ಯಾರಿಗೆ ಪಟ್ಟ? ಯಾರಿಗೆ ಲಕ್? ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡ ಪಂಚರಾಜ್ಯ ಚುನಾವಣೋತ್ತರ ಸಮೀಕ್ಷೆಯ ವರದಿ ಹೊರಬಿದ್ದಿದೆ

ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡ ಪಂಚರಾಜ್ಯ ಚುನಾವಣೋತ್ತರ ಸಮೀಕ್ಷೆಯ ವರದಿ ಹೊರಬಿದ್ದಿದೆ. ನಿನ್ನೆ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷಾ ವರದಿಗಳ ಪ್ರಕಾರ ತಮಿಳುನಾಡಿನಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರಲಿದೆ. ಕೇರಳದಲ್ಲಿ ಈ ಬಾರಿ ಎಡಪಕ್ಷ ಎಲ್​ಡಿಎಫ್​ ಸೋಲಿನ ರುಚಿ ಕಾಣಲಿದೆ ಎನ್ನಲಾಗಿದ್ದು ಮತ್ತೊಮ್ಮೆ ಕಾಂಗ್ರೆಸ್​ ನೇತೃತ್ವದ ಯುಡಿಎಫ್​​ ಕಮ್​ಬ್ಯಾಕ್​ ಮಾಡಲಿದೆ. ಇತ್ತ ಪಶ್ಚಿಮ ಬಂಗಾದಲ್ಲಿ ದೀದಿ – ಮೋದಿ ನಡುವೆ ಟಫ್​ ಫೈಟ್​ ಇರಲಿದ್ದು ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು 4 ಸಮೀಕ್ಷಾ ವರದಿಗಳು ತಿಳಿಸಿವೆ. ಇತ್ತ ಪುದುಚೇರಿಯಲ್ಲಿ ಎಐಎನ್‌ಆರ್‌ಸಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಆಸ್ಸಾಂನಲ್ಲಿ ಆಕ್ಸಿಸ್ ಮೈ ಇಂಡಿಯಾ ಬಿಜೆಪಿಗೆ ಭರ್ಜರಿ ಗೆಲುವಿನ ಶಾಲು ಹೊದಿಸಿದೆ., ಬಿಜೆಪಿ ಮತ್ತು ಮಿತ್ರಪಕ್ಷಗಳಿಗೆ 88-100 ಸ್ಥಾನಗಳು ಮತ್ತು ಕಾಂಗ್ರೆಸ್ ಮತ್ತು ಅದರ ಪಾಲುದಾರರಿಗೆ 24-36 ಸ್ಥಾನಗಳು ಸಿಗಲಿವೆ ಎಂದು ಸಮೀಕ್ಷೆದಾರರು ಹೇಳಿದ್ದಾರೆ.

ಪೀಪಲ್ಸ್ ಪಲ್ಸ್ ನುಡಿದಿರುವ ಭವಿಷ್ಯದ ಪ್ರಕಾರ ಎನ್‌ಡಿಎ 68-72 ಸ್ಥಾನಗಳನ್ನು ಪಡೆಯಲಿದೆ , ಆದರೆ ಕಾಂಗ್ರೆಸ್ ಪ್ಲಸ್ 22-26 ಸ್ಥಾನಕ್ಕೆ ತೃಪ್ತಿ ಪಡೆಬೇಕಿದೆ. ಎನ್‌ಡಿಎ 85-95 ಸ್ಥಾನಗಳನ್ನು ಮತ್ತು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ 25-32 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಮ್ಯಾಟ್ರಿಜ್ ಭವಿಷ್ಯ ನುಡಿದಿದೆ. ಅಸ್ಸಾಂ ವಿಧಾನಸಭೆಯಲ್ಲಿ 126 ಸ್ಥಾನಗಳಿದ್ದು, ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 64 ಆಗಿದೆ.

ಇದನ್ನೂ ಓದಿ : Toll plaza free highways : ಟೋಲ್​ ಪ್ಲಾಜಾಗಳಿಗೆ ಶೀಘ್ರದಲ್ಲೇ ಕೊಕ್​ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇನ್ಮುಂದೆ ಬ್ಯಾರಿಯರ್​ ಫ್ರೀ ಸಂಚಾರ

ಕೇರಳದಲ್ಲಿ, ಆಕ್ಸಿಸ್ ಮೈ ಇಂಡಿಯಾ ನೀಡಿರುವ ಮಾಹಿತಿಯ ಪ್ರಕಾರ ಯುಡಿಎಫ್ 78-90 , ಎಲ್‌ಡಿಎಫ್ 49-62 ಮತ್ತು ಎನ್‌ಡಿಎ 0-3 ಸ್ಥಾನಗಳನ್ನು ಪಡೆಯಲಿದೆ ಎನ್ನಲಾಗಿದೆ. ಪೀಪಲ್ಸ್ ಪಲ್ಸ್ ಕಾಂಗ್ರೆಸ್ ನೇತೃತ್ವದ ಯುಡಿಎಫ್ 75-85 , ಎಲ್‌ಡಿಎಫ್ 55-65 ಮತ್ತು ಎನ್‌ಡಿಎ 0-3 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ. ಮ್ಯಾಟ್ರಿಜ್ ಎಲ್‌ಡಿಎಫ್ 60-65 , ಯುಡಿಎಫ್ 70-75 ಮತ್ತು ಎನ್‌ಡಿಎ 3-5 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಲಾಗಿದೆ. ಕೇರಳ ವಿಧಾನಸಭೆಯಲ್ಲಿ ಒಟ್ಟು 140 ಸ್ಥಾನಗಳಿದ್ದು, ಇಲ್ಲಿ ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ 71 ಆಗಿದೆ.

ದೀದಿ ಭದ್ರಕೋಟೆ ಪಶ್ಚಿಮ ಬಂಗಾಳದಲ್ಲಿ, ಪೀಪಲ್ಸ್ ಪಲ್ಸ್ ನೀಡಿರುವ ಸಮಿಕ್ಷಾ ವರದಿಯ ಪ್ರಕಾರ, ಟಿಎಂಸಿ 177-187 , ಬಿಜೆಪಿ 95-110, ಎಡರಂಗ 0-1 ಮತ್ತು ಕಾಂಗ್ರೆಸ್ 1-3 ಸ್ಥಾನಗಳನ್ನು ಪಡೆಯಲಿದೆ ಎ. ಆದರೆ ಮ್ಯಾಟ್ರಿಜ್ ರಾಜ್ಯದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದು, ಅದು 146-161 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಹೇಳಿದೆ. ಟಿಎಂಸಿ 125-140 ಸ್ಥಾನಗಳನ್ನು ಪಡೆಯಲಿದೆ ಎಂದು ಅದು ಹೇಳಿದೆ. ಪಿ-ಮಾರ್ಕ್ ಬಿಜೆಪಿಗೆ 150-175 ಮತ್ತು ಟಿಎಂಸಿಗೆ 118-138 ಸ್ಥಾನಗಳನ್ನು ಗಳಿಸಲಿದೆ ಎಂದು ಭವಿಷ್ಯ ನುಡಿದಿದೆ. ಕಳೆದ ಚುನಾವಣೆಯಲ್ಲಿಯೂ ಕೆಲ ಸಮೀಕ್ಷೆಗಳು ಬಿಜೆಪಿ ಬಂಗಾಳದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಆ ಎಲ್ಲಾ ಭವಿಷ್ಯಗಳು ಸುಳ್ಳಾಗಿದ್ದವು.

ಇದನ್ನೂ ಓದಿ : ರಾಜ್ಯದಲ್ಲಿ ಮುಂದಿನ 3 ದಿನ ವರುಣನ ಆರ್ಭಟ: ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ತಮಿಳುನಾಡಿನಲ್ಲಿ ಮತ್ತೊಮ್ಮೆ ಡಿಎಂಕೆ ಸರ್ಕಾರ ರಚಿಸುವುದು ಪಕ್ಕಾ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಪೀಪಲ್ಸ್ ಪಲ್ಸ್ ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ 125-145, ಎಐಎಡಿಎಂಕೆ-ಬಿಜೆಪಿಗೆ 65-80 ಮತ್ತು ಟಿವಿಕೆಗೆ 18-24 ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಡಿಎಂಕೆ-ಕಾಂಗ್ರೆಸ್ 122-132, ಎನ್‌ಡಿಎ 87-100 ಮತ್ತು ಟಿವಿಕೆ 10-12 ಸ್ಥಾನಗಳನ್ನು ಪಡೆಯಲಿದೆ ಎಂದು ಮ್ಯಾಟ್ರಿಜ್ ಭವಿಷ್ಯ ನುಡಿದಿದೆ. ತಮಿಳುನಾಡಿನಲ್ಲಿ ಒಟ್ಟು 234 ಸ್ಥಾನಗಳಿದ್ದು, ಮ್ಯಾಜಿಕ್ ಸಂಖ್ಯೆ 118 ಆಗಿದೆ.

ಇನ್ನು ಪುದುಚೇರಿಯಲ್ಲಿ, ಆಕ್ಸಿಸ್ ಮೈ ಇಂಡಿಯಾ NDA ಗೆ 16-20 ಸ್ಥಾನಗಳು ಮತ್ತು DMK-ಕಾಂಗ್ರೆಸ್‌ಗೆ 6-8 ಸ್ಥಾನಗಳು ಸಿಗುತ್ತವೆ ಎಂದು ಭವಿಷ್ಯ ನುಡಿದಿದೆ. TVK ತಮಿಳುನಾಡು ವಿಧಾನಸಭೆಯಲ್ಲಿ 2-4 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ . ಪುದುಚೇರಿಯಲ್ಲಿ 30 ಚುನಾಯಿತ ಸ್ಥಾನಗಳಿವೆ.
ಮೇ 4ರಂದು ಈ ಐದು ಪಂಚರಾಜ್ಯಗಳ ಮತಎಣಿಕೆ ಕಾರ್ಯ ನಡೆಯಲಿದ್ದು,ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ ನಿಜವಾಗುತ್ತಾ ಇಲ್ಲವಾ ಎಂಬುದಕ್ಕೆ ಉತ್ತರ ದೊರೆಯಲಿದೆ.

 

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories