ಕೌಜಲಗಿ ಮನೆತನದ ಮೂರನೇ ತಲೆಮಾರು, ಶಾಸಕ ಮಹಾಂತೇಶ್ ಕೌಜಲಗಿಗೆ ಒಲಿಯುತ್ತಾ ಸಚಿವ ಸ್ಥಾನ ?
ಬೈಲಹೊಂಗಲದ ಶಾಸಕರು, ಶಿಕ್ಷಣ ಪ್ರೇಮಿ ಮಹಾಂತೇಶ್ ಕೌಜಲಗಿ (Mahantesh Koujalagi) ಅವರಿಗೆ ಈ ಬಾರಿ ಸಚಿವ ಪಟ್ಟ ಸಿಗಲೇಬೇಕೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಬೆಳಗಾವಿ : ಕರ್ನಾಟಕ ರಾಜಕೀಯದಲ್ಲಿ ಸದ್ಯ ಉಂಟಾಗಿರುವ ಮಹತ್ತರ ಬದಲಾವಣೆಗಳ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಭಾರಿ ಸಂಚಲನ ಶುರುವಾಗಿದೆ. ರಾಜ್ಯ ರಾಜಕೀಯದಲ್ಲಿ ದಶಕಗಳ ಇತಿಹಾಸ ಹೊಂದಿರುವ, ತಲೆಮಾರುಗಳಿಂದ ಜನಸೇವೆ ಮಾಡಿಕೊಂಡು ಬಂದಿರುವ ಕೌಜಲಗಿ ಮನೆತನಕ್ಕೆ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ. ಬೈಲಹೊಂಗಲದ ಶಾಸಕರು, ಶಿಕ್ಷಣ ಪ್ರೇಮಿ ಮಹಾಂತೇಶ್ ಕೌಜಲಗಿ (Mahantesh Koujalagi) ಅವರಿಗೆ ಈ ಬಾರಿ ಸಚಿವ ಪಟ್ಟ ಸಿಗಲೇಬೇಕೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಬೆಳಗಾವಿ ಜಿಲ್ಲೆಯ ಹಿರಿಯ ಶಾಸಕರಾಗಿರುವ ಮಹಾಂತೇಶ್ ಕೌಜಲಗಿ ಅವರ ಬೆನ್ನಿಗೆ ದಶಕಗಳ ರಾಜಕೀಯ ಹಿರಿತನ ಹಾಗೂ ತಲೆಮಾರುಗಳ ಸುದೀರ್ಘ ರಾಜಕೀಯ ಇತಿಹಾಸದ ಬಲವಿದೆ. ಮೂರು ತಲೆಮಾರುಗಳಿಂದಲೂ ರಾಜಕೀಯ ಇತಿಹಾಸ ಹೊಂದಿರುವ ಕೌಜಲಗಿ ಕುಟುಂಬವು ಕರ್ನಾಟಕ ರಾಜಕೀಯಕ್ಕೆ ನೀಡಿರುವ ಕೊಡುಗೆ ಅಪಾರವಾದದು. ಮೂರು ತಲೆಮಾರುಗಳಿಂದ ಈ ಮನೆತನ ರಾಜ್ಯದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೀಗಾಗಿ ಮುಂದಿನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ.
ಅಜ್ಜ ಹೆಚ್. ವಿ. ಕೌಜಲಗಿ: ಮಹಾಂತೇಶ್ ಕೌಜಲಗಿ ಅವರ ಅಜ್ಜ ಶ್ರೀಯುತ ಹೆಚ್. ವಿ. ಕೌಜಲಗಿ ಅವರು ಅಂದಿನ ಶ್ರೀ ಬಿ. ಡಿ. ಜತ್ತಿ ಅವರ ಸಚಿವ ಸಂಪುಟದಲ್ಲಿ ಅತ್ಯಂತ ಪ್ರಭಾವಿ ಕಂದಾಯ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ತಂದೆ ಶಿವಾನಂದ ಕೌಜಲಗಿ: ಇವರ ತಂದೆ ಶ್ರೀ ಶಿವಾನಂದ ಕೌಜಲಗಿ ಅವರು ಹೆಚ್. ಡಿ. ದೇವೇಗೌಡರ ಸಚಿವ ಸಂಪುಟದಲ್ಲಿ ಲೋಕೋಪಯೋಗಿ (PWD) ಸಚಿವರಾಗಿ ಕೆಲಸ ಮಾಡಿದವರು ಹಾಗೂ ಒಂದು ಬಾರಿ ಲೋಕಸಭಾ ಸದಸ್ಯರಾಗಿಯೂ (MP) ದಿಲ್ಲಿಯಲ್ಲಿ ಧ್ವನಿಯಾಗಿದ್ದರು.
Also Read: ಒಕ್ಕಲಿಗ ಕೋಟೆಗೆ ಲಗ್ಗೆ ಇಡ್ತಾರಾ ಡಿಕೆಶಿ? ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್-ಬಿಜೆಪಿಗೆ ನಡುಕ!
ಶಾಸಕ ಮಹಾಂತೇಶ್ ಕೌಜಲಗಿ: ಈಗ ಕೌಜಲಗಿ ಮನೆತನ ಮಹಾಂತೇಶ್ ಕೌಜಲಗಿ ಅವರು ಈಗಾಗಲೇ ನಾಲ್ಕು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ವಿಧಾನ ಪರಿಷತ್ (MLC) ಸದಸ್ಯರಾಗಿ ಆಯ್ಕೆಯಾದ ಹಿರಿಯ ಅನುಭವಿ ನಾಯಕ.
ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಹಾಂತೇಶ ಕೌಜಲಗಿ ಅವರು ಕ್ರಿಯಾಶೀಲ ನಾಯಕತ್ವ, ರಾಜಕೀಯ ಮಾತ್ರವಲ್ಲದೆ, ಉತ್ತರ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬೆಳಗಾವಿಯ ಕೆಎಲ್ಇ (KLE) ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಯಾವುದೇ ವಿವಾದಗಳಿಲ್ಲದೇ, ಉತ್ತಮ ಶಾಸಕರಾಗಿರುವ ಮಹಾಂತೇಶ್ ಕೌಜಲಗಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನೀಡಬೇಕು ಅನ್ನೋದು ರಾಜಕೀಯ ಪಂಡಿತರ ಲೆಕ್ಕಾಚಾರ.
ಬೆಳಗಾವಿ ಜಿಲ್ಲೆಯ ರಾಜಕೀಯ ಪ್ರಾತಿನಿದ್ಯದ ಸಮತೋಲನವನ್ನು ಕಾಯ್ದುಕೊಳ್ಳಲು ಹೈಕಮಾಂಡ್ ಈ ಬಾರಿ ಮಹಾಂತೇಶ್ ಕೌಜಲಗಿ ಅವರಿಗೆ ಸಚಿವ ಸ್ಥಾನ ನೀಡುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ.



