ಕಟಕ ರಾಶಿಯಲ್ಲಿ ಅಪರೂಪದ ಸರಸ್ವತಿ ರಾಜಯೋಗ 2026 : ಮೇಷ ಸೇರಿ ಈ 4 ರಾಶಿಯವರಿಗೆ ಸಿಗಲಿದೆ ವಿದ್ಯಾಧಿದೇವತೆಯ ವರದಾನ

ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪರೂಪದ ಯೋಗ ಎನಿಸಿರುವ ಸರಸ್ವತಿ ರಾಜಯೋಗವು ಕಟಕ ರಾಶಿಯಲ್ಲಿ ರೂಪುಗೊಳ್ಳಲಿದೆ. ಶಕ್ತಿಶಾಲಿ ರಾಜಯೋಗದ ಪ್ರಭಾವು 4 ರಾಶಿಯವರ ಮೇಲೆ ಉಂಟಾಗಲಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಗ್ರಹಗಳ ಸಂಯೋಜನೆ ಅತ್ಯಂತ ಶಕ್ತಿಶಾಲಿ ಮತ್ತು ಅಪರೂಪದ ಯೋಗಗಳನ್ನು ಸೃಷ್ಟಿಸುತ್ತದೆ. ಅಂತಹ ಅಪರೂಪದ ಯೋಗಗಳಲ್ಲಿ ಸರಸ್ವತಿ ರಾಜಯೋಗವು ಒಂದು. ಇದೊಂದು ಅಪರೂಪದಲ್ಲೇ ಅಪರೂಪ ಯೋಗ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳತ್ತದೆ. ಈ ಯೋಗ ಹೊಂದಿರುವ ಜಾತಕದವರು ತಮ್ಮ ಜೀವನದಲ್ಲಿ ಅಪಾರ ಜ್ಞಾನ, ಯಶಸ್ಸು ಮತ್ತು ಗೌರವವನ್ನು ಸಂಪಾದಿಸುತ್ತಾರೆ. ಇದರ ಶುಭ ಪ್ರಭಾವದಿಂದ ಪ್ರಗತಿ ಮತ್ತು ಯಶಸ್ಸಿನ ಹೊಸ ಮಾರ್ಗಗಳು ಅವರಿಗೆ ಸಿಗುತ್ತವೆ. ಶಿಕ್ಷಣ, ವೃತ್ತಿ ಅಥವಾ ವ್ಯವಹಾರದಲ್ಲಿ ಜಾಣ್ಮೆ ತೋರಿ ಸಾಧನೆ ಮಾಡುತ್ತಾರೆ. ಇಂತಹ ಅಪರೂಪದ ರಾಜಯೋಗವು ಈ ಬಾರಿ ಕಟಕ ರಾಶಿಯಲ್ಲಿ ರೂಪುಗೊಳ್ಳುತ್ತಿದೆ. ಇಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದೆಡೆ ಸೇರಿ ಸರಸ್ವತಿ ರಾಜಯೋಗ ಸೃಷ್ಟಿಸುತ್ತಿವೆ. ಸಂಪತ್ತು, ಸಮೃದ್ಧಿ ಮತ್ತು ಪ್ರೀತಿಯ ಕಾರಕನಾದ ಶುಕ್ರ, ದೇವತೆಗಳು ಗುರು ಬ್ರಹಸ್ಪತಿ ಹಾಗೂ ರಾಜಕುಮಾರನಾದ ಬುಧರ ಸಂಯೋಗವೇ ಇದಕ್ಕೆ ಕಾರಣವಾಗಿದೆ. ಸರಸ್ವತಿ ರಾಜಯೋಗವು ಕಟಕ ರಾಶಿಯಲ್ಲಿ ಇಂದು ರೂಪುಗೊಳ್ಳಲಿದೆ. ಅತ್ಯಂತ ಶಕ್ತಿಶಾಲಿ ರಾಜಯೋಗದ ಪರಿಣಾಮ ಜುಲೈ 4 ರವರೆಗೆ ಇರಲಿದೆ. ಇದರಿಂದ ಅನೇಕ ರಾಶಿಯವರಿಗೆ ವಿದ್ಯಾಧಿದೇವತೆಯ ಕೃಪಾಕಟಾಕ್ಷ ಒಲಿದು ಬರಲಿದೆ.

ಸರಸ್ವತಿ ರಾಜಯೋಗ ರೂಪುಗೊಳ್ಳುವುದು ಹೇಗೆ?

ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪರೂಪ ಎನ್ನಲಾದ ಸರಸ್ವತಿ ರಾಜಯೋಗವು ಗುರು, ಬುಧ ಮತ್ತು ಶುಕ್ರರು ಜಾತಕದ ಕೇಂದ್ರ ಅಥವಾ ತ್ರಿಕೋನ ಮನೆಯಲ್ಲಿ ಬಲವಾದ ಸ್ಥಾನದಲ್ಲಿ ಒಟ್ಟಿಗೆ ಇದ್ದಾಗ ರೂಪುಗೊಳ್ಳುತ್ತದೆ. ಗುರುವು ಉತ್ತುಂಗದಲ್ಲಿದ್ದಾಗ ಅಥವಾ ತನ್ನದೇ ಆದ ರಾಶಿಯಲ್ಲಿದ್ದಾಗ ಈ ರಾಜಯೋಗವು ವಿಶೇಷವಾಗಿ ಶಕ್ತಿಶಾಲಿಯಾಗಿರುತ್ತದೆ. ಈ ರಾಜಯೋಗವು ನಾಲ್ಕು ರಾಶಿಗಳಿಗೆ ವಿಶೇಷ ಪ್ರಯೋಜನಗಳನ್ನು ತರಲಿದೆ.

ಮೇಷ ರಾಶಿ

ಸರಸ್ವತಿ ರಾಜಯೋಗವು ಮೇಷ ರಾಶಿಯವರಿಗೆ ಸೌಕರ್ಯ ಮತ್ತು ಐಷಾರಾಮಿ ಜೀವನ ತರುತ್ತದೆ. ಹಳೆಯ ಹೂಡಿಕೆಗಳು ಲಾಭವನ್ನು ತರಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆಯಾಗುವ ಸಾಧ್ಯತೆಯಿದೆ. ಪೂರ್ವಜರ ವಿಷಯಗಳಲ್ಲಿಯೂ ಪರಿಹಾರ ಸಿಗಬಹುದು.

ಮಿಥುನ ರಾಶಿ

ಈ ರಾಜಯೋಗದ ಸಮಯವು ಮಾಧ್ಯಮ, ಮಾರ್ಕೆಟಿಂಗ್, ಶಿಕ್ಷಣ ಮತ್ತು ಕಾನೂನು ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಭಾರಿ ಲಾಭ ವಾಗಲಿದೆ. ಎಲ್ಲೊ ಸಿಲುಕಿಕೊಂಡಿರುವ ನಿಮ್ಮ ಹಣ ತಿರುಗಿ ನಿಮ್ಮ ಕೈ ಸೇರುವ ಸಾಧ್ಯತೆಯಿಂದ. ಗಳಿಕೆಯ ಹೊಸ ಮಾರ್ಗಗಳು ತೆರೆದುಕೊಳ್ಳಲಿದೆ.

ಇದನ್ನೂ ಓದಿ: ಮನೆಯ ಮುಖ್ಯ ದ್ವಾರದ ಬಳಿ ಯಾವ ಗಿಡಗಳನ್ನು ನೆಡುವುದು ಶುಭ ಮತ್ತು ಅಶುಭ? ವಾಸ್ತು ನಿಯಮ ತಿಳಿದು ಗಿಡ ಬೆಳೆಸಿ

ಕಟಕ ರಾಶಿ

ಸಂಯೋಗವು ಈ ರಾಶಿಯಲ್ಲೇ ಉಂಟಾಗುವುದರಿಂದ ಈ ರಾಶಿಯವರಿಗೆ ಇದು ಉತ್ತಮ ಸಮಯವಾಗಿರುತ್ತದೆ. ವೃತ್ತಿಜೀವನದಲ್ಲಿ ಪ್ರಗತಿ, ಮೆಚ್ಚುಗೆ ಗಳಿಸುತ್ತೀರಿ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಅಪೂರ್ಣವಾಗಿರುವ ಕೆಲಸಗಳು ಪೂರ್ಣಗೊಳ್ಳಬಹುದು. ಉದ್ಯಮಿಗಳು ಲಾಭ ಗಳಿಸುತ್ತಾರೆ.

ಮೀನ ರಾಶಿ

ಮೀನ ರಾಶಿಯವರ ಅದೃಷ್ಟ ತುಂಬಾ ಚೆನ್ನಾಗಿರುತ್ತದೆ. ಆರ್ಥಿಕ ಲಾಭದ ಜೊತೆಗೆ ಸಮಾಜದಲ್ಲಿ ಗೌರವವೂ ಹೆಚ್ಚಾಗುತ್ತದೆ. ಹೊಸ ಉದ್ಯೋಗಾವಕಾಶ ಸಾಧ್ಯ. ವ್ಯಾಪಾರದಲ್ಲಿ ಲಾಭ ನಿರೀಕ್ಷಿಸಬಹುದು. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories