ಬಂಟ್ವಾಳ: ರೈಲಿನಲ್ಲಿ ಗರ್ಭಿಣಿಗೆ ಪ್ರಸವ ವೇದನೆ; ಮಹಿಳಾ ಪ್ರಯಾಣಿಕರ ನೆರವಿನಿಂದ ಸುಸೂತ್ರ ಹೆರಿಗೆ

ಮೈಸೂರು ಮೂಲದ ತುಂಬು ಗರ್ಭಿಣಿ ಪೊನ್ನಮ್ಮ ಮಂಗಳೂರು ಜಂಕ್ಷನ್​​ನಿಂದ ಹೊರಟಿದ್ದ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿಗೆ ಏಕಾಏಕಿ ಪ್ರಸವ ಬೇನೆ ಕಾಣಿಸಿಕೊಂಡ ಪರಿಣಾಮ ರೈಲಿನಲ್ಲಿಯೇ ಹೆರಿಗೆಯಾದ ಅಪರೂಪದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ರೈಲ್ವೇ ನಿಲ್ದಾಣದಲ್ಲಿ ಸಂಭವಿಸಿದೆ. ಕಾರವಾರ – ಮಂಗಳೂರು – ಬೆಂಗಳೂರು ನಡುವೆ ಚಲಿಸುತ್ತಿದ್ದ ರೈಲಿನಲ್ಲಿ ತುಂಬು ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬಿ.ಸಿ ರೋಡಿನಲ್ಲಿ ಈ ಘಟನೆ ಸಂಭವಿಸಿದೆ.

ಮೈಸೂರು ಮೂಲದ ತುಂಬು ಗರ್ಭಿಣಿ ಪೊನ್ನಮ್ಮ ಮಂಗಳೂರು ಜಂಕ್ಷನ್​​ನಿಂದ ಹೊರಟಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಏಕಾಏಕಿ ಅವರಿಗೆ ರಕ್ತಸ್ರಾವ ಉಂಟಾಗಿದೆ. ತಕ್ಷಣವೇ ರೈಲನ್ನು ಬಿ.ಸಿ ರೋಡಿನಲ್ಲಿ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ : ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹೊಸ ದಿಕ್ಸೂಚಿ: ಶಾಲೆಗಳಲ್ಲಿ ಇನ್ಮುಂದೆ ದಿನಪತ್ರಿಕೆ ಓದು ಕಡ್ಡಾಯ!

ವೈದ್ಯರನ್ನು ಸಂಪರ್ಕಿಸಲು ಎಷ್ಟು ಬಾರಿ ಪ್ರಯತ್ನಿಸಿದರೂ ಯಾವೊಬ್ಬ ವೈದ್ಯರಿಂದಲೂ ಸಕರಾತ್ಮಕ ಸ್ಪಂದನೆ ದೊರಕಲಿಲ್ಲ. ಸುಮಾರು 30 ನಿಮಿಷಗಳ ಕಾಲ ವೈದ್ಯರಿಗೆ ಕಾದು, ಇನ್ನೇನು ಸಹಪ್ರಯಾಣಿಕ ಮಹಿಳೆಯರೇ ಹೆರಿಗೆ ಮಾಡಿಸಲು ಮುಂದಾದ ಸಂದರ್ಭದಲ್ಲಿ ಸ್ಥಳೀಯ ಸೋಮಯಾಜಿ ಆಸ್ಪತ್ರೆಯ ವೈದ್ಯರ ತಂಡ ಸ್ಥಳಕ್ಕೆ ಧಾವಿಸಿದೆ

ರೈಲಿನ ಬೋಗಿಗೆ ಪರದೆ ಕಟ್ಟಿದ ಮಹಿಳೆಯರು ಗರ್ಭಿಣಿಯ ಹೆರಿಗೆ ಪ್ರಕ್ರಿಯೆಗೆ ನೆರವಾಗಿದ್ದಾರೆ . ಸಹಜ ಹೆರಿಗೆಯ ಮೂಲಕ ಪೊನ್ನಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕೂಡಲೇ ತಾಯಿ ಹಾಗೂ ಮಗುವನ್ನು ವೆನ್ಲಾಕ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದರೂ ಸಹ ಹೆರಿಗೆಯ ಬಳಿಕ ಸೂಕ್ತ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ. ಹೀಗಾಗಿ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ವೈದ್ಯರು ತಿಳಿಸಿದ್ದಾರೆ .

 

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories