರತೀಯ ರೈಲ್ವೆ ಇಲಾಖೆ ಹಲವು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದೆ.
ರೈಲು ನಿರ್ಗಮನದ 8 ಗಂಟೆಗಳ ಮೊದಲು ಟಿಕೆಟ್ ರದ್ದತಿ ಮಾಡಿದ ಪ್ರಯಾಣಿಕರಿಗೆ ಮಾತ್ರ ಇನ್ಮುಂದೆ ರೀಫಂಡ್ ದೊರೆಯಲಿದೆ. ಇದರ ಜೊತೆಯಲ್ಲಿ ಇನ್ನೂ ಅನೇಕ ಮರುಪಾವತಿ ಸ್ಲ್ಯಾಬ್ಗಳನ್ನು ಪರಿಚಯಿಸಲಾಗಿದ್ದು, ಈ ಎಲ್ಲಾ ನಿಯಮಗಳು ಏಪ್ರಿಲ್ 1 ರಿಂದ 15ರ ಒಳಗಾಗಿ ಜಾರಿಗೆ ಬರಲಿದೆ.
ಈ ಹಿಂದೆ ರೈಲು ಬಿಡುವ 4 ಗಂಟೆಗಳ ಮೊದಲು ಟಿಕೆಟ್ ರದ್ದತಿ ಮಾಡಿದರೆ ಪ್ರಯಾಣಿಕರಿಗೆ ರೀಫಂಡ್ ದೊರೆಯುತ್ತಿತ್ತು. ಆದರೆ ಇದೀಗ ಈ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. 72 ಗಂಟೆಗಳಿಗಿಂತ ಮೊದಲು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಕನಿಷ್ಠ ಶುಲ್ಕ ಮಾತ್ರ ಕಡಿತಗೊಳ್ಳಲಿದೆ. 24-72 ಗಂಟೆಗಳ ಒಳಗಾಗಿ 75 ಪರ್ಸೆಂಟ್ ಮರುಪಾವತಿ, 8 ರಿಂದ 24 ಗಂಟೆ ಅವಧಿಯಲ್ಲಿ ಶೇಕಡಾ 50ರಷ್ಟು ರೀಫಂಡ್ ಪ್ರಯಾಣಿಕರಿಗೆ ದೊರಕಲಿದೆ.
ಇದನ್ನೂ ಓದಿ: Flying Taxis : ಬೆಂಗಳೂರಿನಲ್ಲಿ ಸಂಚಾರ ಕ್ರಾಂತಿ: ಇಂದಿನಿಂದ ಆರಂಭವಾಗಲಿದೆ ಏರ್ ಟ್ಯಾಕ್ಸಿ ಪ್ರಾಯೋಗಿಕ ಸಂಚಾರ
ಇನ್ನು ಇದರ ಜೊತೆಯಲ್ಲಿ ಪ್ರಯಾಣಿಕರಿಗೆ ಅನೇಕ ಅನುಕೂಲಗಳನ್ನೂ ಮಾಡಿಕೊಡಲಾಗಿದೆ. ರೈಲು ನಿರ್ಗಮಿಸುವ ಕೊನೆಯ ಅರ್ಧ ಗಂಟೆಯಲ್ಲಿಯೂ ಪ್ರಯಾಣಿಕರು ಬೋರ್ಡಿಂಗ್ ನಿಲ್ದಾಣ ಬದಲಿಸಬಹುದಾಗಿದೆ.
ನಕಲಿ ಬುಕ್ಕಿಂಗ್ಗಳ ತಡೆಗಾಗಿ ತತ್ಕಾಲ್ ಟಿಕೆಟ್ನಲ್ಲಿ ಆಧಾರ್ ಆಧರಿತ ಒಟಿಪಿ ವ್ಯವಸ್ಥೆ ಜಾರಿಗೊಳಿಸಲಾಗಿದೆ.



