ಬಿಯರ್ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌ : ಬಿಯರ್‌ ಸವಿಯೋಕೆ ಗೋವಾಕ್ಕೆ ಹೋಗಬೇಕಿಲ್ಲ, ಕರ್ನಾಟಕದಲ್ಲಿ ಅಗ್ಗದ ಬಿಯರ್‌

ಕರ್ನಾಟಕ ಸರಕಾರ ಮೇ ತಿಂಗಳಿನಿಂದಲೇ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿದೆ. ಹೊಸ ಆಲ್ಕೋಹಾಲ್‌ ಇನ್‌ ಬಿವರೇಜ್‌ (AIB) ನೀತಿಯಿಂದಾಗಿಯೇ ಬಿಯರ್‌ ದರದಲ್ಲಿ ಬಾರೀ ಇಳಿಕೆಯಾಗಿದೆ.. ಕನಿಷ್ಠ 5 ರೂಪಾಯಿ ಯಿಂದ ಹಿಡಿದು, ಗರಿಷ್ಠ 75 ರೂಪಾಯಿವರೆಗೆ ಪ್ರತೀ ಬಿಯರ್‌ ಬಾಟಲಿ ಮೇಲೆ ದರ ಇಳಿಕೆಯಾಗಿದೆ.

ಬೆಂಗಳೂರು : ನೀವು ಬಿಯರ್ ಪ್ರಿಯರೇ ? ಹಾಗಾದರೆ ನಿಮಗೆ ಇಲ್ಲಿದೆ ಒಂದು ಭರ್ಜರಿ ಸಿಹಿ ಸುದ್ದಿ. ಇನ್ಮುಂದೆ ಅಗ್ಗದ ಬೆಲೆಯ ಬಿಯರ್ ಸವಿಯೋದಕ್ಕೆ ನೆರೆಯ ರಾಜ್ಯವಾಗಿರುವ ಗೋವಾಕ್ಕೆ ತೆರಳೋ ಅವಶ್ಯಕತೆಯೇ ಇಲ್ಲ. ಯಾಕೆಂದ್ರೆ ಕರ್ನಾಟಕ ಸರಕಾರವೇ ರಾಜ್ಯದ ಮಧ್ಯಪ್ರಿಯರಿಗೆ ಬಂಪರ್‌ ಆಫರ್‌ ನೀಡಿದ್ದು, ಅಗ್ಗದ ದರದಲ್ಲಿ ಬಿಯರ್‌ ಪೂರೈಕೆ ಮಾಡಲು ಕರ್ನಾಟಕ ಸರಕಾರ ಮುಂದಾಗಿದೆ. ಈಗಾಗಲೇ ಬಿಯರ್‌ ದರದಲ್ಲಿ ಶೇಕಡಾ 35ರಷ್ಟು ಇಳಿಕೆ ಮಾಡಲಾಗಿದ್ದು, ಹೊಸ ದರ ಮೇ 11ರಿಂದಲೇ ಜಾರಿಗೆ ಬಂದಿದೆ.

ಕರ್ನಾಟಕ ಸರಕಾರ ಮೇ ತಿಂಗಳಿನಿಂದಲೇ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿದೆ. ಹೊಸ ಆಲ್ಕೋಹಾಲ್‌ ಇನ್‌ ಬಿವರೇಜ್‌ (AIB) ನೀತಿಯಿಂದಾಗಿಯೇ ಬಿಯರ್‌ ದರದಲ್ಲಿ ಬಾರೀ ಇಳಿಕೆಯಾಗಿದೆ.. ಕನಿಷ್ಠ 5 ರೂಪಾಯಿ ಯಿಂದ ಹಿಡಿದು, ಗರಿಷ್ಠ 75 ರೂಪಾಯಿವರೆಗೆ ಪ್ರತೀ ಬಿಯರ್‌ ಬಾಟಲಿ ಮೇಲೆ ದರ ಇಳಿಕೆಯಾಗಿದೆ. ಹೊಸ ಅಬಕಾರಿ ನೀತಿ ಬಿಯರ್‌ ಪ್ರಿಯರಿಗೆ ಖುಷಿ ಕೊಟ್ರೆ, ಮದ್ಯ ಪ್ರಿಯರಿಗೆ ಶಾಕ್‌ ಕೊಟ್ಟಿದೆ.

ಗೋವಾಕ್ಕಿಂತಲೂ ಅಗ್ಗವಾಗಿದ್ಹೇಗೆ ಕರ್ನಾಟಕದ ಬಿಯರ್ ?

ಕರ್ನಾಟಕ ಸರಕಾರ ಇದೇ ಮೊದಲ ಬಾರಿ ಹೊಸ ಅಬಕಾರಿ ನೀತಿಯ ಅಡಿಯಲ್ಲಿ ಬಿಯರ್‌ ದರದಲ್ಲಿ ಬಾರೀ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ. ಮದ್ಯಪ್ರಿಯರು ಗೋವಾದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಬಿಯರ್ ಸಿಗುತ್ತದೆ ಅನ್ನೋ ಕಾರಣದಿಂದಲೇ ಪ್ರವಾಸಕ್ಕೆ ತೆರಳುತ್ತಿದ್ದರು. ಆದರೆ ಇದೀಗ ಕರ್ನಾಟಕದಲ್ಲಿಯೇ ದರ ಗಣನೀಯವಾಗಿ ಇಳಿಕೆ ಆಗುವುದರಿಂದ. ಇನ್ಮುಂದೆ ಗೋವಾಕ್ಕೆ ಪ್ರವಾಸ ತೆರಳುವ ಅಗತ್ಯ ಇರೋದಿಲ್ಲ. ಬಿಯರ್‌ ದರ ಇಳಿಕೆಯಈ ನಿರ್ಧಾರದಿಂದಾಗಿ ರಾಜ್ಯದಲ್ಲಿ ಬಿಯರ್ ಮಾರಾಟ ಮತ್ತು ಸರ್ಕಾರದ ಆದಾಯ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

Also Read: ಮಳೆಯ ರೌದ್ರನರ್ತನಕ್ಕೆ ನಲುಗಿದ ಕರ್ನಾಟಕ – ಗುಡುಗು, ಸಿಡಿಲಿಗೆ 6 ಸಾವು, ಮೇ 17ರವರೆಗೆ ಹೈ ಅಲರ್ಟ್‌

ಜನಪ್ರಿಯ ಬ್ರ್ಯಾಂಡ್‌ಗಳ ಹೊಸ ದರ ಹೇಗಿರಲಿದೆ ? (Mild Beer Price Cut)

ಹೊಸ ಅಬಕಾರಿ ನೀತಿಯ ಪ್ರಕಾರ, ಶೇಕಡಾ 5 ರಷ್ಟು ಆಲ್ಕೋಹಾಲ್ ಅಂಶವನ್ನು ಹೊಂದಿರುವ ಮೈಲ್ಡ್ ಮತ್ತು ಲಾಗರ್ ಬಿಯರ್‌ಗಳ ಗರಿಷ್ಠ ಚಿಲ್ಲರೆ ದರ (MRP) ಶೇ. 20 ರಿಂದ 25 ರಷ್ಟು ಕಡಿಮೆ ಮಾಡಲಾಗಿದೆ.

ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯವಾಗಿರುವ ಮತ್ತು ಹೆಚ್ಚು ಮಾರಾಟವಾಗುವ ಕೆಳಗಿನ ಬ್ರ್ಯಾಂಡ್‌ಗಳ ಬೆಲೆಯಲ್ಲಿ 20 ರೂ.ನಿಂದ 75 ರೂ.ವರೆಗೆ ಇಳಿಕೆಯಾಗಿದೆ:

  • ಕಿಂಗ್‌ಫಿಶರ್ ಪ್ರೀಮಿಯಂ (Kingfisher Premium)
  • ಕಿಂಗ್‌ಫಿಶರ್ ಅಲ್ಟ್ರಾ (Kingfisher Ultra)
  • ಬಡ್‌ವೈಸರ್ (Budweiser)
  • ಯುಬಿ ಎಕ್ಸ್‌ಪೋರ್ಟ್ (UB Export)
  • ಹೈನೆಕೆನ್ (Heineken)

ಕಿಕ್ ಇಳಿಸಿದ ‘ಐಎಂಎಲ್’ ಬೆಲೆ ಏರಿಕೆ: ಸಾಮಾನ್ಯರಿಗೆ ಶಾಕ್‌

ಒಂದೆಡೆ ಬಿಯರ್ ಪ್ರಿಯರು ದರ ಇಳಿಕೆಯಿಂದ ಗ್ರಾಹಕರು ಸಂಭ್ರಮ ಪಡ್ತಾ ಇದ್ರೆ, ಮತ್ತೊಂದೆಡೆಯಲ್ಲಿ ಭಾರತೀಯ ನಿರ್ಮಿತ ಮದ್ಯ (IML) ಹಾಗೂ ರಮ್ ಪ್ರಿಯರಿಗೆ ಸರ್ಕಾರ ಶಾಕ್ ನೀಡಿದೆ. ಹೊಸ ಅಬಕಾರಿ ತೆರಿಗೆ ನೀತಿಯು ಕೆಳ ಮತ್ತು ಮಧ್ಯಮ ಆದಾಯದ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.

180 ಮಿಲಿ (ನಿಪ್) ಟೆಟ್ರಾ ಪ್ಯಾಕ್‌ಗಳಲ್ಲಿ ಮಾರಾಟವಾಗುವ ಐಎಂಎಲ್‌ನ ಮೊದಲ ಐದು ಅಬಕಾರಿ ಸ್ಲ್ಯಾಬ್‌ಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಸಾಮಾನ್ಯ ಮದ್ಯದ ಬೆಲೆಗಳು ಶೇ. 20 ರಿಂದ 25 ರಷ್ಟು ದುಬಾರಿಯಾಗಿವೆ. ರಾಜ್ಯದ ಒಟ್ಟು ಅಬಕಾರಿ ಆದಾಯಕ್ಕೆ ಈ ಮೊದಲ ಐದು ಸ್ಲ್ಯಾಬ್‌ಗಳೇ ಶೇ. 75 ರಿಂದ 80 ರಷ್ಟು ಕೊಡುಗೆ ನೀಡುವುದರಿಂದ, ಬಡ ಮತ್ತು ಮಧ್ಯಮ ವರ್ಗದ ಮದ್ಯಪಾನಿಗಳಿಗೆ ಇದು ಭಾರಿ ಹೊರೆಯಾಗಲಿದೆ.

ಓಲ್ಡ್ ಮಾಂಕ್ ರಮ್ ಬೆಲೆ ಎಷ್ಟು ಏರಿಕೆಯಾಗಿದೆ ?

ಮದ್ಯಪ್ರಿಯರ ಅತ್ಯಂತ ಜನಪ್ರಿಯ ಬ್ರ್ಯಾಂಡ್ ಆದ ‘ಓಲ್ಡ್ ಮಾಂಕ್’ (Old Monk Rum – ಶೇ. 42.8 ಆಲ್ಕೋಹಾಲ್ ಪ್ರಮಾಣ) ಐದನೇ ಅಬಕಾರಿ ಸ್ಲ್ಯಾಬ್ ಅಡಿಯಲ್ಲಿ ಬರುತ್ತದೆ. ಹೊಸ ನೀತಿಯ ಪರಿಣಾಮವಾಗಿ ಇದರ ಬೆಲೆ ಭಾರಿ ಏರಿಕೆ ಕಂಡಿದ್ದು, ಈ ಹಿಂದೆ 765 ರೂಪಾಯಿ ಇದ್ದ ಬಾಟಲ್ ಬೆಲೆ ಈಗ ಬರೋಬ್ಬರಿ 850 ರೂಪಾಯಿಗೆ ತಲುಪಿದೆ.

Also Read: ಮೇ 20ರಿಂದ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತ? ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಘೋಷಣೆ

ಹೊಸ ದರ ಜಾರಿಯಾಗಿದ್ದರೂ ಗೊಂದಲದಲ್ಲಿ ಗ್ರಾಹಕರು

ಮೇ 11 , 2026 ರಿಂದಲೇ ಈ ಹೊಸ ಅಬಕಾರಿ ನೀತಿ ಅಧಿಕೃತವಾಗಿ ಜಾರಿಗೆ ಬಂದಿದ್ದರೂ, ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಇನ್ನೂ ಸಂಪೂರ್ಣ ಮಾಹಿತಿ ತಲುಪಿಲ್ಲ. ಎಲ್ಲಾ ಬ್ರ್ಯಾಂಡ್‌ಗಳ ಅಂತಿಮ ಹೊಸ ಎಂಆರ್‌ಪಿ (MRP) ದರ ಪಟ್ಟಿ ಇನ್ನೂ ಮದ್ಯದ ಅಂಗಡಿಗಳಿಗೆ ತಲುಪಬೇಕಿದೆ. ಹೀಗಾಗಿ ಸದ್ಯ ಹಳೆಯ ಸ್ಟಾಕ್‌ ಖಾಲಿಯಾಗಿದ್ದು, ಹೊಸ ದರದ ಮದ್ಯ ಮಾರುಕಟ್ಟೆಗೆ ಪೂರ್ಣ ಪ್ರಮಾಣದಲ್ಲಿ ಲಗ್ಗೆ ಇಡಲು ಇನ್ನು ಕೆಲವು ದಿನಗಳು ಬೇಕಾಗಬಹುದು ಎಂದು ಬೆಂಗಳೂರಿನ ಮದ್ಯ ಮಾರಾಟಗಾರರು ತಿಳಿಸಿದ್ದಾರೆ.

Great news for beer lovers No need to go to Goa for beer drink cheap beer in Karnataka

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories