ಸರ್ಕಾರಿ ಶಾಲೆಗಳಿಗೆ ‘ಪಿಎಂಶ್ರೀ’ ಸ್ಪರ್ಶ: 317 ಶಾಲೆಗಳ ಹೈಟೆಕ್‌ ರೂಪಾಂತರ!

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಇತಿಹಾಸದಲ್ಲೇ ಒಂದು ಹೊಸ ಮನ್ವಂತರ ಆರಂಭವಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಸಜ್ಜುಗೊಳಿಸಲು ಮುಂದಾಗಿರುವ ಶಿಕ್ಷಣ ಇಲಾಖೆ, ಈಗ 'ಪಿಎಂಶ್ರೀ' (PM-SHRI) ಯೋಜನೆಯಡಿ ರಾಜ್ಯದ 317 ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಲು ಬೃಹತ್ ಮಾಸ್ಟರ್‌ಪ್ಲಾನ್ ಸಿದ್ಧಪಡಿಸಿದೆ.

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಇತಿಹಾಸದಲ್ಲೇ ಒಂದು ಹೊಸ ಮನ್ವಂತರ ಆರಂಭವಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಸಜ್ಜುಗೊಳಿಸಲು ಮುಂದಾಗಿರುವ ಶಿಕ್ಷಣ ಇಲಾಖೆ, ಈಗ ‘ಪಿಎಂಶ್ರೀ’ (PM-SHRI) ಯೋಜನೆಯಡಿ ರಾಜ್ಯದ 317 ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಲು ಬೃಹತ್ ಮಾಸ್ಟರ್‌ಪ್ಲಾನ್ ಸಿದ್ಧಪಡಿಸಿದೆ.

ಈ ಯೋಜನೆಯಡಿ ಗ್ರಾಮಮಟ್ಟದ ಶಾಲೆಗಳಿಗೂ ಡಿಜಿಟಲ್ ಸ್ಪರ್ಶ ಸಿಗಲಿದ್ದು, ಮಕ್ಕಳ ಕಲಿಕಾ ಶೈಲಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸರ್ಕಾರ ಸಜ್ಜಾಗಿದೆ. ಕರ್ನಾಟಕ ರಾಜ್ಯದಲ್ಲಿ ಸದ್ಯ 585 ಪಿಎಂಶ್ರೀ ಶಾಲೆಗಳು ಅತ್ಯಾಧುನಿಕ ಸೌಲಭ್ಯಗಳ ಜೊತೆಗೆ ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ ಈ ಶಾಲೆಗಳ ಸುತ್ತಮುತ್ತಲಿನ 1 ರಿಂದ 2 ಕಿ.ಮೀ ವ್ಯಾಪ್ತಿಯಲ್ಲಿರುವ ಇತರ 317 ಸರ್ಕಾರಿ ಶಾಲೆಗಳನ್ನು ಈ ಪಿಎಂಶ್ರೀ ಶಾಲೆಯಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರಕಾರ ಮುಂದಾಗಿದೆ.

ಇನ್ಮುಂದೆ ಈ ಶಾಲೆಗಳು ಪಿಎಂಶ್ರೀ ಸಂಯುಕ್ತ ಸರಕಾರಿ ಶಾಲೆ ಎಂದು ಮರು ನಾಮಕರಣಗೊಳ್ಳಲಿವೆ. ಈ ಶಾಲೆಗಳ ಡೈಸ್‌ಕೋಡ್ (DISE Code) ಪಿಎಂಶ್ರೀ ಶಾಲೆಗಳೊಂದಿಗೆ ವಿಲೀನವಾಗಲಿದ್ದು, ಆಡಳಿತಾತ್ಮಕವಾಗಿ ಇವು ಪಿಎಂಶ್ರೀ ವ್ಯಾಪ್ತಿಗೆ ಬರಲಿವೆ. ಆದರೆ, ಹಳೆಯ ಶೈಕ್ಷಣಿಕ ದಾಖಲೆಗಳು ಮಾತ್ರ ಮೊದಲಿನಂತೆಯೇ ಲಭ್ಯವಿರುತ್ತವೆ.

ಪಿಎಂಶ್ರೀ ಯೋಜನೆಯಡಿ ಲಿಂಕ್ ಆಗುವ ಶಾಲೆಗಳಿಗೆ ಕೇವಲ ಹೆಸರಷ್ಟೇ ಬದಲಾಗುವುದಿಲ್ಲ, ಬದಲಿಗೆ ಅಲ್ಲಿನ ಮೂಲಸೌಕರ್ಯವೇ ಸಂಪೂರ್ಣವಾಗಿ ಬದಲಾಗಲಿದೆ. ಪ್ರತಿಯೊಂದು ತರಗತಿಯೂ ಸ್ಮಾರ್ಟ್ ಕ್ಲಾಸ್ ರೂಮ್‌ಗಳಾಗಿ ಬದಲಾಗಲಿವೆ.

ಡಿಜಿಟಲ್ ಬೋರ್ಡ್ ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಪಾಠ ಪ್ರವಚನ ನಡೆಯಲಿದೆ. ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಸುಸಜ್ಜಿತ ವಿಜ್ಞಾನ ಪ್ರಯೋಗಾಲಯಗಳು ಹಾಗೂ ತಾಂತ್ರಿಕ ಕೌಶಲ್ಯಕ್ಕಾಗಿ ‘ಅಟಲ್ ಟಿಂಕರಿಂಗ್ ಲ್ಯಾಬ್’ಗಳನ್ನು ಸ್ಥಾಪಿಸಲಾಗುತ್ತದೆ. ಪ್ರತ್ಯೇಕ ಕಂಪ್ಯೂಟರ್ ಲ್ಯಾಬ್‌ಗಳ ಮೂಲಕ ಗ್ರಾಮೀಣ ಭಾಗದ ಮಕ್ಕಳೂ ತಂತ್ರಜ್ಞಾನದ ಅರಿವು ಪಡೆಯಲಿದ್ದಾರೆ.

Also Read: ಕರ್ನಾಟಕ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ ಶೇ. 1.50 ರಷ್ಟು ಹೆಚ್ಚಳ ಆದೇಶ

ಯಾವ ಶಾಲೆಗಳಲ್ಲಿ 150 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೋ, ಅಂತಹ ಶಾಲೆಗಳಿಗೆ ಪ್ರತ್ಯೇಕವಾಗಿ ಪ್ರಥಮ ದರ್ಜೆ ಸಹಾಯಕ (FDA) ಹಾಗೂ ಡಿ ಗ್ರೂಪ್ ಸಿಬ್ಬಂದಿಗಳನ್ನು ನೇಮಿಸಲು ಇಲಾಖೆ ಚಿಂತನೆ ನಡೆಸಿದೆ. ಇದರಿಂದ ಶಾಲೆಯ ಆಡಳಿತಾತ್ಮಕ ಕೆಲಸಗಳು ಸುಗಮವಾಗಲಿದ್ದು, ಶಿಕ್ಷಕರು ಕೇವಲ ಬೋಧನೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತದೆ.

ಪಿಎಂಶ್ರೀ ಶಾಲೆಗಳು ಕೇವಲ ಮಾದರಿ ಶಾಲೆಗಳಲ್ಲ, ಇವು ‘ನಾಯಕ ಶಾಲೆಗಳು’ (Leader Schools). ಅಂದರೆ, ಇವು ಸುತ್ತಮುತ್ತಲಿನ ಇತರೆ ಶಾಲೆಗಳಿಗೆ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತವೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಸಂಪೂರ್ಣವಾಗಿ ಜಾರಿಗೆ ತರುವಲ್ಲಿ ಈ ಶಾಲೆಗಳು ಮುಂಚೂಣಿಯಲ್ಲಿರಲಿವೆ.

ಮಕ್ಕಳಲ್ಲಿ ಕೇವಲ ಪಠ್ಯವಲ್ಲದೆ, ಸೃಜನಶೀಲತೆ, ಕೌಶಲ್ಯ ಮತ್ತು ಪರಿಸರ ಪ್ರಜ್ಞೆಯನ್ನು ಬೆಳೆಸುವುದು ಈ ಯೋಜನೆಯ ಅಂತಿಮ ಗುರಿಯಾಗಿದೆ. 2026-27ನೇ ಶೈಕ್ಷಣಿಕ ವರ್ಷದಿಂದ ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದ್ದು, ಇದರಿಂದ ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ.

PM Shree touches government schools High-tech transformation of 317 schools

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories