ಕುಂಭಾಶಿ ದೇವಸ್ಥಾನದ ಮುಂದೆ ಹೈಡ್ರಾಮಾ: ಕಾರಿಗಾಗಿ ರಸ್ತೆಯಲ್ಲೇ ಕುಳಿತು ದಂಪತಿ ಕಿತ್ತಾಟ

ಆನೆಗುಡ್ಡೆ ದೇವಾಲಯದ ಮುಂಭಾಗದಲ್ಲಿ ಕಾರಿಗಾಗಿ ಕಿತ್ತಾಟ ನಡೆಯುತ್ತಿರುವ ಕುರಿತು 112 ಸಹಾಯವಾಣಿಗೆ ಕರೆ ಬಂದ ಹಿನ್ನೆಲೆಯಲ್ಲಿ ಕುಂದಾಪುರ ಠಾಣಾ ಸಹಾಯಕ ಪೊಲೀಸ್‌ ಉಪನಿರೀಕ್ಷಕರಾದ ವಿಲ್ಫ್ರೆಡ್ ಡಿಸೋಜಾ ಭೇಟಿ ನೀಡಿ ಬುದ್ಧಿಮಾತು ಹೇಳಿದ್ದರು

ಕುಂದಾಪುರ: ಕುಂಭಾಶಿ ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನದ ಆವರಣದಲ್ಲಿ ಕಾರಿನ ಮಾಲೀಕತ್ವದ ವಿಚಾರವಾಗಿ ದಂಪತಿ ಹಾಗೂ ಕುಟುಂಬಸ್ಥರ ನಡುವೆ ನಡುರಸ್ತೆಯಲ್ಲೇ ಹೈಡ್ರಾಮಾ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿ ಶಾಂತಿ ಭಂಗ ಉಂಟುಮಾಡಿದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿನಾಯಕ ದೇವಾಲಯದ ಮುಂಭಾಗ ಏನಿದು ಘಟನೆ?

ಬೆಂಗಳೂರು ಮೂಲದ ನಿತಿನ್ ಹಾಗೂ ವಿದ್ಯಾ ಎಂಬ ದಂಪತಿಗಳ ನಡುವೆ ಕಾರಿನ ವಿಚಾರವಾಗಿ ಹಳೆಯ ವೈಮನಸ್ಯವಿತ್ತು. ಶನಿವಾರ ಮಧ್ಯಾಹ್ನ ಕುಂಭಾಶಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮೆಟ್ಟಿಲುಗಳ ಬಳಿ ನಿಂತಿದ್ದ ಹುಂಡೈ ಐ 20 (KA-01- MS -4203) ಕಾರಿನ ವಿಷಯವಾಗಿ ಇತ್ತಂಡಗಳ ನಡುವೆ ಜೋರಾಗಿ ವಾಗ್ವಾದ ನಡೆದಿದೆ.\

Also Read : ಕೋಟ: ಗಿನ್ನಿಸ್ ದಾಖಲೆಯ ಈಜು ಪಟು ಗೋಪಾಲ ಖಾರ್ವಿಗೆ ಲಕ್ಷಾಂತರ ರೂಪಾಯಿ ವಂಚನೆ

ಕಾರಿಗಾಗಿ ನಡುರಸ್ತೆಯಲ್ಲೇ ಕುಳಿತ ಪತ್ನಿ

ಕಾರಿನ ನೋಂದಣಿ ತನ್ನ ಹೆಸರಿನಲ್ಲಿದೆ, ಆದ್ದರಿಂದ ಕಾರು ತನಗೇ ಸೇರಬೇಕು ಎಂದು ಪಟ್ಟು ಹಿಡಿದ ವಿದ್ಯಾ ಎಂಬುವವರು ಕಾರಿನ ಮುಂಭಾಗದಲ್ಲಿ ರಸ್ತೆಯಲ್ಲೇ ಕುಳಿತು ಗಲಾಟೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಿತಿನ್ ಅವರ ತಾಯಿ ಸುಕನ್ಯಾ ಹಾಗೂ ಪ್ರಭಾಕರ್ ಎಂಬುವವರು ಪರಸ್ಪರ ಬೊಬ್ಬೆ ಹಾಕುತ್ತಾ ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ.

Also Read : ಬ್ರಹ್ಮಾವರ: ಮಟ್ಕಾ ದಂಧೆಕೋರನ ಮೇಲೆ ಪೊಲೀಸರ ದಾಳಿ

ಪೊಲೀಸರ ಎಚ್ಚರಿಕೆಗೂ ಬಗ್ಗದ ಕುಟುಂಬ

ಆನೆಗುಡ್ಡೆ ದೇವಾಲಯದ ಮುಂಭಾಗದಲ್ಲಿ ಕಾರಿಗಾಗಿ ಕಿತ್ತಾಟ ನಡೆಯುತ್ತಿರುವ ಕುರಿತು 112 ಸಹಾಯವಾಣಿಗೆ ಕರೆ ಬಂದ ಹಿನ್ನೆಲೆಯಲ್ಲಿ ಕುಂದಾಪುರ ಠಾಣಾ ಸಹಾಯಕ ಪೊಲೀಸ್‌ ಉಪನಿರೀಕ್ಷಕರಾದ ವಿಲ್ಫ್ರೆಡ್ ಡಿಸೋಜಾ ಭೇಟಿ ನೀಡಿ ಬುದ್ಧಿಮಾತು ಹೇಳಿದ್ದರು. ಆದರೂ ಸಾರ್ವಜನಿಕರಿಗೆ ಇತ್ತಂಡಗಳು ತೊಂದರೆ ನೀಡಿವೆ. ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಶಾಂತಿ ಭಂಗ ಉಂಟುಮಾಡಿದ ಆರೋಪದ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kumbhashi temple car dispute couple high drama kundapura News

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories