ಕಾರ್ಕಳ : ಅಜೆಕಾರಲ್ಲಿ ಕೋಳಿ ಹಣದ ಬಾಕಿ ವಿಚಾರಕ್ಕೆ ಮಾರಾಮಾರಿ : 15 ಮಂದಿ ವಿರುದ್ದ ಪ್ರಕರಣ
ಹೆಬ್ರಿ ತಾಲೂಕಿನ ಅಂಡಾರು ಗ್ರಾಮದ ಮುಟ್ಲುಪಾಡಿ ಎಂಬಲ್ಲಿ ತೋಟದ ಮಾಲೀಕ ಮತ್ತು ಕೆಲಸದಾಕೆಯ ಮೇಲೆ 15ಕ್ಕೂ ಹೆಚ್ಚು ಮಂದಿ ತಂಡೋಪ ತಂಡವಾಗಿ ಬಂದು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಕಾರ್ಕಳ : ಹಣದ ವಿಚಾರಕ್ಕೆ ಶುರುವಾದ ಸಣ್ಣ ಕಿರಿಕಿರಿ ಈಗ ದೊಡ್ಡ ಹಲ್ಲೆ ಮತ್ತು ಜಾತಿ ನಿಂದನೆಯ ಪ್ರಕರಣವಾಗಿ ಮಾರ್ಪಟ್ಟಿದೆ. ಹೆಬ್ರಿ ತಾಲೂಕಿನ ಅಂಡಾರು ಗ್ರಾಮದ ಮುಟ್ಲುಪಾಡಿ ಎಂಬಲ್ಲಿ ತೋಟದ ಮಾಲೀಕ ಮತ್ತು ಕೆಲಸದಾಕೆಯ ಮೇಲೆ 15ಕ್ಕೂ ಹೆಚ್ಚು ಮಂದಿ ತಂಡೋಪತಂಡವಾಗಿ ಬಂದು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿಯ ಅಂಡಾರು ಗ್ರಾಮದ ಪದ್ಮಾ (30) ಎಂಬುವವರು ಸುದರ್ಶನ ಶೆಟ್ಟಿ ಎಂಬುವವರ ತೋಟದಲ್ಲಿ ಕೋಳಿ ಸಾಕಣೆ ಮತ್ತು ಕೆಲಸ ಮಾಡಿಕೊಂಡಿದ್ದರು. ಮಾರ್ಚ್ 26ರಂದು ರಾತ್ರಿ 8 ಗಂಟೆ ಸುಮಾರಿಗೆ ಪದ್ಮಾ ಅವರು ಕೋಳಿಗಳನ್ನು ಗೂಡಿಗೆ ಹಾಕುತ್ತಿದ್ದಾಗ, ಎರಡು ಕಾರು ಮತ್ತು ನಾಲ್ಕು ಬೈಕ್ಗಳಲ್ಲಿ ಸುಮಾರು 15 ಜನರ ತಂಡ ಸ್ಥಳಕ್ಕೆ ಬಂದಿದೆ.
ಹರೀಶ, ಸುಧೀರ, ದುರ್ಗಾ, ಗುರುದೀಶ, ಮತ್ತು ಪ್ರತಾಪ ಎಂಬುವವರ ನೇತೃತ್ವದ ಈ ತಂಡವು ಏಕಾಏಕಿ ಸುದರ್ಶನ ಶೆಟ್ಟಿ ಅವರ ಮೇಲೆರಗಿ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ದೌರ್ಜನ್ಯ ಎಸಗಿದ್ದಾರೆ.
Also Read: ಉಡುಪಿ: ಮೀನು ಲೋಡಿಂಗ್ ಕೆಲಸದವನ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ! ಮಲ್ಪೆಯಲ್ಲಿ ಹೈಟೆಕ್ ಸೈಬರ್ ವಂಚನೆ ಜಾಲ
ಜಾತಿ ನಿಂದನೆ ಮತ್ತು ಹಲ್ಲೆ ಆರೋಪ
ಘಟನೆಯನ್ನು ಕಂಡು ಕೆಲಸದಾಕೆ ಪದ್ಮಾ ಮತ್ತು ಆಕಾಶ್ ಎಂಬುವವರು ಬಿಡಿಸಲು ಹೋದಾಗ, ಆರೋಪಿ ಹರೀಶ ಎಂಬಾತ ಪದ್ಮಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಉಳಿದ ಆರೋಪಿಗಳು ಸೇರಿ ಪದ್ಮಾ ಅವರ ಎದೆ ಮತ್ತು ಬೆನ್ನಿಗೆ ಗುದ್ದಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಪದ್ಮಾ ಮತ್ತು ಸುದರ್ಶನ ಶೆಟ್ಟಿ ಸದ್ಯ ಹೆಬ್ರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ತನಿಖೆಯ ಪ್ರಾಥಮಿಕ ವರದಿಯ ಪ್ರಕಾರ, ಆರೋಪಿ ಹರೀಶನು ಸುದರ್ಶನ ಶೆಟ್ಟಿ ಅವರಿಗೆ ಕೋಳಿ ಖರೀದಿಸಿದ ಹಣವನ್ನು ಬಾಕಿ ಉಳಿಸಿಕೊಂಡಿದ್ದನು. ಈ ಹಣದ ವ್ಯವಹಾರವೇ ಈ ಭೀಕರ ಹಲ್ಲೆಗೆ ಮೂಲ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಅಜೆಕಾರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ajekaru hebri assault case sc st act sudharshan shetty padma



