ಮದ್ಯಪ್ರಿಯರಿಗೆ ಸಿಹಿಸುದ್ದಿ: ಕರ್ನಾಟಕದಲ್ಲಿ ಬಿಯರ್ ಬೆಲೆ ಭಾರೀ ಇಳಿಕೆ!

ಮದ್ಯದ ಮೇಲೆ ಇಂತಹ ತೆರಿಗೆ ಪದ್ಧತಿಯನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಪರಿಚಯಿಸಿದೆ.

ರಾಜ್ಯದ ಬಿಯರ್​ ಪ್ರಿಯರಿಗೆ ಭಾರೀ ಸಿಹಿಸುದ್ದಿಯೊಂದು ದೊರಕಿದೆ. ರಾಜ್ಯದಲ್ಲಿ ಹೊಸದಾಗಿ ಜಾರಿಗೆ ತರಲಾಗಿರುವ ‘ಆಲ್ಕೋಹಾಲ್ ಇನ್ ಬೇವರೆಜ್’ ತೆರಿಗೆ ಪದ್ಧತಿಯಿಂದಾಗಿ ಪ್ರಮುಖ ಬ್ರ್ಯಾಂಡ್‌ಗಳ ಬಿಯರ್ ಬೆಲೆಯಲ್ಲಿ ಗರಿಷ್ಠ 80 ರೂಪಾಯಿಗಳವರೆಗೆ ಭಾರಿ ಕಡಿತವಾಗಿದೆ. ಮದ್ಯದ ಮೇಲೆ ಇಂತಹ ತೆರಿಗೆ ಪದ್ಧತಿಯನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಪರಿಚಯಿಸಿದೆ.

ಈ ಮೊದಲು ಕರ್ನಾಟಕದಲ್ಲಿ ಲೀಟರ್​ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಅಬಕಾರಿ ಆದಾಯ ಹೆಚ್ಚಿಸಲು ಹೊಸ ಮಾರ್ಗ ಕಂಡುಕೊಂಡಿರುವ ರಾಜ್ಯ ಸರ್ಕಾರ, ಇನ್ಮುಂದೆ ಆಲ್ಕೋಹಾಲ್​ ಪ್ರಮಾಣ ಆಧರಿಸಿ ಟ್ಯಾಕ್ಸ್​ ವಿಧಿಸಲಿದೆ.

ಇದನ್ನೂ ಓದಿ : ದುಬಾರೆ ದುರಂತ: ಕೊನೆಗೂ ಎಚ್ಚೆತ್ತ ಅರಣ್ಯಾಧಿಕಾರಿಗಳು

ರಾಜ್ಯ ಸರ್ಕಾರದ ಈ ನೂತನ ನಿಯಮದಿಂದಾಗಿ ಆಲ್ಕೋಹಾಲ್​ ಅಂಶ ಕಡಿಮೆ ಇರುವ ಪಾನೀಯಗಳಿಗೆ ತೆರಿಗೆ ಹೊರೆ ಕಡಿಮೆಯಾಗಿದ್ದು, ಬೆಲೆ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಇದರಿಂದ ಬಿಯರ್​ ಪ್ರಿಯರಿಗೆ ಗುಡ್​ನ್ಯೂಸ್​ ದೊರಕಿದಂತಾಗಿದೆ.

ಹೊಸ ತೆರಿಗೆ ನೀತಿಯ ಬಳಿಕ ಪ್ರಮುಖ ಬ್ರ್ಯಾಂಡ್‌ಗಳ ಹಳೆಯ ಮತ್ತು ಹೊಸ ಬೆಲೆಗಳ ವಿವರಗಳನ್ನು ನೋಡೋದಾದ್ರೆ,ಕಿಂಗ್​ಫಿಶರ್​ ಪ್ರೀಮಿಯಂ ಹಳೆಯ ಬೆಲೆ ₹185 ಇದ್ದು, ಹೊಸ ಬೆಲೆ ₹110 ಕ್ಕೆ ಇಳಿಕೆಯಾಗಿದ್ದು 75 ರೂಪಾಯಿ ಉಳಿತಾಯವಾಗಿದೆ. ಕಿಂಗ್​ ಫಿಷರ್​ ಅಲ್ಟ್ರಾ ಹಳೆಯ ಬೆಲೆ ₹225 ಇದ್ದು, ಹೊಸ ಬೆಲೆ ₹150 ಕ್ಕೆ ಇಳಿಕೆಯಾಗಿದೆ. ಹೈನೆಕೆನ್ ಸಿಲ್ವರ್ ಹಳೆಯ ಬೆಲೆ ₹270 ಇದ್ದು, ಹೊಸ ಬೆಲೆ ₹195 ಕ್ಕೆ ಇಳಿಕೆಯಾಗಿದೆ. ಟ್ಯೂಬರ್ಗ್ ಹಳೆಯ ಬೆಲೆ ₹190 ಇದ್ದು, ಹೊಸ ಬೆಲೆ ₹145 ಕ್ಕೆ ಇಳಿಕೆಯಾಗಿದೆ. ಯುಬಿ ಸ್ಟ್ರಾಂಗ್​ ಹಳೆಯ ಬೆಲೆ ₹165 ಇದ್ದು, ಹೊಸ ಬೆಲೆ ₹135 ಕ್ಕೆ ಇಳಿಕೆಯಾಗಿದೆ. ಬಡ್ವೈಸರ್ ಪ್ರೀಮಿಯಂ ಹಳೆಯ ಬೆಲೆ ₹225 ಇದ್ದು, ಹೊಸ ಬೆಲೆ ₹205 ಕ್ಕೆ ಇಳಿಕೆಯಾಗಿದೆ ಹಾಗೂ ಕಿಂಗ್‌ಫಿಷರ್ ಸ್ಟ್ರಾಂಗ್ ಹಳೆಯ ಬೆಲೆ ₹190 ಇದ್ದು, ಹೊಸ ಬೆಲೆ ₹180 ಕ್ಕೆ ಇಳಿಕೆಯಾಗಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.