ರಾಜ್ಯದ ಜನತೆಗೆ ವಿದ್ಯುತ್​ ದರ ಏರಿಕೆ ಶಾಕ್​..! ಪ್ರತಿ ಯುನಿಟ್​ಗೆ 56 ಪೈಸೆ ಹೈಕ್

ರಾಜ್ಯ ಸರ್ಕಾರ ವಿದ್ಯುತ್​ ದರ ಏರಿಕೆ ಮಾಡುವ ಮೂಲಕ ರಾಜ್ಯದ ಜನತೆಗೆ ಹೊಸ ಆಘಾತ ನೀಡಿದೆ. ಪ್ರತಿ ಯುನಿಟ್​ಗೆ 56 ಪೈಸೆ ಏರಿಕೆ ಮಾಡಲಾಗಿದ್ದು ನೂತನ ದರವು ಮೇ ತಿಂಗಳಿನಿಂದಲೇ ಅನ್ವಯಗೊಳ್ಳಲಿದೆ ಎಂದು ಕೆ.ಇ.ಆರ್​. ಸಿ ಆದೇಶ ಹೊರಡಿಸಿದೆ. ವಿದ್ಯುತ್​ ಸರಬರಾಜು ಕಂಪನಿಗಳ ಆದಾಯದಲ್ಲಿನ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಬೆಲೆ ಏರಿಕೆಯ ಬರೆ ಹಾಕಿದೆ. ಆದರೆ ವಿವಿಧ ಎಸ್ಕಾಂಗಳಿಗೆ ವಿವಿಧ ರೀತಿಯಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ ಯುನಿಟ್​ಗೆ 9 ಪೈಸೆ, ಹೆಸ್ಕಾಂ, ಜೆಸ್ಕಾಂ ವ್ಯಾಪ್ತಿಯಲ್ಲಿ ಯುನಿಟ್​ಗೆ ತಲಾ 10 ಪೈಸೆ ಪ್ರಕಾರ ಗ್ರಾಹಕರಿಗೆ ಹಿಂತಿರಿಗಿಸುವಂತೆ ಆದೇಶ ನೀಡಿದೆ.

ಬೆಸ್ಕಾಂ ದರ ಪ್ರತಿ ಯೂನಿಟ್‌ಗೆ 56 ಪೈಸೆ ಏರಿಕೆಯಾಗಿದೆ. ಜತೆಗೆ ಸೆಸ್ಕ್ 15 ಪೈಸೆ ಹೆಚ್ಚಳವಾಗಿದೆ. ಉಳಿದಂತೆ, ಮೆಸ್ಕಾಂ 9 ಪೈಸೆ, ಜೆಸ್ಕಾಂ, ಹೆಸ್ಕಾಂ ದರವು 10 ಪೈಸೆ, ಎಚ್‌ಆರ್‌ಇಸಿಎಸ್‌ 1.55 ರೂ. ಪ್ರತಿ ಯೂನಿಟ್‌ಗೆ ಕಡಿಮೆಯಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮಿತಿಮೀರಿದ ಸೂರ್ಯನ ಧಗೆ..! ಕೆಲವು ಜಿಲ್ಲೆಗಳಲ್ಲಿ ಮತ್ತೆ ವರುಣನ ಸಿಂಚನ..!

ಈ ಪರಿಷ್ಕೃತ ದರವು ಮೇ 1 ರಿಂದಲೇ ಜಾರಿಗೆ ಬರಲಿದ್ದು, ಮುಂದಿನ ವರ್ಷ ಏಪ್ರಿಲ್‌ 30ವರೆಗೂ ಅನ್ವಯವಾಗಲಿದೆ. ಆಯಾ ಎಸ್ಕಾಂಗಳ ಸಾಲ, ನಿರ್ವಹಣಾ ಪ್ರಮಾಣ ಆಧರಿಸಿ ದರ ಏರಿಕೆ ಮಾಡಲಾಗಿದೆ. ಸದ್ಯ ಗೃಹ ಬಳಕೆ 145 ಕಿಲೋ ವ್ಯಾಟ್​​ಗೆ 5.80 ರೂ., ವಾಣಿಜ್ಯ ಬಳಕೆಗೆ 7.15 ದರ ಇತ್ತು. ಬೆಸ್ಕಾಂನದಲ್ಲಿ 56 ಪೈಸೆ, ಚೆಸ್ಕಾಂನಲ್ಲಿ 15 ಪೈಸೆ ಏರಿಕೆ ಮಾಡಲಾಗಿದೆ.

2024- 25ನೇ ಸಾಲಿನಲ್ಲಿ ಬೆಸ್ಕಾಂಗೆ ಬರೋಬ್ಬರಿ 2068 ಕೋಟಿ ರೂಪಾಯಿಗಳ ಆದಾಯದ ಕೊರತೆ ಉಂಟಾಗಿದೆ. ಈ ನಷ್ಟವನ್ನು ಗ್ರಾಹಕರಿಂದಲೇ ವಸೂಲಿ ಮಾಡಲು ಬೆಸ್ಕಾಂ ನಿರ್ಧರಿಸಿದ್ದು, ಈ ನಷ್ಟವನ್ನು ಒಮ್ಮೆಲೇ ಗ್ರಾಹಕರ ಮೇಲೆ ವಿಧಿಸದೇ, 2026-27ನೇ ಆರ್ಥಿಕ ವರ್ಷದಲ್ಲಿ ವಸೂಲಿ ಮಾಡಲು ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು 2026-27ನೇ ಸಾಲಿನಲ್ಲಿ ಗ್ರಾಹಕರು ತಾವು ಬಳಸುವ ಪ್ರತಿ ಯೂನಿಟ್ ವಿದ್ಯುತ್‌ಗೆ ಹೆಚ್ಚುವರಿಯಾಗಿ 56 ಪೈಸೆ ಪಾವತಿಸಬೇಕಾಗುತ್ತದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories