ದೆವ್ವ ಹಿಡಿದಿದೆ ಎಂದುಕೊಂಡ ಬಾಲಕಿಗೆ ಮಗು ಜನನ: ಪ್ರೀತಿ ಹೆಸರಲ್ಲಿ ಟ್ರ್ಯಾಕ್ಟರ್ ಚಾಲಕನ ಮೋಸ ಬಯಲು
ಪ್ರೀತಿ ಹೆಸರಲ್ಲಿ ಮೋಸ ಹೋಗಿ ಅಪ್ರಾಪ್ತೆ ಗರ್ಭಿಣಿಯಾಗಿದ್ದರೆ, ಇತ್ತ ಮಗಳ ಹೊಟ್ಟೆ ದೊಡ್ಡದಾಗಿರುವುದನ್ನ ಕಂಡು ಆಕೆಗೆ ದೆವ್ವ ಸೋಂಕಿಗೆ ಎಂದು ಪೋಷಕರು ಅಪಾರ್ಥ ತಿಳಿದುಕೊಂಡ ವಿಲಕ್ಷಣ ಘಟನೆಯೊಂದು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ ಸಂಭವಿಸಿದೆ.
ಪ್ರೀತಿ ಹೆಸರಲ್ಲಿ ಮೋಸ ಹೋಗಿ ಅಪ್ರಾಪ್ತೆ ಗರ್ಭಿಣಿಯಾಗಿದ್ದರೆ, ಇತ್ತ ಮಗಳ ಹೊಟ್ಟೆ ದೊಡ್ಡದಾಗಿರುವುದನ್ನ ಕಂಡು ಆಕೆಗೆ ದೆವ್ವ ಸೋಂಕಿಗೆ ಎಂದು ಪೋಷಕರು ಅಪಾರ್ಥ ತಿಳಿದುಕೊಂಡ ವಿಲಕ್ಷಣ ಘಟನೆಯೊಂದು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ ಸಂಭವಿಸಿದೆ.
ಅಪ್ರಾಪ್ತೆ ಮಗಳ ಹೊಟ್ಟೆ ಮುಂದೆ ಬಂದಿದ್ದು, ಆಕೆ ಕೈ – ಕಾಲು ನೋವು ಹಾಗೂ ಸುಸ್ತಿನಿಂದ ಬಳಲುತ್ತಿದ್ದಳು. ತೀವ್ರ ಮೂಢನಂಬಿಕೆ ಹೊಂದಿದ್ದ ಆಕೆಯ ಪೋಷಕರು ಆಕೆಗೆ ಭೂತದ ಗಾಳಿ ಸೋಂಕಿಗೆ ಎಂದು ಭಾವಿಸಿ ನಾಯಕನಹಟ್ಟಿಯ ಅಜ್ಜಯ್ಯನ ಗುಡಿಗೆ ಕರೆದುಕೊಂಡು ಹೋಗಿದ್ದಾರೆ. ದೆವ್ವ ಬಿಡಿಸಬೇಕು ಎಂದುಕೊಂಡಿದ್ದ ವೇಳೆ ಬಾಲಕಿಗೆ ತೀವ್ರ ಹೆರಿಗೆ ನೋವು ಉಂಟಾಗಿದ್ದು, ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಅಪ್ರಾಪ್ತೆ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಈ ಪ್ರಕರಣದ ಅಸಲಿ ಅಂಶ ಬೆಳಕಿಗೆ ಬಂದಿದೆ. ಚೋಗಳೇರಿ ಹಟ್ಟಿ ಗ್ರಾಮದ 30 ವರ್ಷದ ಮಂಜಣ್ಣ ಎಂಬಾತ ಈಕೆಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂಬುದು ತಿಳಿದುಬಂದಿದೆ. ಟ್ರ್ಯಾಕ್ಟರ್ ಚಾಲಕನಾಗಿದ್ದ ಈತ ಬಾಲಕಿಯೊಂದಿಗೆ ಪ್ರೀತಿ – ಪ್ರೇಮದ ನಾಟಕವಾಡಿ, ಮದುವೆಯ ಆಮೀಷವೊಡ್ಡಿದ್ದ ಎನ್ನಲಾಗಿದೆ.
Also Read: ರಾಜ್ಯ ರಾಜಧಾನಿಯಲ್ಲಿ ಅಮಾನವೀಯ ಕೃತ್ಯ: ರಸ್ತೆ ಬದಿಯ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ, ವಿಡಿಯೋ ವೈರಲ್
ಬಳಿಕ ಆಕೆಯ ಮೇಲೆ ಅತ್ಯಾಚಾರವನ್ನೂ ಎಸಗಿದ್ದ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಜಗಳೂರು ಠಾಣಾ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮಂಜಣ್ಣನನ್ನು ಬಂಧಿಸಿದ್ದಾರೆ.
Girl who thought she was possessed by a demon gives birth to a baby Tractor drivers deception in the name of love exposed



