ಸಿಬಿಎಸ್ಇ 10ನೇ ತರಗತಿ ಫಲಿತಾಂಶ 2026 ಪ್ರಕಟ: ಡಿಜಿಲಾಕರ್ ಮತ್ತು ಎಸ್ಎಮ್ಎಸ್ ಮೂಲಕ ಹೀಗೆ ಪರಿಶೀಲಿಸಿ
ದೇಶಾದ್ಯಂತ ಸಿಬಿಎಸ್ಇ 10ನೇ ತರಗತಿ ಬೋರ್ಡ್ ಪರೀಕ್ಷೆ ಬರೆದ ಸುಮಾರು 2.5 ಮಿಲಿಯನ್ ವಿದ್ಯಾರ್ಥಿಗಳ ಕಾಯುವಿಕೆ ಕೊನೆಯಾಗಿದೆ. ಇಂದು ಸಿಬಿಎಸ್ಇ 10 ನೇ ತರಗತಿ 2026ರ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ 93.70% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ತಿರುವನಂತಪುರ ಹಾಗೂ ವಿಜಯವಾಡ 99.79% ಉತ್ತೀರ್ಣ ಫಲಿತಾಂಶವನ್ನು ದಾಖಲಿಸುವುದರ ಮೂಲಕ ಅಗ್ರಸ್ಥಾನ ಪಡೆದುಕೊಂಡಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಡಿಜಿಲಾಕರ್ ಸೈಟ್ ಮತ್ತು ಮಂಡಳಿಯ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದಾಗಿದೆ. ಸಿಬಿಎಸ್ಇ ಫೆಬ್ರವರಿ 17 ರಿಂದ ಮಾರ್ಚ್ 11 ರವರೆಗೆ ಬೋರ್ಡ್ ಪರೀಕೆಗಳನ್ನು ನಡೆಸಿತ್ತು.
ಫಲಿತಾಂಶ ಪರಿಶೀಲಿಸುವುದು ಹೇಗೆ?
ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಸಿಬಿಎಸ್ಇ ಯ ಅಧಿಕೃತ ವೆಬ್ಸೈಟ್ಗಳಾದ results.cbse.nic.in ಮತ್ತು cbse.gov.in, ಡಿಜಿಲಾಕರ್ ಹಾಗೂ ಉಮಾಂಗ್ ಅಪ್ಲಿಕೇಶನ್ ಮೂಲಕವೂ ಪರಿಶೀಲಿಸಬಹುದು. ಕೀಪ್ಯಾಡ್ ಫೋನ್ಗಳನ್ನು ಬಳಸಿಕೊಂಡು ಸಹ ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ. ಇದಕ್ಕಾಗಿ, ವಿದ್ಯಾರ್ಥಿಗಳು cbse10 <space> ನಿಮ್ಮ ರೋಲ್ ಸಂಖ್ಯೆ <space> ಜನ್ಮ ದಿನಾಂಕ (DDMMYYYY) <space> ಶಾಲಾ ಸಂಖ್ಯೆ <space> ಕೇಂದ್ರ ಸಂಖ್ಯೆಯನ್ನು ಟೈಪ್ ಮಾಡಿ 7738299899 ಗೆ ಕಳುಹಿಸಬೇಕು.
ಇದನ್ನೂ ಓದಿ: 2026-27ನೇ ಸಾಲಿನ ಶಾಲೆಗಳ ರಜಾ ಅವಧಿ ವೇಳಾಪಟ್ಟಿ ಪ್ರಕಟ : ಮೇ 29ರಿಂದಲೇ ಸ್ಕೂಲ್ ರೀ ಓಪನ್
ಡಿಜಿಲಾಕರ್ನಲ್ಲಿ ಫಲಿತಾಂಶ ಪರಿಶೀಲಿಸುವುದು ಹೇಗೆ?
ವಿದ್ಯಾರ್ಥಿಗಳು ಅಪಾರ್ ಐಡಿ ಮೂಲಕ ಡಿಜಿಲಾಕರ್ನಲ್ಲಿ ಸುಲಭವಾಗಿ ಫಲಿತಾಂಶ ಪರಿಶೀಲಿಸಬಹುದು. ಅಪಾರ್ ಐಡಿ ಇಲ್ಲದ ವಿದ್ಯಾರ್ಥಿಗಳೂ ಸಹ ಡಿಜಿಲಾಕರ್ನಲ್ಲಿ ಫಲಿತಾಂಶ ಚೆಕ್ ಮಾಡಬಹುದಾಗಿದೆ. ಹೇಗೆಂದರೆ
* ವಿದ್ಯಾರ್ಥಿಗಳು ಮೊದಲು cbseservices.digilocker.gov.in ಗೆ ಭೇಟಿ ನೀಡಬೇಕು.
* ಮುಖಪುಟದಲ್ಲಿ ‘ಪ್ರಾರಂಭಿಸಿ’ ಮೇಲೆ ಕ್ಲಿಕ್ ಮಾಡಿ.
* ಅಗತ್ಯವಿರುವ ವಿವರಗಳನ್ನು ನಮೂದಿಸಿ.
* ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು OTP ನೀಡಿ.
* ನಂತರ ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಲಾಗುತ್ತದೆ. ಆಗ ನೀವು ಫಲಿತಾಂಶವನ್ನು ನೇರವಾಗಿ ಪರಿಶೀಲಿಸಬಹುದಾಗಿದೆ.



