ಉಡುಪಿ: ವಾಚ್‌ಮ್ಯಾನ್ ಮೇಲೆ ಟೈಲರ್ ಅಟ್ಟಹಾಸ : ಕತ್ತಿಯಿಂದ ಭೀಕರ ಹಲ್ಲೆ

ಉಡುಪಿ ಜಿಲ್ಲೆಯ ಹೇರೂರು ನಿವಾಸಿ ಆಗಿರುವ ಶಂಕರ್ ಗಾಣಿಗ ಅವರು ಉಡುಪಿ ಸೂಪರ್ ಬಜಾರ್‌ನಲ್ಲಿ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ಕಟ್ಟಡದ ಟೈಲರ್ ಅಂಗಡಿಯಲ್ಲಿ ಕೃಷ್ಣ ಗಾಣಿಗ ಎಂಬವರು ಟೈಲರ್ ಆಗಿ ಕೆಲಸ ಮಾಡುತ್ತಿದ್ದರು.

ಕಾಪು: ಹಳೆಯ ವೈಷಮ್ಯ ಹಾಗೂ ಕ್ಷುಲ್ಲಕ ಕಾರಣಕ್ಕೆ ಉಡುಪಿಯ ಸೂಪರ್ ಬಜಾರ್‌ನಲ್ಲಿ ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಟೈಲರ್ ಹಾಗೂ ಆತನ ತಂಡ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಾಳು ಶಂಕರ್ ಗಾಣಿಗ (58) ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ಹೇರೂರು ನಿವಾಸಿ ಆಗಿರುವ ಶಂಕರ್ ಗಾಣಿಗ ಅವರು ಉಡುಪಿ ಸೂಪರ್ ಬಜಾರ್‌ನಲ್ಲಿ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ಕಟ್ಟಡದ ಟೈಲರ್ ಅಂಗಡಿಯಲ್ಲಿ ಕೃಷ್ಣ ಗಾಣಿಗ ಎಂಬವರು ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಮೂಲಗಳ ಪ್ರಕಾರ, ಕೃಷ್ಣ ಗಾಣಿಗ ಕಳೆದ ಕೆಲವು ಸಮಯದಿಂದ ಶಂಕರ್ ಅವರ ಮೇಲೆ ವಿನಾಕಾರಣ ಸಿಟ್ಟು ಇಟ್ಟುಕೊಂಡಿದ್ದರು. ಕೆಲಸದ ಸಮಯದಲ್ಲಿ ಶಂಕರ್ ಅವರನ್ನು ಗುರಾಯಿಸುವುದು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮಾಡುತ್ತಿದ್ದರು ಎನ್ನಲಾಗಿದೆ.

Also Read : ಕುಂದಾಪುರ: ತ್ರಾಸಿಯಲ್ಲಿ ಯುವಕನ ಮೇಲೆ ತಲವಾರ್ ದಾಳಿ

ಸುಮಾರು 15 ದಿನಗಳ ಹಿಂದೆ, ಕುಡಿದ ಅಮಲಿನಲ್ಲಿ ಬಂದಿದ್ದ ಕೃಷ್ಣ ಗಾಣಿಗ, ಶಂಕರ್ ಅವರ ಮೈಮೇಲೆ ಕೈಹಾಕಿ ದೂಡಿ ಹಲ್ಲೆ ನಡೆಸಿದ್ದರು. ಈ ಸಣ್ಣ ಜಗಳವೇ ಮುಂದೆ ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣವಾಗಿದೆ. ಮೇ 17ರಂದು ಸಂಜೆ ಸುಮಾರು 6:30ರ ಸುಮಾರಿಗೆ ಶಂಕರ್ ಅವರು ಉಡುಪಿಯ ಬಲಾಯಿಪಾದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಕೃಷ್ಣ ಗಾಣಿಗ ಮತ್ತು ಆತನ ಸ್ನೇಹಿತರಾದ ದಯಾನಂದ ಹಾಗೂ ಅಣ್ಣೋಜಿ ಎಂಬುವವರು ಅಡ್ಡಗಟ್ಟಿ ಮುಖಕ್ಕೆ ಮನಸೋಇಚ್ಛೆ ಹೊಡೆದು ಹಲ್ಲೆ ಮಾಡಿದ್ದಾರೆ. ಈ ವಿಚಾರವನ್ನು ಶಂಕರ್ ತಮ್ಮ ಮಗ ಸೃಜನ್‌ಗೆ ತಿಳಿಸಿದ್ದಾರೆ.

ರಾಜಿ ಮಾತುಕತೆಗೆ ಹೋದಾಗ ಕತ್ತಿಯಿಂದ‌ ಹಲ್ಲೆ

ತಂದೆಗೆ ಆದ ಅವಮಾನ ಮತ್ತು ಹಲ್ಲೆಯ ಬಗ್ಗೆ ವಿಚಾರಿಸಲು ಸೃಜನ್ ಹಾಗೂ ಸಂಬಂಧಿಕ ಸಂತೋಷ್ ಅವರೊಂದಿಗೆ ಕೃಷ್ಣ ಗಾಣಿಗನ ಮನೆಗೆ ತೆರಳಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಶಂಕರ್ ಗಾಣಿಗ ಅವರ ತಲೆಗೆ ಕತ್ತಿಯಿಂದ ಬಲವಾಗಿ ಕಡಿದಿದ್ದಾರೆ. ತಂದೆಯನ್ನು ರಕ್ಷಿಸಲು ಬಂದ ಸೃಜನ್‌ನನ್ನು ನೆಲಕ್ಕೆ ದೂಡಿ ತುಳಿದಿದ್ದಾರೆ. ಗಲಾಟೆ ಬಿಡಿಸಲು ಹೋದ ಸಂತೋಷ್ ಮೇಲೆಯೂ ಹಲ್ಲೆ ನಡೆಸಲಾಗಿದೆ. ಸ್ಥಳಕ್ಕೆ ಬಂದ ದಯಾನಂದ ಮತ್ತು ಅಣ್ಣೋಜಿ ಸಹ ಸೇರಿಕೊಂಡು ಕುಟುಂಬದ ಮೇಲೆ ದಾಳಿ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

Also Read : ಬೈಂದೂರು : ವಾಟ್ಸಾಪ್ ಸ್ಟೇಟಸ್ ಬರೆದಿಟ್ಟು ನದಿಗೆ ಹಾರಿ ಹೋಟೆಲ್ ಉದ್ಯಮಿ ಆತ್ಮಹತ್ಯೆ

ಗಂಭೀರವಾಗಿ ಗಾಯಗೊಂಡಿರುವ ಶಂಕರ್ ಗಾಣಿಗ ಅವರು ನೀಡಿದ ದೂರಿನ ಮೇರೆಗೆ ಕಾಪು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರನ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Udupi watchman attack rk tailor kaup crime news

Related Stories