ಮಹಾರಾಷ್ಟ್ರದಲ್ಲಿ ಹೆಚ್ಚಿದ ಶಿವಸೇನೆ ದೌರ್ಜನ್ಯ :’ಶೇಮ್​’ ಇದು ಕಂಗನಾ ಪ್ರತಿಕ್ರಿಯೆ

ಮುಂಬೈ: ಬಾಲಿವುಡ್ ನಟಿ ಕಂಗನಾ ರಾಣಾವತ್ ವರ್ಸಸ್ ಶಿವಸೇನೆ ಸಂಘರ್ಷ ತೀವ್ರಗೊಂಡಿದೆ. ಈ ನಡುವಲ್ಲೇ ಮುಂಬೈನಲ್ಲಿ ಶಿವಸೇನಾ ಅಟಾಟೋಪ ಎಲ್ಲೆಮೀರುತ್ತಿದೆ. ನೌಕಾಪಡೆಯ ನಿವೃತ್ತ ಅಧಿಕಾರಿ ಮೇಲಿನ ಹಲ್ಲೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನಟಿ ಕಂಗನಾ ಮಹಾರಾಷ್ಟ್ರ ಸರಕಾರಕ್ಕೆ ಶೇಮ್ ಅಂತಾ ಕಮೆಂಟ್ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ದಿನಕ್ಕೊಂದು ಘಟನೆ ನಡೆಯುತ್ತಿದೆ. ಈ ನಡುವಲ್ಲೇ ಪತ್ರಕರ್ತ ಆಶಿಶ್ ಸಿಂಗ್ “ಮುಂಬೈನಲ್ಲಿ ಏನಾಗುತ್ತಿದೆ? ಶಿ ವಸೈನಿಕರು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯೊಬ್ಬರನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ. ಅವರು ಮಾಡಿದ ತಪ್ಪೇನು ಅಂದ್ರೆ ಸಿಎಂ ಉದ್ಧವ್ ಅವರನ್ನು ಟೀಕಿಸಿದ್ದ ವಾಟ್ಸ್​ಆ್ಯಪ್ ಸಂದೇಶವನ್ನು ಟ್ವೀಟರ್ ನಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಈಗಾಗಲೇ ಅವರ ಟ್ವೀಟ್ 8 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದ್ದು ಶಿವಸೇನಾ ಗೂಂಡಾಗಿರಿ ವ್ಯಾಪಕವಾಗಿ ಟೀಕೆಗೊಳಗಾಗಿದೆ. ಅವರ ಟ್ವೀಟ್​ನಲ್ಲಿ ಸಿಸಿಟಿವಿ ದೃಶ್ಯಾವಳಿಯನ್ನು ಅಟ್ಯಾಚ್ ಮಾಡಿದ್ದು ಶಿವಸೇನಾ ಗೂಂಡಾಗಿರಿಗೆ ಸಾಕ್ಷ್ಯವೆಂಬಂತಿದೆ. ಅದರಲ್ಲಿ ಆಶಿಶ್ ಸಿಂಗ್, ಕೇಂದ್ರ ಸರ್ಕಾರ ಕಂಗಾನ ಅವರಿಗೆ ಭದ್ರತೆ ಒದಗಿಸದೇ ಹೋಗಿದ್ದರೆ ಪರಿಸ್ಥಿತಿ ಏನಾಗಬಹುದಿತ್ತು ಎಂಬುದನ್ನು ಊಹಿಸಿಕೊಳ್ಳಿ” ಈ ಟ್ವೀಟನ್ನು ಚಿತ್ರನಟಿ ಕಂಗನಾ ರೀಟ್ವೀಟ್ ಮಾಡಿದ್ದು, ಶೇಮ್ ಎಂಬ ಕಮೆಂಟನ್ನೂ ಸೇರಿಸಿದ್ದಾರೆ.

ಪತ್ರಕರ್ತನ ಮಾಡಿದ ಟ್ವೀಟ್ ಮಹಾರಾಷ್ಟ್ರದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದ್ದರೆ, ಇತ್ತ ಕಂಗನಾ ರಾಣಾವತ್ ಕೂಡ ರೀ ಟ್ವೀಟ್ ಮಾಡಿದ್ದು, ಶೇಮ್ ಅಂದಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories

Leave a Reply

Your email address will not be published. Required fields are marked *