ಹಿರಿಯಡ್ಕ: ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಬೋಲೆರೋ; ಅಕ್ರಮವಾಗಿ ಜಾನುವಾರು ಸಾಗಾಟ ಜಾಲ ಪತ್ತೆ
ಆರೋಪಿತರಾದ ಉಡುಪಿ ಕುರ್ಕಲ್ ನಿವಾಸಿ ಸುಹಾಸ್ (21) ಮತ್ತು ಕಾಪು ಭಾರತ ನಗರದ ಲವ ಶೆಟ್ಟಿ (64) ಎಂಬುವವರು ಈ ಜಾನುವಾರುಗಳನ್ನು ಕಸಾಯಿಖಾನೆಗೆ ಮಾಂಸ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದರು ಎನ್ನಲಾಗಿದೆ.

ಉಡುಪಿ : ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದು ಚಾಲಕನ ಅಜಾಗರೂಕತೆಯಿಂದಾಗಿ ಚರಂಡಿಗೆ ಬಿದ್ದ ಘಟನೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಕಾಲು ಹೆಬ್ಬಾರು ಸೇತುವೆ ಬಳಿ ನಡೆದಿದೆ. ಅಪಘಾತದ ಬೆನ್ನಲ್ಲೇ ವಾಹನದಲ್ಲಿದ್ದ ಅಕ್ರಮವಾಗಿ ಜಾನುವಾರು ಸಾಗಾಟ ಮಾಡ್ತಾ ಇರೋ ಜಾಲ ಬಯಲಾಗಿದೆ.
ಉಡುಪಿ ಜಿಲ್ಲೆಯ ಪೆರ್ಡೂರು ಕಡೆಯಿಂದ ಹಿರಿಯಡ್ಕ ಮಾರ್ಗವಾಗಿ ಚಲಿಸುತ್ತಿದ್ದ ಬೋಲೆರೋ ಟೆಂಪೋ ಗೂಡ್ಸ್ ವಾಹನ ಅತೀ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ರಸ್ತೆ ಪಕ್ಕದ ಚರಂಡಿಗೆ ಇಳಿದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ, ವಾಹನದಲ್ಲಿ ಯಾವುದೇ ಅನುಮತಿ ಪತ್ರವಿಲ್ಲದೆ ಅನಧಿಕೃತವಾಗಿ 4 ಜಾನುವಾರುಗಳನ್ನು ತುಂಬಿಸಿರುವುದು ಪತ್ತೆಯಾಗಿದೆ.
Also Read : ನೀಟ್ ಪರೀಕ್ಷೆ ಭೀತಿಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ಸಕಲೇಶಪುರದಲ್ಲಿ ಪತ್ತೆ
ಆರೋಪಿತರಾದ ಉಡುಪಿ ಕುರ್ಕಲ್ ನಿವಾಸಿ ಸುಹಾಸ್ (21) ಮತ್ತು ಕಾಪು ಭಾರತ ನಗರದ ಲವ ಶೆಟ್ಟಿ (64) ಎಂಬುವವರು ಈ ಜಾನುವಾರುಗಳನ್ನು ಕಸಾಯಿಖಾನೆಗೆ ಮಾಂಸ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದರು ಎನ್ನಲಾಗಿದೆ. ಜಾನುವಾರುಗಳಿಗೆ ಆಹಾರ ಅಥವಾ ನೀರು ನೀಡದೆ, ಒಂದಕ್ಕೊಂದು ತಾಗುವಂತೆ ಹಗ್ಗದಿಂದ ಬಿಗಿದು ಅತ್ಯಂತ ಹಿಂಸಾತ್ಮಕವಾಗಿ ವಾಹನದಲ್ಲಿ ತುರುಕಲಾಗಿತ್ತು ಎಂದು ತಿಳಿದುಬಂದಿದೆ.
ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದು, ಜಾನುವಾರುಗಳನ್ನು ರಕ್ಷಿಸಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಮುಂದುವರಿದಿದೆ. ಕರಾವಳಿ ಭಾಗದಲ್ಲಿ ಇತ್ತೀಚೆಗೆ ಅಕ್ರಮ ಜಾನುವಾರು ಸಾಗಾಟ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.
Also Read : ಉಡುಪಿ: ಅಂದರ್-ಬಾಹರ್ ಜೂಜಾಟದ ಅಡ್ಡೆ ಮೇಲೆ ಪೊಲೀಸರ ಮಿಂಚಿನ ದಾಳಿ; ನಾಲ್ವರ ಬಂಧನ
hiriadka illegal cattle transport accident case registere udupi



