Daily Horoscope : ಜೂನ್ 21 ರಂದು ಈ ರಾಶಿಯವರ ಲಕ್ ಬದಲಾಗೋದು ಗ್ಯಾರಂಟಿ! ಇಂದಿನ ಸಂಪೂರ್ಣ ರಾಶಿಫಲ ಇಲ್ಲಿದೆ
ಗ್ರಹಗತಿಗಳ ಮತ್ತು ನಕ್ಷತ್ರಗಳ ಬದಲಾವಣೆ ಇಂದಿನ ದಿನವು ದ್ವಾದಶ ರಾಶಿಗಳ ಮೇಲೆ ಮಹತ್ವದ ಪ್ರಭಾವ ಬೀರಲಿದೆ. ಜೊತೆಗೆ ಸೂರ್ಯನ ಸಂಚಾರದಿಂದಾಗಿ ಕೆಲವು ರಾಶಿಗಳಿಗೆ ಭಾಗ್ಯೋದಯವಾಗಲಿದೆ. ಉದ್ಯೋಗದಲ್ಲಿ ಬಡ್ತಿ, ಅನಿರೀಕ್ಷಿತ ಧನಲಾಭ ಹಾಗೂ ಅದೃಷ್ಟ ಒಲಿದುಬರಲಿದೆ. ಅಷ್ಟೇ ಅಲ್ಲದೇ ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿ ಇರಬೇಕಾಗಿದೆ.

ಇಂದಿನ ರಾಶಿ ಭವಿಷ್ಯ (Daily Horoscope 21 June 2026): ಇಂದು ಜೂನ್ 21, ಭಾನುವಾರ. ಗ್ರಹಗತಿಗಳ ಮತ್ತು ನಕ್ಷತ್ರಗಳ ಬದಲಾವಣೆ ಇಂದಿನ ದಿನವು ದ್ವಾದಶ ರಾಶಿಗಳ ಮೇಲೆ ಮಹತ್ವದ ಪ್ರಭಾವ ಬೀರಲಿದೆ. ಜೊತೆಗೆ ಸೂರ್ಯನ ಸಂಚಾರದಿಂದಾಗಿ ಕೆಲವು ರಾಶಿಗಳಿಗೆ ಭಾಗ್ಯೋದಯವಾಗಲಿದೆ. ಉದ್ಯೋಗದಲ್ಲಿ ಬಡ್ತಿ, ಅನಿರೀಕ್ಷಿತ ಧನಲಾಭ ಹಾಗೂ ಅದೃಷ್ಟ ಒಲಿದುಬರಲಿದೆ. ಅಷ್ಟೇ ಅಲ್ಲದೇ ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿ ಇರಬೇಕಾಗಿದೆ. ಹಾಗಾದರೆ ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಸಂಪೂರ್ಣ ದಿನ ಭವಿಷ್ಯ ಹೇಗಿದೆ? ಯಾರಿಗೆ ಲಾಭ? ಯಾರಿಗೆ ನಷ್ಟ? ಇಲ್ಲಿದೆ ಇಂದಿನ ರಾಶಿಫಲದ ಕಂಪ್ಲೀಟ್ ಡಿಟೇಲ್ಸ್
ಮೇಷ ರಾಶಿ (Aries)
ಮೇಷರಾಶಿಯವರ ಪಾಲಿಗೆ ಇಂದು ಅತ್ಯಂತ ಅದೃಷ್ಟದ ದಿನವಾಗಿದೆ. ಕಚೇರಿಯಲ್ಲಿ ನಿಮ್ಮ ಕಠಿಣ ಶ್ರಮಕ್ಕೆ ಮೇಲಾಧಿಕಾರಿಗಳಿಂದ ಪ್ರಶಂಸೆ ಹಾಗೂ ಗೌರವ ದೊರೆಯಲಿದೆ. ಸರ್ಕಾರಿ ನೌಕರರಿಗೆ ಇಂದು ಧನಲಾಭದ ಯೋಗವಿದೆ. ವ್ಯಾಪಾರಸ್ಥರು ಕೈಗೊಂಡ ಹೊಸ ಯೋಜನೆಗಳು ಲಾಭ ತರಲಿವೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದ್ದು, ಶುಭ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರಲಿದ್ದು, ಆರೋಗ್ಯ ಕೂಡ ಸುಧಾರಿಸಲಿದೆ. ಸೂರ್ಯ ದೇವನ ಆರಾಧನೆಯಿಂದ ಸಕಾರಾತ್ಮಕತೆ ಹೆಚ್ಚಾಗಲಿದೆ.
- ಅದೃಷ್ಟ ಬಣ್ಣ: ಕೆಂಪು
- ಅದೃಷ್ಟ ಸಂಖ್ಯೆ: 1, 9
ವೃಷಭ ರಾಶಿ (Taurus)
ವೃಷಭರಾಶಿಯವರಿಗೆ ಮಿಶ್ರಫಲವಾದರೂ ತಾಳ್ಮೆಯಿಂದ ಇರುವುದು ಬಹಳ ಮುಖ್ಯ. ಭವಿಷ್ಯದ ಬಗ್ಗೆ ಅತಿಯಾಗಿ ಯೋಚಿಸದೆ, ಯಾರಿಗೂ ತರಾತುರಿಯಲ್ಲಿ ಭರವಸೆ ನೀಡಬೇಡಿ. ರಾಜಕೀಯ ಕ್ಷೇತ್ರದಲ್ಲಿರುವವರು ಮಾತಿನ ಮೇಲೆ ನಿಗಾ ಇಡದಿದ್ದರೆ ಅನಗತ್ಯ ವಿವಾದಕ್ಕೆ ಸಿಲುಕಬಹುದು. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮದ ಅಗತ್ಯವಿದೆ. ಆಸ್ತಿ ಖರೀದಿಯ ಯೋಗವಿದ್ದು, ವಾಹನ ಖರೀದಿಯ ಯೋಗ ಇಂದು ನನಸಾಗಲಿದೆ. ಕುಟುಂಬದ ಸದಸ್ಯರ ಆರೋಗ್ಯದ ಕಡೆಗೆ ವಿಶೇಷ ಗಮನ ನೀಡಿ.
- ಅದೃಷ್ಟ ಬಣ್ಣ: ಬಿಳಿ
- ಅದೃಷ್ಟ ಸಂಖ್ಯೆ: 2, 6
ಮಿಥುನ ರಾಶಿ (Gemini)
ವ್ಯವಹಾರದ ವಿಚಾರದಲ್ಲಿ ಇಂದು ಜಾಗರೂಕರಾಗಿ ಇದ್ದಷ್ಟು ಒಳಿತು. ನಂಬಿಕಸ್ಥರಿಂದಲೇ ದ್ರೋಹವಾಗುವ ಸಾಧ್ಯತೆ ಇರುವುದರಿಂದ ಹಣಕಾಸಿನ ವಿಚಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಹಲವು ಸಮಸ್ಯೆಗಳಿಂದ ಪಾರಾಗಬಹುದು. ಸಂಜೆ ವೇಳೆಗೆ ಹಳೆಯ ಸ್ನೇಹಿತರನ್ನು ಭೇಟಿಯಾಗುವ ಯೋಗವಿದೆ.
- ಅದೃಷ್ಟ ಬಣ್ಣ: ಹಸಿರು
- ಅದೃಷ್ಟ ಸಂಖ್ಯೆ: 5, 7
ಕರ್ಕಾಟಕ ರಾಶಿ (Cancer)
ಕೆಲಸದ ಒತ್ತಡದ ಹೆಚ್ಚಳದಿಂದ ಆತಂಕ. ನಿಗದಿತ ಸಮಯಕ್ಕೆ ಕೆಲಸ ಮುಗಿಸಲು ಹರಸಾಹಸ . ಹಳೆಯ ಸಾಲಗಳನ್ನು ಮರುಪಾವತಿ ಮಾಡಲು ಇದು ಸೂಕ್ತ ಸಮಯ. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುವುದರಿಂದ ಕಾಳಜಿ ವಹಿಸಿ. ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕುವುದು ನಿಮ್ಮ ಆರ್ಥಿಕ ಸ್ಥಿತಿಗೆ ಒಳಿತು. ನೆನಪಿಡಿ, ಧನಾತ್ಮಕ ಚಿಂತನೆ ಹಾಗೂ ಕಠಿಣ ಪರಿಶ್ರಮ ಮಾತ್ರ ನಿಮ್ಮನ್ನು ಇಂದು ಯಶಸ್ಸಿನತ್ತ ಮುನ್ನಡೆಸಬಲ್ಲದು.
- ಅದೃಷ್ಟ ಬಣ್ಣ: ಮುತ್ತಿನ ಬಿಳಿ
- ಅದೃಷ್ಟ ಸಂಖ್ಯೆ: 4, 8
ಸಿಂಹ ರಾಶಿ (Leo)
ನಿಮ್ಮ ಪಾಲಿಗೆ ಇಂದು ಉತ್ತಮ ದಿನ. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಆಸ್ತಿ ಖರೀದಿ ಪ್ರಕ್ರಿಯೆಗೆ ಇಂದು ವೇಗ ಸಿಗಲಿದೆ. ಬಂಧು-ಮಿತ್ರರಿಂದ ಶುಭ ಸುದ್ದಿಯನ್ನು ಕೇಳಲಿದ್ದೀರಿ. ವಾಹನ ರಿಪೇರಿಗಾಗಿ ಅನಿರೀಕ್ಷಿತವಾಗಿ ಸ್ವಲ್ಪ ಹಣ ಖರ್ಚಾಗಬಹುದು. ಚಂದ್ರನ ಶುಭ ಸಂಚಾರದಿಂದಾಗಿ ವ್ಯಾಪಾರದಲ್ಲಿ ಹೊಸ ಹೂಡಿಕೆಗೆ ಉತ್ತಮ ದಿನವಾಗಿದೆ. ಸಂಗಾತಿಯೊಂದಿಗೆ ಆನಂದದಾಯಕ ಸಮಯವನ್ನು ಕಳೆಯಲಿದ್ದೀರಿ. ಸಮಾಜದಲ್ಲಿ ನಿಮ್ಮ ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ.
- ಅದೃಷ್ಟ ಬಣ್ಣ: ಚಿನ್ನದ ಬಣ್ಣ
- ಅದೃಷ್ಟ ಸಂಖ್ಯೆ: 1, 5
ಕನ್ಯಾ ರಾಶಿ (Virgo)
ಸ್ವತಃ ಉದ್ಯಮದಲ್ಲಿ ಪ್ರಗತಿ, ನಿರೀಕ್ಷಿತ ಧನಲಾಭ. ನೀವು ಕೈ ಹಾಕುವ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿದೆ. ಆದರೆ, ಕಚೇರಿಯಲ್ಲಿ ನಿಮ್ಮ ದುಡುಕು ಮಾತುಗಳಿಂದ ಸಹೋದ್ಯೋಗಿಗಳೊಂದಿಗೆ ಸಂಕಷ್ಟ ತಂದುಕೊಳ್ಳಬೇಡಿ. ಮಾತನಾಡುವ ಮುನ್ನ ಯೋಚಿಸುವುದು ಒಳಿತು. ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬರಲಿದೆ. ಹಳೆಯ ಹೂಡಿಕೆಗಳಿಂದ ಇಂದು ಉತ್ತಮ ಲಾಭಾಂಶ ನಿಮ್ಮ ಕೈ ಸೇರಲಿದ್ದು, ಆರ್ಥಿಕ ನೆಮ್ಮದಿ ತರಲಿದೆ.
- ಅದೃಷ್ಟ ಬಣ್ಣ: ಗಾಢ ಹಸಿರು
- ಅದೃಷ್ಟ ಸಂಖ್ಯೆ: 3, 6
ತುಲಾ ರಾಶಿ (Libra)
ಸ್ನೇಹಿತರಿಂದ ಅನಿರೀಕ್ಷಿತ ಧನಲಾಭ. ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದವರಿಗೆ ಇಂದು ಪರಿಹಾರ ಸಿಗಲಿದೆ. ಹೊಸ ನಿವೇಶನ ಅಥವಾ ಮನೆ ಖರೀದಿಸಲು ನೀವು ಮಾಡುತ್ತಿರುವ ಪ್ರಯತ್ನಗಳಿಗೆ ಸಕಾರಾತ್ಮಕ ಫಲಿತಾಂಶ ಸಿಗಲಿದೆ. ಸಹೋದರರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು, ಜಾಣ್ಮೆಯಿಂದ ಬಗೆಹರಿಸಿಕೊಳ್ಳಿ. ಪ್ರೇಮಿಗಳಿಗೆ ಇಂದು ಮಧುರವಾದ ದಿನವಾಗಿದ್ದು, ಪ್ರೇಮ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಲಿವೆ. ಆರೋಗ್ಯ ಉತ್ತಮವಾಗಿರುತ್ತದೆ.
- ಅದೃಷ್ಟ ಬಣ್ಣ: ಹಗುರ ನೀಲಿ
- ಅದೃಷ್ಟ ಸಂಖ್ಯೆ: 2, 7
ವೃಶ್ಚಿಕ ರಾಶಿ (Scorpio)
ವ್ಯಾಪಾರ, ವ್ಯವಹಾರ, ವಿಶೇಷವಾಗಿ ಆಭರಣ ವ್ಯಾಪಾರಿಗಳಿಗೆ ಬಂಪರ್ ಲಾಭ ಕಾದಿದೆ. ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಅನಿರೀಕ್ಷಿತ ಪ್ರಶಂಸೆ ಹಾಗೂ ಬಡ್ತಿ ಸಿಗುವ ಮುನ್ಸೂಚನೆ ಇದೆ. ಸ್ನೇಹಿತರ ಮತ್ತು ಹಿತೈಷಿಗಳ ಸಹಾಯದಿಂದ ದೀರ್ಘಕಾಲದ ಸಮಸ್ಯೆಗಳು ಸುಲಭವಾಗಿ ಬಗೆಹರಿಯಲಿವೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮೂಡಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಲು ಇದು ಅತ್ಯಂತ ಸೂಕ್ತ ದಿನವಾಗಿದೆ.
- ಅದೃಷ್ಟ ಬಣ್ಣ: ಕೆಂಪು
- ಅದೃಷ್ಟ ಸಂಖ್ಯೆ: 4, 9
Also Read : ಮುದ್ರಣ ಶಾಹಿಯಿಂದ ಕ್ಯಾನ್ಸರ್ ಅಪಾಯ..ಇನ್ಮುಂದೆ ತಿಂಡಿ ಜೊತೆ ಪೇಪರ್ ಬಳಕೆ ನಿಷೇಧ!
ಧನುಸ್ಸು ರಾಶಿ (Sagittarius)
ನೀವು ಇಂದು ಜಾಣ್ಮೆಯಿಂದ ನಡೆಯಬೇಕಾದ ದಿನ. ಕೌಟುಂಬಿಕ ವಿಚಾರದಲ್ಲಿ ಹಿರಿಯರೊಂದಿಗೆ ವಾಗ್ವಾದ ಅಥವಾ ಮಾತಿನ ಸಮರ ನಡೆಯುವ ಸಾಧ್ಯತೆ ಇದೆ, ತಾಳ್ಮೆ ಕಳೆದುಕೊಳ್ಳಬೇಡಿ. ಕಚೇರಿಯಲ್ಲಿ ಹಿತಶತ್ರುಗಳ ಕಾಟ ಹೆಚ್ಚಾಗಲಿದ್ದು, ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಆದರೆ, ನಿಮ್ಮ ಚತುರ ನಡೆ ಹಾಗೂ ಬುದ್ಧಿವಂತಿಕೆಯಿಂದ ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಆರೋಗ್ಯದ ಬಗ್ಗೆ ಅಸಡ್ಡೆ ತೋರಬೇಡಿ, ಸೂಕ್ತ ವಿಶ್ರಾಂತಿ ಪಡೆಯುವುದು ಅಗತ್ಯ.
- ಅದೃಷ್ಟ ಬಣ್ಣ: ಹಳದಿ
- ಅದೃಷ್ಟ ಸಂಖ್ಯೆ: 3, 5
ಮಕರ ರಾಶಿ (Capricorn)
ಚಂದ್ರನ ಕೃಪೆಯಿಂದಾಗಿ ಇದು ಅತ್ಯಂತ ಉತ್ಪಾದಕ ದಿನವಾಗಲಿದೆ. ನಿಮ್ಮ ಕಠಿಣ ಪ್ರಯತ್ನಕ್ಕೆ ತಕ್ಕ ಶ್ರೇಷ್ಠ ಫಲಿತಾಂಶ ಲಭಿಸಲಿದೆ. ಸರ್ಕಾರಿ ನೌಕರರಿಗೆ ಇಷ್ಟವಿಲ್ಲದ ಕಡೆಗೆ ವರ್ಗಾವಣೆಯ ಭೀತಿ ಎದುರಾಗಬಹುದು. ಲೇವಾದೇವಿ ವ್ಯವಹಾರ ಮಾಡುವವರು ಇಂದು ಜಾಗರೂಕರಾಗಿರಿ, ನಷ್ಟದ ಸಂಭವವಿದೆ. ಉದ್ಯೋಗಾಕಾಂಕ್ಷಿಗಳಿಗೆ ಸ್ನೇಹಿತರ ಸಹಾಯದಿಂದ ಉತ್ತಮ ಕೆಲಸದ ಅವಕಾಶ ಸಿಗಲಿದೆ. ಸಂಗಾತಿಯೊಂದಿಗೆ ಸುಂದರ ರೋಮ್ಯಾಂಟಿಕ್ ಕ್ಷಣಗಳನ್ನು ಕಳೆಯುವಿರಿ.
- ಅದೃಷ್ಟ ಬಣ್ಣ: ನೀಲಿ
- ಅದೃಷ್ಟ ಸಂಖ್ಯೆ: 8, 0
Also Read : ಎಲ್‌ಪಿಜಿ ಸಬ್ಸಿಡಿಗೆ ಹೊಸ ಗಡುವು! ಜೂನ್ 30ರೊಳಗೆ ಈ ಕೆಲಸ ಮಾಡದಿದ್ರೆ ಸಬ್ಸಿಡಿ ಸಿಗಲ್ಲ
ಕುಂಭ ರಾಶಿ (Aquarius)
ಆರ್ಥಿಕವಾಗಿ ಭದ್ರತೆ ಸಿಗುವ ದಿನ. ಭವಿಷ್ಯದ ದೃಷ್ಟಿಯಿಂದ ಉತ್ತಮ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಲು ಮುಂದಾಗುವಿರಿ. ಕಚೇರಿಯಲ್ಲಿ ಇತರರ ಕೆಲಸಗಳಿಗಿಂತ ಹೆಚ್ಚಾಗಿ ನಿಮ್ಮ ಸ್ವಂತ ಜವಾಬ್ದಾರಿಗಳಿಗೆ ಆದ್ಯತೆ ನೀಡಿ. ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆಗಳು ಹೆಗಲೇರಬಹುದು, ಅದನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ವ್ಯಾಪಾರದಲ್ಲಿ ಲಾಭದ ಪ್ರಮಾಣ ಹೆಚ್ಚಾಗಲಿದೆ. ಮನೆಯಲ್ಲಿ ಮಕ್ಕಳ ಸಾಧನೆ ನಿಮಗೆ ಅಪಾರ ಸಂತೋಷವನ್ನು ನೀಡುತ್ತದೆ.
- ಅದೃಷ್ಟ ಬಣ್ಣ: ಆಕಾಶ ನೀಲಿ
- ಅದೃಷ್ಟ ಸಂಖ್ಯೆ: 1, 8
ಮೀನ ರಾಶಿ (Pisces)
ಅತಿಯಾದ ಆತ್ಮವಿಶ್ವಾಸದಿಂದ ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಸಣ್ಣ ಸಣ್ಣ ಯೋಜನೆಗಳನ್ನು ರೂಪಿಸಿ ಕೆಲಸ ಮಾಡುವುದರಿಂದ ನಿರೀಕ್ಷಿತ ಯಶಸ್ಸು ಸಿಗಲಿದೆ. ಹೊಸ ವಾಹನ ಅಥವಾ ಆಸ್ತಿ ಖರೀದಿಸಲು ಬಯಸುವವರಿಗೆ ಇಂದು ಆರ್ಥಿಕ ಅಡಚಣೆಗಳು ಎದುರಾಗಬಹುದು. ಆದಾಯವನ್ನು ಹೆಚ್ಚಿಸಲು ಹೊಸ ಆಯ್ಕೆಗಳನ್ನು ಹುಡುಕುವುದು ಒಳಿತು. ಹಳೆಯ ಆರೋಗ್ಯ ಸಮಸ್ಯೆಗಳು ಮರುಕಳಿಸದಂತೆ ಎಚ್ಚರ ವಹಿಸಿ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ ಸಿಗಲಿದೆ.
- ಅದೃಷ್ಟ ಬಣ್ಣ: ಹಳದಿ
- ಅದೃಷ್ಟ ಸಂಖ್ಯೆ: 3, 7



