Vaibhav Sooryavanshi: 4,4,4,4,4,4 ಮೊದಲ ಪಂದ್ಯ ಪ್ಲಾಪ್‌, ಅಪ್ಘಾನ್‌ ವಿರುದ್ದ ವೈಭವ್ ಸೂರ್ಯವಂಶಿ ಅಬ್ಬರ

ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. ಕ್ರೀಸ್‌ ಕಚ್ಚಿ ನಿಲ್ಲಲು ಪರದಾಡಿ ಬೇಗನೆ ವಿಕೆಟ್ ಒಪ್ಪಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಆದರೆ, "ಬ್ಯಾಕ್ ಟು ಬ್ಯಾಕ್" ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಎ ತಂಡದ ವಿರುದ್ಧ ಕಣಕ್ಕಿಳಿದ ವೈಭವ್, ಆರಂಭದಲ್ಲೇ ಮೈದಾನದ ನಾಲ್ಕೂ ಮೂಲೆಗೂ ಬೌಂಡರಿ, ಸಿಕ್ಸರ್‌ಗಳ ಮಳೆ ಹರಿಸಿದರು.

ದಾಂಬುಲ: ಭಾರತೀಯ ಕ್ರಿಕೆಟ್ ಅಂಗಳದಲ್ಲಿ ಸದ್ಯ ಅತಿ ಹೆಚ್ಚು ಸದ್ದು ಮಾಡುತ್ತಿರುವ ಹೆಸರು ವೈಭವ್ ಸೂರ್ಯವಂಶಿ. ಅಫ್ಘಾನಿಸ್ತಾನ ಎ ತಂಡದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದ, ಆದರೆ 15 ವರ್ಷದ ಯುವ ಆಟಗಾರ ಎರಡನೇ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಆದ್ರೆ ಅರ್ಧ ಶತಕದ ಅಂಚಿನಲ್ಲಿ ಎಡವಿದ್ದಾನೆ.

ವೈಭವ್ ಸೂರ್ಯವಂಶಿ ರುದ್ರತಾಂಡವ

ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. ಕ್ರೀಸ್‌ ಕಚ್ಚಿ ನಿಲ್ಲಲು ಪರದಾಡಿ ಬೇಗನೆ ವಿಕೆಟ್ ಒಪ್ಪಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಆದರೆ, “ಬ್ಯಾಕ್ ಟು ಬ್ಯಾಕ್” ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಎ ತಂಡದ ವಿರುದ್ಧ ಕಣಕ್ಕಿಳಿದ ವೈಭವ್, ಆರಂಭದಲ್ಲೇ ಮೈದಾನದ ನಾಲ್ಕೂ ಮೂಲೆಗೂ ಬೌಂಡರಿ, ಸಿಕ್ಸರ್‌ಗಳ ಮಳೆ ಹರಿಸಿದರು.

ಇದನ್ನೂ ಓದಿ : RCB Mega Auction  : ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಆರ್‌ಸಿಬಿಯ ಮೆಗಾ ಪ್ಲಾನ್ !  IPL 2027 ವಿರಾಟ್ ಕೊಹ್ಲಿ ಜೊತೆ ಉಳಿಯುವ ಆಟಗಾರರು ಯಾರು?

ಬೌಲರ್‌ಗಳಿಗೆ ಆರಂಭದಲ್ಲಿ ನೆರವಾಗುತ್ತಿದ್ದ ದಾಂಬುಲಾ ಪಿಚ್‌ನಲ್ಲಿ ಕೇವಲ 22 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ, ಬರೋಬ್ಬರಿ 44 ರನ್ ಚಚ್ಚಿದರು. ಇದರಲ್ಲಿ ಅವರ ಸ್ಟ್ರೈಕ್ ರೇಟ್ 200 ರ ಗಡಿ ದಾಟಿತ್ತು. ಇವರ ಈ ಬಿರುಸಿನ ಆರಂಭವೇ ಭಾರತ 349 ರನ್‌ಗಳ ಬೃಹತ್ ಮೊತ್ತ ಪೇರಿಸಲು ಬಲವಾದ ಅಡಿಪಾಯ ಹಾಕಿಕೊಟ್ಟಿತು.

ಬ್ಯಾಟಿಂಗ್‌ನಲ್ಲಿ ವೈಭವ್ ಸೂರ್ಯವಂಶಿ ತಪ್ಪು ಮಾಡಿದ್ರಾ..?

ವೈಭವ್ ಸೂರ್ಯವಂಶಿ ಅತಿ ಆಕ್ರಮಣಕಾರಿ ಆಟಕ್ಕೆ ಕೈಹಾಕಿ ದೊಡ್ಡ ಇನಿಂಗ್ಸ್ ಆಡುವ ಸುವರ್ಣ ಅವಕಾಶವನ್ನು ಕೈಚೆಲ್ಲಿದರು. ಕ್ರೀಸ್‌ನಲ್ಲಿ ಸಂಪೂರ್ಣ ಸೆಟ್ ಆಗಿದ್ದ ವೈಭವ್, ಕೇವಲ 6 ರನ್‌ಗಳಿಂದ ಅರ್ಧಶತಕ ವಂಚಿತರಾದರು. ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಇವರಿಂದ ಕೇವಲ “ಕ್ವಿಕ್ ಸ್ಟಾರ್ಟ್” ಮಾತ್ರವಲ್ಲದೆ, ಪವರ್‌ಪ್ಲೇ ದಾಟಿ ದೊಡ್ಡ ಇನಿಂಗ್ಸ್ ಕಟ್ಟುವ ಜವಾಬ್ದಾರಿಯನ್ನು ನಿರೀಕ್ಷಿಸುತ್ತಿದೆ. ಇಷ್ಟು ಬೇಗ ವಿಕೆಟ್ ಒಪ್ಪಿಸಿದ್ದು ಅವರು ಮಾಡಿದ ದೊಡ್ಡ ತಪ್ಪಾಗಿದ್ದು, ಇದನ್ನು ಮುಂದಿನ ಪಂದ್ಯಗಳಲ್ಲಿ ತಿದ್ದಿಕೊಳ್ಳಬೇಕಿದೆ.

ಇದನ್ನೂ ಓದಿ : ಕೆ.ಎಲ್. ರಾಹುಲ್ – ವಿರಾಟ್ ಕೊಹ್ಲಿ ಫಾರ್ಮ್ ಕುರಿತು ಬಿಸಿಸಿಐ ಮಹತ್ವದ ನಿರ್ಧಾರ ? ಕನ್ನಡಿಗನ ಭವಿಷ್ಯ ಬದಲಿಸಲಿದೆಯೇ ಈ ಪ್ಲಾನ್?

ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಶೈಲಿಯೇ ಎದುರಾಳಿಗಳನ್ನು ನಡುಗಿಸುವಂತದ್ದು. ಮೊದಲ ಪಂದ್ಯದ ವೈಫಲ್ಯದ ಬಳಿಕ ಎರಡನೇ ಪಂದ್ಯದಲ್ಲಿ ಅವರು ಕಂಪ್ಲೀಟ್ ಫಾರ್ಮ್‌ಗೆ ಮರಳಿದ್ದಾರೆ. ಅವರ ಆತ್ಮವಿಶ್ವಾಸ ದುಪ್ಪಟ್ಟಾಗಿದ್ದು, ಮುಂದಿನ ಪಂದ್ಯಗಳಲ್ಲಿ ಅವರು ಕೇವಲ 40-50 ರನ್ ಮಾತ್ರವಲ್ಲದೆ ಬಿಗ್ ಸೆಂಚುರಿ ಬಾರಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಆರಂಭಿಕನಾಗಿ ತಂಡಕ್ಕೆ ವೇಗದ ಅಡಿಪಾಯ ಹಾಕಿಕೊಡುವ ಇವರ ಆರ್ಭಟ ಮುಂದಿನ ಪಂದ್ಯಗಳಲ್ಲೂ ಮುಂದುವರಿಯುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.

Vaibhav Sooryavanshi IndA vs AfgA Cricket News Kannada  India A Cricket Google Discover Trending

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories