2026-27ನೇ ಸಾಲಿನ ಶಾಲೆಗಳ ರಜಾ ಅವಧಿ ವೇಳಾಪಟ್ಟಿ ಪ್ರಕಟ : ಮೇ 29ರಿಂದಲೇ ಸ್ಕೂಲ್ ರೀ ಓಪನ್
ರಾಜ್ಯ ಶಿಕ್ಷಣ ಇಲಾಖೆ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ರಜೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅದರ ಪ್ರಕಾರ 365 ದಿನಗಳ ಪೈಕಿ 245 ಕರ್ತವ್ಯದ ದಿನ ಹಾಗೂ 119 ದಿನಗಳ ಕಾಲ ವಿದ್ಯಾರ್ಥಿಗಳಿಗೆ ರಜಾ ದಿನ ಎಂದು ಘೋಷಿಸಲಾಗಿದೆ.
2026-27ನೇ ಸಾಲಿನ ಶೈಕ್ಷಣಿಕ ವರ್ಷದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ರಜೆಗಳ ವೇಳಾಪಟ್ಟಿಯನ್ನು ರಾಜ್ಯ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಒಟ್ಟೂ 365 ದಿನಗಳ ಪೈಕಿ 245 ಕರ್ತವ್ಯದ ದಿನ ಹಾಗೂ 119 ದಿನಗಳ ಕಾಲ ವಿದ್ಯಾರ್ಥಿಗಳಿಗೆ ರಜಾ ದಿನ ಎಂದು ಘೋಷಿಸಲಾಗಿದೆ. ಈ ವೇಳಾಪಟ್ಟಿಯ ಪ್ರಕಾರ ಮುಂದಿನ ತಿಂಗಳು ಅಂದರೆ ಮೇ 29ರಿಂದ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಸಮಾಪ್ತಿಯಾಗಲಿದ್ದು ಶಾಲೆಗಳು ಆರಂಭಗೊಳ್ಳಲಿವೆ.
ಇದನ್ನೂ ಓದಿ: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ಶಾಕ್ : ಸತತ ಎರಡನೇ ವರ್ಷವೂ ಫೀಸ್ ಹೈಕ್..!
ಮೇ 29ರಿಂದ ಅಕ್ಟೋಬರ್ 2ನೇ ತಾರೀಖಿನವರೆಗೆ ಮೊದಲ ಅವಧಿ ಇರಲಿದೆ. ಅಕ್ಟೋಬರ್ 3ರಿಂದ ರಾಜ್ಯಾದ್ಯಂತ ದಸರಾ ರಜೆ ಆರಂಭಗೊಳ್ಳಲಿದ್ದು, ಈ ರಜೆಯು ಅಕ್ಟೋಬರ್ 21ರವರೆಗೂ ಇರಲಿದೆ. ಅಕ್ಟೋಬರ್ 22ರಿಂದ2026-27ನೇ ಸಾಲಿನ ಶೈಕ್ಷಣಿಕ ವರ್ಷದ ಎರಡನೇ ಅವಧಿ ಆರಂಭಗೊಳ್ಳಲಿದೆ. ಇದು ಏಪ್ರಿಲ್ 10ರವರೆಗೂ ಇರಲಿದೆ. ಬಳಿಕ ಮತ್ತೆ ಮುಂದಿನ ವರ್ಷದ ಬೇಸಿಗೆ ರಜೆ ಆರಂಭಗೊಳ್ಳಲಿದೆ.
ಒಟ್ಟೂ 365 ದಿನಗಳಲ್ಲಿ 245 ದಿನಗಳನ್ನು ಕರ್ತವ್ಯದ ದಿನ ಎಂದು ಪರಿಗಣಿಸಲಾಗಿದ್ದು, ಇದರಲ್ಲಿ 181 ದಿನಗಳನ್ನು ಬೋಧನಾ ಪ್ರಕ್ರಿಯೆಗೆ ಮೀಸಲಿಡುವಂತೆ ಶಾಲಾ ಶೈಕ್ಷಣಿಕ ಇಲಾಖೆ ಸೂಚನೆ ನೀಡಿದೆ. ಈ ವೇಳಾಪಟ್ಟಿಯ ಅನ್ವಯ ಇನ್ನೇನು ಒಂದೂವರೆ ತಿಂಗಳಲ್ಲಿ ಮತ್ತೊಮ್ಮೆ ಶಾಲೆಗಳು ಪುನಾರಂಭಗೊಳ್ಳಲಿವೆ.



