ಎಸ್.ಎಸ್.ಎಲ್.ಸಿ ಫಲಿತಾಂಶ : ದಕ್ಷಿಣ ಕನ್ನಡ ಫಸ್ಟ್ , ಕಲಬುರಗಿ ಲಾಸ್ಟ್
ಈ ಬಾರಿಯ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಉಡುಪಿಯ ಪ್ರೀತಂ, ದಾವಣಗೆರೆಯ ಭರತ್, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರ ಧನುಷ್ , ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ, ರಾಯಚೂರಿನ ಸುಖದೇವ್ 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಇಂದು ಹೊರಬಿದ್ದಿದೆ. ದ್ವಿಭಾಷಾ ನೀತಿಯ ಗೊಂದಲಗಳ ನಡುವೆ ಈ ಬಾರಿ ರಾಜ್ಯವಾರು 94.1 ಪ್ರತಿಶತ ಫಲಿತಾಂಶ ದಾಖಲಾಗಿದೆ. ಈ ಬಾರಿ ಪರೀಕ್ಷೆಗೆ ಹಾಜರಾದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇನ್ನು ಈ ಬಾರಿಯ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಉಡುಪಿಯ ಪ್ರೀತಂ, ದಾವಣಗೆರೆಯ ಭರತ್, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರ ಧನುಷ್ , ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ, ರಾಯಚೂರಿನ ಸುಖದೇವ್ 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: Karnataka SSLC Result 2026: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ 7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ
ಇನ್ನು ಈ ಬಾರಿಯ ಎಸ್.ಎಸ್.ಎಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಪ್ರಥಮ ಸ್ಥಾನವನ್ನು ಪಡೆದಿದ್ದರೆ ಕಲಬುರಗಿ ಕೊನೆಯ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದುಕೊಂಡಿದೆ.
ಈ ಬಾರಿಯ ಜಿಲ್ಲಾವಾರು ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ನೋಡುವುದಾದರೆ :
ದಕ್ಷಿಣ ಕನ್ನಡ ಜಿಲ್ಲೆ- 98.40%
ಉಡುಪಿ – 98.18%
ಉತ್ತರ ಕನ್ನಡ- 98.09%
ಹಾಸನ- 97.51%
ಮಂಡ್ಯ- 97.45%
ಶಿರಸಿ- 97.21%
ಹಾವೇರಿ- 96.87%
ಕೊಡಗು- 96.70%
ಶಿವಮೊಗ್ಗ- 96.56%
ವಿಜಯನಗರ- 96.39%
ಬೆಂಗಳೂರು ಗ್ರಾಮಾಂತರ – 95.84%
ಧಾರವಾಡ – 95.59%
ಕೋಲಾರ- 95.50%
ಬಾಗಲಕೋಟೆ- 95.42%
ಬೆಂಗಳೂರು ಉತ್ತರ- 95.34%
ಗದಗ- 95.24%
ಚಿಕ್ಕಮಗಳೂರು- 94.99%
ಬೆಳಗಾವಿ – 94.75%
ದಾವಣಗೆರೆ- 94.64%
ಮೈಸೂರು- 94.50%
ರಾಯಚೂರು- 94.41%
ವಿಜಯಪುರ- 94.17%
ಚಿಕ್ಕೋಡಿ- 94.09%
ಬಳ್ಳಾರಿ- 93.36%
ಕೊಪ್ಪಳ- 93.10%
ರಾಮನಗರ- 92.83%
ಚಿತ್ರದುರ್ಗ- 92.25%
ಬೀದರ್- 92.18%
ತುಮಕೂರು- 92.04%
ಚಾಮರಾಜನಗರ- 91.89%
ಯಾದಗಿರಿ- 91.89%
ಬೆಂಗಳೂರು ದಕ್ಷಿಣ- 91.65%
ಚಿಕ್ಕಬಳ್ಳಾಪುರ- 90.88%
ಮಧುಗಿರಿ- 90.26%
ಕಲಬುರಗಿ-85.06%
ಇದನ್ನೂ ಓದಿ : SSLC Result 2026 : ಮುದ್ದೂರು ವಿಎಸ್‌ಎಸ್‌ನ ಕಲ್ಯಾಣಿಗೆ ರಾಜ್ಯದಲ್ಲಿ 5ನೇ ರಾಂಕ್, ಸತತ 100 % ರಿಸಲ್ಟ್



