ಮುಷ್ಕರಕ್ಕೂ ಮುನ್ನ ಸಾರಿಗೆ ನೌಕರರಿಗೆ ಗುಡ್‌ನ್ಯೂಸ್‌: 11 ತಿಂಗಳ ಹಿಂಬಾಕಿ ಬಿಡುಗಡೆ – ಸಾಧನಾ ಸಮಾವೇಶಕ್ಕೆ ವಿಘ್ನ ಇಲ್ಲ!

ಮೇ 20ರಂದು ಮೂರು ವರ್ಷ ಪೂರೈಸುತ್ತಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕೆ ಹೋರಾಟದ ಬಿಸಿ ಮುಟ್ಟಿಸಲು ಸಾರಿಗೆ ಇಲಾಖೆ ನೌಕರರು ಅಣಿಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತಿದೆ.

ಮೇ 20ರಂದು ಮೂರು ವರ್ಷ ಪೂರೈಸುತ್ತಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕೆ ಹೋರಾಟದ ಬಿಸಿ ಮುಟ್ಟಿಸಲು ಸಾರಿಗೆ ಇಲಾಖೆ ನೌಕರರು ಅಣಿಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತಿದೆ.ಮೇ 20ರಂದು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾದ ಬೆನ್ನಲ್ಲೇ ರಾಜ್ಯ ಸರ್ಕಾರವು ಬಿಎಂಟಿಸಿ ನೌಕರರಿಗೆ ಗುಡ್ನ್ಯೂಸ್ ನೀಡಿದೆ.

ಹೌದು..! ಸಾರಿಗೆ ಇಲಾಖೆ ನೌಕರರ ಮುಷ್ಕರಕ್ಕೂ ಮುನ್ನವೇ ನೌಕರರ ಖಾತೆಗೆ 11 ತಿಂಗಳ ಹಿಂಬಾಕಿ ಹಣವನ್ನು ಜಮೆ ಮಾಡಲಾಗಿದೆ. ರಾಜ್ಯ ಸರ್ಕಾರದ 4 ನಿಗಮಗಳಿಗೆ ರಾಜ್ಯ ಸರ್ಕಾರ 26ತಿಂಗಳ ಹಿಂಬಾಕಿ ನೀಡಬೇಕಿದೆ. ಇದಕ್ಕಾಗಿ ಮೊದಲ ಹಂತದಲ್ಲಿ 450 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಲಾಗಿದೆ. ಹೀಗಾಗಿ 11 ತಿಂಗಳ ಹಿಂಬಾಕಿ ಹಣ ಬಿಎಂಟಿಸಿ ನೌಕರರ ಖಾತೆಗೆ ಜಮೆ ಆಗಿದೆ.

Also Read: ಬಿಯರ್ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌ : ಬಿಯರ್‌ ಸವಿಯೋಕೆ ಗೋವಾಕ್ಕೆ ಹೋಗಬೇಕಿಲ್ಲ, ಕರ್ನಾಟಕದಲ್ಲಿ ಅಗ್ಗದ ಬಿಯರ್‌

ಬಿಎಂಟಿಸಿ ಜೊತೆಯಲ್ಲಿ ಇನ್ನುಳಿದ 3 ನಿಗಮಗಳ ನೌಕರರಿಗೂ 11 ತಿಂಗಳ ಹಿಂಬಾಕಿ ಮೊತ್ತ ಪಾವತಿಯಾಗಿದೆ. ಇನ್ನುಳಿದ 15 ತಿಂಗಳ ಹಿಂಬಾಕಿ ಮೊತ್ತವನ್ನು ಸರ್ಕಾರ ಪಾವತಿ ಮಾಡಬೇಕಿದೆ.ಸದ್ಯಕ್ಕೆ ಸಾಧನಾ ಸಮಾವೇಶಕ್ಕೆ ಇದ್ದ ವಿಘ್ನವನ್ನು ಸರ್ಕಾರ ಸರಿಮಾಡಿಕೊಂಡಿದೆ.

Good news for transport workers before strike Release of 11 months of backlog – no disruption to Sadhana Samavesh

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories