ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಬಾಕಿ ಹಣ ಬಿಡುಗಡೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ
ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಗುಡ್ನ್ಯೂಸ್ ಸಿಕ್ಕಿದೆ. ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮೀ ಹಣ ಸಿಗದೆ ಕಂಗಾಲಾಗಿದ್ದ ಮಹಿಳೆಯರಿಗೆ ಹಣದ ವಿಚಾರವಾಗಿ ಬಿಗ್ ಅಪ್ಡೇಟ್ಸ್ ಸಿಕ್ಕಿದೆ.

ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಗುಡ್ನ್ಯೂಸ್ ಸಿಕ್ಕಿದೆ. ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮೀ ಹಣ ಸಿಗದೆ ಕಂಗಾಲಾಗಿದ್ದ ಮಹಿಳೆಯರಿಗೆ ಹಣದ ವಿಚಾರವಾಗಿ ಬಿಗ್ ಅಪ್ಡೇಟ್ಸ್ ಸಿಕ್ಕಿದೆ.
ಮುಂದಿನ ಹತ್ತು ದಿನಗಳ ಒಳಗಾಗಿ ಗೃಹಲಕ್ಷ್ಮೀ ಬಾಕಿ ಹಣ ಜಮೆ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ನೀಡಿದ್ದಾರೆ. ಗೃಹಲಕ್ಷ್ಮೀ ಯೋಜನೆ ಜಾರಿಗೆ ಬಂದ ದಿನದಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಹಣ ಬಿಡುಗಡೆಗೆ ವಿಳಂಭವಾಗುತ್ತಲೇ ಇದೆ.
ಕಳೆದ ಕೆಲವು ತಿಂಗಳು ಸರ್ವರ್ ಸಮಸ್ಯೆ, ಕೆವೈಸಿ ಅಪ್ಡೇಟ್ಸ್, ಬ್ಯಾಂಕ್ ಖಾತೆ ಲಿಂಕ್ ಸಮಸ್ಯೆ ಹೀಗೆ ನಾನಾ ಕಾರಣಗಳಿಂದಾಗಿ ಹಣ ಬಿಡುಗಡೆ ವಿಳಂಭವಾಗಿತ್ತು. ಸದ್ಯ ರಾಜ್ಯ ಸರಕಾರ ಕೊನೆಗೂ ಬಾಕಿ ಉಳಿದಿರುವ ಹಣ ಬಿಡುಗಡೆಯ ಕುರಿತು ಗುಡ್ನ್ಯೂಸ್ ಕೊಟ್ಟಿದೆ.
Also Read: ಗೃಹಲಕ್ಷ್ಮಿ ಯೋಜನೆ ಬಾಕಿ ಹಣ ಯಾವಾಗ? ಮಹಿಳೆಯರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್
ಕರ್ನಾಟಕದಲ್ಲಿ ಸುಮಾರು ಒಂದು ಕೋಟಿ 20 ಲಕ್ಷಕ್ಕೂ ಅಧಿಕ ಮಹಿಳೆಯ ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ವಾರ್ಷಿಕವಾಗಿ ಸರಕಾರ ಸುಮಾರು 25 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಈ ಯೋಜನೆಗೆ ವ್ಯಯಿಸುತ್ತಿದ್ದು, ಗೃಹಿಣಿಯರು ಆರ್ಥಿಕ ಸಬಲೀಕರಣಕ್ಕಾಗಿ ಈ ಯೋಜನೆ ಜಾರಿಗೆ ತಂದಿದ್ದು, ಸದ್ಯ ಗೃಹಲಕ್ಷ್ಮೀ ಬ್ಯಾಂಕ್ ಕೂಡ ಜಾರಿಗೆ ಬರುತ್ತಿದೆ.
Good news for Gruhalakshmi beneficiaries Lakshmi Hebbalkar instructs to release pending money



