ಮೊಟೊರೊಲಾ ಎಡ್ಜ್ 30 ಪ್ರೋ ಗೆ ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ರಿಯಾಯಿತಿ : ಪ್ರೀಮಿಯಂ ಫೋನ್ ಖರೀದಿಗೆ ಇದು ಬೆಸ್ಟ್ ಸಮಯ
ಮೊಟೊರೊಲಾದ 50 MP ಟ್ರಿಪಲ್ ಕ್ಯಾಮೆರಾ, ಫಾಸ್ಟ್ ಚಾರ್ಜಿಂಗ್ ಇರುವ ಎಡ್ಜ್ 30 ಪ್ರೋ ಖರೀದಿಯಲ್ಲಿ ಸಿಗಲಿದೆ 17,000 ರೂ. ಗಿಂತಲೂ ಅಧಿಕ ರಿಯಾಯಿತಿ. ಆದ್ರೆ ಈ ಪ್ರೀಮಿಯಂ ಫೋನ್ ಖರೀದಿಸುವುದು ಎಲ್ಲಿ? ಇಲ್ಲಿದೆ ಓದಿ.
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಬೇಕಾದಷ್ಟಿವೆ. ಅವುಗಳ ಸಾಲಿಗೆ ಮೊಟೊರೊಲಾದ ಎಡ್ಜ್ 30 ಪ್ರೋ ಸ್ಮಾರ್ಟ್‌ಫೋನ್ ಕೂಡಾ ಒಂದು. ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ಗೆ ಭಾರಿ ರಿಯಾಯಿತಿ ಘೋಷಿಸಲಾಗಿದೆ. ಪ್ರೀಮಿಯಂ ಫೋನ್ ಖರೀದಿಗಾಗಿ ಕಾಯುತ್ತಿರುವವರಿಗೆ ಇದು ಸುವರ್ಣಾವಕಾಶವಾಗಿದೆ. ಬಿಡುಗಡೆಯಾದ ಮೌಲ್ಯಕ್ಕೆ ಹೋಲಿಸಿದರೆ ಈ ಫೋನ್ ಬೆಲೆ ಸಿಕ್ಕಾಪಟ್ಟೆ ಅಗ್ಗವಾಗಿದೆ. ಸುಮಾರು ಹದಿನಾರು ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚು ಭರ್ಜರಿ ರಿಯಾಯಿತಿ ಪಡೆದುಕೊಂಡಿರುವ ಮೊಟೊರೊಲಾ ಎಡ್ಜ್ 30 ಪ್ರೋ ಫೋನ್ ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನೋಡೋಣ.
ಮೊಟೊರೊಲಾ ಎಡ್ಜ್ 30 ಪ್ರೊ ರಿಯಾಯಿತಿ
ಮೊಟೊರೊಲಾ ಎಡ್ಜ್ 30 ಪ್ರೊ ಅನ್ನು ಅಗ್ಗದ ಬೆಲೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸುವ ಅವಕಾಶ ಒದಗಿಬಂದಿದೆ. 8GB RAM, 128GB ರೂಪಾಂತರದ ಫೋನ್ ಬಿಡುಗಡೆಯಾದಾಗ 55,999 ರೂ. ಗಳಾಗಿದ್ದವು.ಆದರೆ ಈಗ ಅದೇ ಫೋನ್‌ಗೆ ಕಂಪನಿಯು 46% ರಿಯಾಯಿತಿಯೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಪಟ್ಟಿ ಮಾಡಿದೆ . ಈ ಫೋನ್ ₹16,000 ನೇರ ರಿಯಾಯಿತಿಯನ್ನು ಪಡೆದುಕೊಂಡಿದೆ. ಇದರಿಂದಾಗಿ ಅದರ ಬೆಲೆ ₹30,000 ಕ್ಕೆ ಇಳಿಯುತ್ತದೆ. ಆದರೆ ರಿಯಾಯಿತಿ ಇಷ್ಟಕ್ಕೇ ಸಿಮೀತವಾಗಿಲ್ಲ. ಇದಕ್ಕೆ ಇನ್ನೂ ಹೆಚ್ಚಿನದಾಗಿ ಬ್ಯಾಂಕ್ ರಿಯಾಯಿತಿಯೂ ಸೇರ್ಪಡೆಯಾಗಿದೆ. ಈ ಆಫರ್ ಸಮಯದಲ್ಲಿ ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಸಿ ಮೊಟೊರೊಲ ಎಡ್ಜ್ 30 ಪ್ರೊ ಖರೀದಿಸಿದರೆ, ನೀವು ಹೆಚ್ಚುವರಿಯಾಗಿ ₹1,500 ರಿಯಾಯಿತಿಯನ್ನು ಪಡೆಯಬಹುದು.ಆಗ ಈ ಫೋನ್ ಬೆಲೆ ₹28,500 ಆಗಿರುತ್ತದೆ. ಅಂದರೆ ಒಟ್ಟಾರೆಯಾಗಿ ಈ ಫೋನ್ ಮೇಲೆ ₹17,500 ಲಾಭ ಸಿಗಲಿದೆ.
ಇದನ್ನೂ ಓದಿ: ಮೊಟೊರೊಲಾದ 200MP ಕ್ಯಾಮೆರಾ ಮೊಬೈಲ್ ಅನಾವರಣ: Moto G87 5G ವೈಶಿಷ್ಟ್ಯ, ಬೆಲೆ ಏನು?
ಮೊಟೊರೊಲಾ ಎಡ್ಜ್ 30 ಪ್ರೊ ವೈಶಿಷ್ಟ್ಯ
ಮೊಟೊರೊಲಾ ಎಡ್ಜ್ 30 ಪ್ರೊ 6.7-ಇಂಚಿನ ಫುಲ್ ಹೆಚ್‌ಡಿ + pOLED ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇಯನ್ನು 2.5D ಬಾಗಿದ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ನಿಂದ ರಕ್ಷಿಸಲಾಗಿದೆ. ಇದು ಆಂಟಿ-ಫಿಂಗರ್‌ಪ್ರಿಂಟ್ ಲೇಪನವನ್ನು ಸಹ ಹೊಂದಿದೆ. ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 1 ಚಿಪ್‌ಸೆಟ್‌ನಿಂದ ಚಾಲಿತವಾಗುತ್ತದೆ. ಮೊಟೊರೊಲಾ ಎಡ್ಜ್ 30 ಪ್ರೊ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ. ಇದು f/1.8 ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಒಳಗೊಂಡಿದೆ. ಇದರ ಎರಡನೇ ಕ್ಯಾಮೆರಾವು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಮೊಟೊರೊಲಾ ಈ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಡ್ಯುಯಲ್-LED ಫ್ಲ್ಯಾಷ್ ಅನ್ನು ಒದಗಿಸಿದೆ. ಈ ಫೋನ್ ಬಳಸಿ 24fps ನಲ್ಲಿ 8K ವೀಡಿಯೊ ರೆಕಾರ್ಡಿಂಗ್ ಮಾಡಬಹುದಾಗಿದೆ. ಫೋನ್ 60-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸೆನ್ಸಾರ್ ಅನ್ನು ಹೊಂದಿದೆ. ಒಟ್ಟಾರೆಯಾಗಿ ಇದರ ಕ್ಯಾಮೆರಾ ವೈಶಿಷ್ಟ್ಯ ಅಧ್ಬುತವಾಗಿದೆ.
ಇನ್ನು ಇದರ ಬ್ಯಾಟರಿಯ ಬಗ್ಗೆ ಹೇಳುವುದಾದರೆ ಇದು 4,800mAh ಬ್ಯಾಟರಿಯನ್ನು ಹೊಂದಿದ್ದು, 68W ಟರ್ಬೊಪವರ್ ಫಾಸ್ಟ್ ವೈರ್ಡ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಇದು ಕೇವಲ 15 ನಿಮಿಷಗಳಲ್ಲಿ ಫೋನ್ ಅನ್ನು 0-50 ಪ್ರತಿಶತದಷ್ಟು ಚಾರ್ಜ್ ಮಾಡುತ್ತದೆ. ಮೊಟೊರೊಲಾ ಎಡ್ಜ್ 30 ಪ್ರೊ 15W ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ವೈರ್‌ಲೆಸ್ ಪವರ್ ಹಂಚಿಕೆಯನ್ನು ಸಹ ಒಳಗೊಂಡಿದೆ.


