ಸಿಕ್ಸರ್‌ಗಳ ಸುರಿಮಳೆಗೈದು ಹೊಸ ಇತಿಹಾಸ ಬರೆದ ವೈಭವ : ಸೂರ್ಯವಂಶಿ ಬ್ಯಾಟಿಂಗ್​ ಕಮಾಲ್​ಗೆ ಫ್ಯಾನ್ಸ್ ಫಿದಾ

ರಾಜಸ್ಥಾನ ರಾಯಲ್ಸ್​ ತಂಡದ ಆರಂಭಿಕ ಆಟಗಾರ ವೈಭವ್​ ಸೂರ್ಯವಂಶಿ (Vaibhav Suryavanshi) ಕ್ರಿಕೆಟ್​ ಕ್ಷೇತ್ರದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಲೇ ಇದ್ದಾರೆ. ಮುಂಬೈ ಇಂಡಿಯನ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಸಿಕ್ಸರ್​ಗಳ ಮೇಲೆ ಸಿಕ್ಸರ್​ ಚಚ್ಚುವ ಮೂಲಕ ಈ ಹೊಸ ದಾಖಲೆ ನಿರ್ಮಿಸಿದ್ದಾರೆ.

ಈ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ ವೈಭವ್​ ಸೂರ್ಯವಂಶಿ ಮುಂಬೈ ಇಂಡಿಯನ್ಸ್ ಬೌಲರ್​ಗಳ ಬೆವರಳಿಸುವಲ್ಲಿ ಯಶಸ್ವಿಯಾದರು. ಮಳೆಯ ಕಾಟದ ನಡುವೆಯೂ ರಾಜಸ್ಥಾನವನ್ನು 11 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 150 ರನ್‌ನತ್ತ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: RCB ಹಣೆಬರಹ ಬದಲಿಸಿದ ಬಿರ್ಲಾ ಎಂಟ್ರಿ : IPL 2027ಕ್ಕೆ ಆರ್‌ಸಿಬಿಗೆ ಹೊಸ ಹೆಸರು ?

ಇನ್ನಿಂಗ್ಸ್​ನಲ್ಲಿ 5 ಸಿಕ್ಸರ್​ಗಳನ್ನು ಬಾರಿಸುವ ಮೂಲಕ ವೈಭವ್​ ಸೂರ್ಯವಂಶಿ ಇಶಾನ್​ ಕಿಶಾನ್​ ಹಾಗೂ ರಿಷಭ್​ ಪಂತ್​ರ ದಾಖಲೆಗಳನ್ನು ಸರಿಗಟ್ಟಿದ್ದಾರೆ. ಇವರಿಬ್ಬರು ಐಪಿಎಲ್​ನಲ್ಲಿ 20 ವರ್ಷ ತುಂಬುವ ಮೊದಲು 30 ಸಿಕ್ಸರ್​ಗಳನ್ನು ಬಾರಿಸಿದ ಕ್ರಿಕೆಟಿಗರು ಎಂಬ ದಾಖಲೆಯನ್ನು ನಿರ್ಮಿಸಿದ್ದರು.

ಈ ದಾಖಲೆ ಸರಿಗಟ್ಟಿದ ವೈಭವ್​ ಸೂರ್ಯವಂಶಿ ಒಟ್ಟೂ 35 ಸಿಕ್ಸರ್​ಗಳನ್ನು ಐಪಿಎಲ್​ನಲ್ಲಿ ಸಿಡಿಸಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ ಅತೀ ಹೆಚ್ಚು ಸಿಕ್ಸರ್​ಗಳನ್ನು ಬಾರಿಸಿದ ಹದಿಹರೆಯದ ಆಟಗಾರ ಎಂಬ ಕೀರ್ತಿಗೆ ವೈಭವ್​ ಸೂರ್ಯವಂಶಿ ಪಾತ್ರರಾಗಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories