ಜನಸಾಮಾನ್ಯರಿಗೆ ಬೆಲೆ ಏರಿಕೆ ಡಬಲ್ ಶಾಕ್‌: ಔಷಧಿ ದರ ಏರಿಕೆ ಜೊತೆ ಸಿಎನ್‌ಜಿ ದರವೂ ಹೆಚ್ಚಳ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಮೇಲಿಂದ ಮೇಲೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಲೇ ಇದೆ. ದಿನಬಳಕೆಯ ಒಂದೊಂದೇ ವಸ್ತುಗಳ ದರ ಏರಿಕೆಯಾಗುತ್ತಲೇ ಇದ್ದು ಶ್ರೀ ಸಾಮಾನ್ಯರು ಕಂಗಾಲಾಗಿದ್ದಾರೆ. ಇದೀಗ ಈ ಸಾಲಿಗೆ ಜೀವ ರಕ್ಷಕ ಔಷಧಿಗಳು ಸೇರಿವೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಮೇಲಿಂದ ಮೇಲೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಲೇ ಇದೆ. ದಿನಬಳಕೆಯ ಒಂದೊಂದೇ ವಸ್ತುಗಳ ದರ ಏರಿಕೆಯಾಗುತ್ತಲೇ ಇದ್ದು ಶ್ರೀ ಸಾಮಾನ್ಯರು ಕಂಗಾಲಾಗಿದ್ದಾರೆ. ಇದೀಗ ಈ ಸಾಲಿಗೆ ಜೀವ ರಕ್ಷಕ ಔಷಧಿಗಳು ಸೇರಿವೆ. ಈ ಸಂಬಂಧ ಕರ್ನಾಟಕ ಫಾರ್ಮಾ ಮೆಡಿಕಲ್ ಅಸೋಸಿಯೇಷನ್ ಮಾಹಿತಿ ನೀಡಿದೆ.

ಮಾತ್ರೆಗಳ ತಯಾರಿಕೆಗೆ ಪೆಟ್ರೋ ಕೆಮಿಕಲ್ಸ್​ ಕಚ್ಛಾವಸ್ತುವಿನ ಅಗತ್ಯತೆ ಇರುತ್ತದೆ. ಆದರೆ ಮಧ್ಯಪ್ರಾಚ್ಯದಲ್ಲಿ ನಡೆಯತ್ತಿರುವ ಯುದ್ಧದಿಂದಾಗಿ ಈ ಕಚ್ಛಾವಸ್ತುಗಳ ಪೂರೈಕೆಯಲ್ಲಿ ತೀವ್ರ ಏರುಪೇರು ಕಂಡು ಬರುತ್ತಿದೆ. ಹೀಗಾಗಿ ಶೀತ, ಜ್ವರ ಸೇರಿದಂತೆ ವಿವಿಧ ಔಷಧಿಗಳ ಮೇಲೆ ಸರಾಸರಿ 15 ರಿಂದ 20 ಪರ್ಸೆಂಟ್​ ದರ ಏರಿಕೆ ಮಾಡಲಾಗಿದೆ. ಮುಂಬರುವ ಬ್ಯಾಚ್​ನ ಔಷಧಿಗಳಲ್ಲಿ ದರ ಏರಿಕೆಯನ್ನು ಕಾಣಬಹುದು ಎಂದು ಕರ್ನಾಟಕ ಫಾರ್ಮಾ ಮೆಡಿಕಲ್​ ಅಸೋಸಿಯೇಶನ್ ಹೇಳಿದೆ.

Also Read: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ: ಸಿಡಿಲಿಗೆ ಮೂವರು ಬಲಿ, ಶಿವಮೊಗ್ಗದಲ್ಲಿ ರೈಲು ಸಂಚಾರ ಅಸ್ತವ್ಯಸ್ತ

ಇನ್ನು ಇದರ ಜೊತೆಯಲ್ಲಿ ಜನಸಾಮಾನ್ಯರಿಗೆ ಮತ್ತೊಂದು ಬಿಗ್​ ಶಾಕ್​ ಎಂಬಂತೆ ಸಾಂದ್ರೀಕೃತ ನೈಸರ್ಗಿಕ ಅನಿಲ ಅಂದರೆ ಸಿಎನ್​ಜಿ ದರವನ್ನು ಪ್ರತಿ ಕೆಜಿಗೆ 1 ರೂಪಾಯಿ ಏರಿಕೆ ಮಾಡಲಾಗಿದೆ. ಈ ಪರಿಷ್ಕೃತ ದರವು ಭಾನುವಾರದಿಂದಲೇ ಜಾರಿಗೆ ಬಂದಿದೆ. ಗುರುವಾರವಷ್ಟೇ ಪ್ರತಿ ಕೆಜಿಗೆ 2 ರೂಪಾಯಿ ಏರಿಕೆ ಮಾಡಲಾಗಿತ್ತು. ಒಂದೇ ವಾರದಲ್ಲಿ ಸಿಎನ್​ಜಿ ದರವು ಪ್ರತಿ ಕೆ.ಜಿಗೆ ಒಟ್ಟೂ 3 ರೂಪಾಯಿ ಏರಿಕೆ ಆದಂತಾಗಿದೆ.

Price hike a double shock for the common man Along with the increase in medicine prices CNG prices also increased

 

 

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories